newsfirstkannada.com

ಎಷ್ಟೇ ಕೋಟಿ ಖರ್ಚಾದ್ರೂ 5 ಗ್ಯಾರಂಟಿ ಅನುಷ್ಠಾನ ಮಾಡೇ ಮಾಡ್ತೀವಿ- ಬಿಜೆಪಿಗೆ ಸಿಎಂ ಸಿದ್ದು ಕೌಂಟರ್​

Share :

Published May 20, 2023 at 12:05pm

    'ಎಷ್ಟೇ ಕೋಟಿ ಖರ್ಚಾದ್ರೂ 5 ಗ್ಯಾರಂಟಿ ಅನುಷ್ಠಾನ ಮಾಡೇ ಮಾಡ್ತೀವಿ'

    ಸುದ್ದಿಗೋಷ್ಠಿಯಲ್ಲಿ ಬಿಜೆಪಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಕೌಂಟರ್​

    ಕಾಂಗ್ರೆಸ್​ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲ್ಲ ಎನ್ನುತ್ತಿದ್ದ ಬಿಜೆಪಿ ವಿರುದ್ಧ ಕಿಡಿ

ಬೆಂಗಳೂರು: ಎಷ್ಟೇ ಕೋಟಿ ಖರ್ಚಾದ್ರೂ 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡೇ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್​ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲ್ಲ ಎಂದು ಟೀಕಿಸುತ್ತಿದ್ದ ಬಿಜೆಪಿ ಕೌಂಟರ್​​​ ಕೊಟ್ಟರು.

ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಈ ಗ್ಯಾರಂಟಿಗಳ ಜಾರಿಗೆ ಮೊದಲ ಸಂಪುಟ ಸಭೆಯಲ್ಲಿಯೇ ಒಪ್ಪಿಗೆ ಪಡೆದುಕೊಂಡಿದ್ದೇವೆ. ಇದಕ್ಕಾಗಿ ಸುಮಾರು 50 ಸಾವಿರ ಕೋಟಿ ಹಣ ಆಗಲಿದೆ. ಬಿಜೆಪಿಗರು ರಾಜ್ಯ ಆರ್ಥಿಕ ದಿವಾಳಿ ಆಗಲಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದರು.

ಮುಂದಿನ ಕ್ಯಾಬಿನೇಟ್​ ಮೀಟಿಂಗ್​ ಮುಂದಿನ ವಾರವೇ ನಡೆಯಲಿದೆ. ಎಲ್ಲವೂ ಪಾರದರ್ಶಕವಾಗಿ ಇರಬೇಕು. ಹೀಗಾಗಿ ಆರ್ಥಿಕ ವಿಚಾರಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಬೇಕು. ಯಾರೇ ಏನೇ ಹೇಳಿದ್ರೂ ನಾವು ಮಾಡೇ ಮಾಡ್ತೀವಿ. ಮುಂದಿನ ತಿಂಗಳಿನಿಂದಲೇ ಎಲ್ಲವೂ ಜಾರಿ ಆಗಬಹುದು ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಷ್ಟೇ ಕೋಟಿ ಖರ್ಚಾದ್ರೂ 5 ಗ್ಯಾರಂಟಿ ಅನುಷ್ಠಾನ ಮಾಡೇ ಮಾಡ್ತೀವಿ- ಬಿಜೆಪಿಗೆ ಸಿಎಂ ಸಿದ್ದು ಕೌಂಟರ್​

https://newsfirstlive.com/wp-content/uploads/2023/05/siddu-7.jpg

Load More