newsfirstkannada.com

Share :

03-06-2023

    ಕನ್ನಡ ಸಿನಿಮಾ ಇಂಡಸ್ಟ್ರಿಗೆ ಗುಡ್​ ಬೈ ಹೇಳಿದ್ರಾ ಜೆಕೆ

    ಕಿಚ್ಚ ಸುದೀಪ್​ ಆಪ್ತ ಜೆಕೆ ಹೀಗೆ ಮಾಡಲು ಕಾರಣವೇನು?

    ಅಷ್ಟಕ್ಕೂ ಜೆಕೆ ಅವರು ಈ ನಿರ್ಧಾರ ಎಷ್ಟು ಸರಿ?

ಅಶ್ವಿನಿ ನಕ್ಷತ್ರ ಹಾಗೂ ಬಿಗ್​ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಮನೆ ಮಾತಾದ ಕಿರುತೆರೆಯ ಸೂಪರ್ ಸ್ಟಾರ್ ಜೆಕೆ ಅವರು ಚಿತ್ರರಂಗದ ಬಗ್ಗೆ ಅಸಮದಾನ ಹೊರ ಹಾಕಿದ್ದಾರೆ. ನನಗೆ ಚಿತ್ರರಂಗದ ಸಹವಾಸವೆ ಬೇಡ ಎಂದು ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಗುಡ್​​ ಬೈ ಹೇಳಿದ್ದಾರೆ.

ನನ್ನ ಮೊದಲ ಸೀರಿಯಲ್‌ನಿಂದಲೇ ಜನ ಪ್ರೀತಿಸಲು ಶುರು ಮಾಡಿದ್ದರು. ಜೊತೆಗೆ ನನ್ನ ನಟನೆಯನ್ನ ಒಪ್ಪಿಕೊಂಡರು. ನಾನು ಕನ್ನಡ ಭಾಷೆಯನ್ನು ಬಹುವಾಗಿ ಪ್ರೀತಿಸುತ್ತೇನೆ. ನನ್ನ ವಿರುದ್ಧ ಕೆಲವ್ರು ಷಡ್ಯಂತ್ರ ಮಾಡ್ತಿದ್ದಾರೆ. ನನ್ನ ಏಳಿಗೆಯನ್ನ ಸಹಿಸುತ್ತಿಲ್ಲ. ನನ್ನ ಪಾಲಿನ ಅವಕಾಶವನ್ನ ಅವರು ಕಿತ್ತುಕೊಳ್ತಾ ಇದ್ದಾರೆ. ನಾನು ಆಯ್ಕೆಯಾಗಿರುವ ಸಿನಿಮಾ ತಂಡದ ಹತ್ತಿರ ಮಾತನಾಡಿ ನನ್ನ ಪಾಲಿನ ಅವಕಾಶ ಮಿಸ್ ಮಾಡ್ತಿದ್ದಾರೆ ಅಂತ ಬೇಸರ ಹೊರಹಾಕಿದ್ದಾರೆ.

ಇನ್ನು ಮಾತನ್ನು ಮುಂದುವರೆಸಿದ ನಟ, ಹಿಂದಿ ಧಾರಾವಾಹಿ ಮಾಡುತ್ತಿದ್ದೆ ಒಳ್ಳೆಯ ಹೆಸರುಗಳಿಸಿಕೊಂಡಿದ್ದೆ. ಹಿಂದಿ ಸಿನಿಮಾ ಒಂದರ ಹಿಂದೆ ಮತ್ತೊಂದು ಅವಕಾಶ ಸಹ ನನಗೆ ದೊರಕಿತ್ತು. ಚಿತ್ರೀಕರಣ ಪ್ರಾರಂಭವಾಗಬೇಕು ಎಂಬ ಅನ್ನೋವಷ್ಟರಲ್ಲಿ ಆ ಅವಕಾಶವನ್ನ ತಪ್ಪಿದ್ದರು. ನನಗೆ ನೇರವಾಗಿ ಸವಾಲು ಹಾಕಿ 2022ರ ವೇಳೆಗೆ ಇಂಡಸ್ಟ್ರಿ ಬಿಡುಸುತ್ತೇವೆ ಎಂದರು ಅವಾಜ್ ಹಾಕಿದ್ದಾರೆ. ಆದರೆ ಕೆಲವರಿಗೆ ನಾನಿಲ್ಲಿ ಇರುವುದು ಇಷ್ಟವಿಲ್ಲ ಹಾಗಾಗಿ ನಾನು ಹೋಗುತ್ತಿದ್ದೇನೆ ಎಂದು ಜೆಕೆ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More