ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ನಕಾರ
ಅಕ್ಕಿ ಹೊಂದಿಸುವಲ್ಲಿ ಸುಸ್ತಾದ ಸಿದ್ದು ಸರ್ಕಾರ
FCI ರಾಜ್ಯ ಸರ್ಕಾರಕ್ಕೆ ಕೊಟ್ಟ ಸ್ಪಷ್ಟನೆಯಲ್ಲಿ ಏನಿದೆ?
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬಡವರಿಗಾಗಿ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ಕೊಟ್ಟ ಮಾತಿನಂತೆ ಯೋಜನೆಯ ಜಾರಿಗಾಗಿ ಕಸರತ್ತು ನಡೆಸುತ್ತಿದ್ದು, ಆದರೆ ಅಕ್ಕಿ ಹೊಂದಿಸೋದೇ ದೊಡ್ಡ ತಲೆನೋವು ಆಗಿದೆ.
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಮೊದಲು ಹೆಚ್ಚುವರಿ ಅಕ್ಕಿ ಕೊಡ್ತೀನಿ ಎಂದು ಈಗ ಕೊಡಲು ಆಗುವುದಿಲ್ಲ ಎಂದಿರೋದು ಸಿದ್ದರಾಮಯ್ಯ ಸರ್ಕಾರದ ತಲೆನೋವಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಸಿದ್ದರಾಮಯ್ಯ ಜೊತೆಯಲ್ಲಿ ದೆಹಲಿಗೆ ಹಾರಿದ್ದ ಕೆ.ಹೆಚ್.ಮುನಿಯಪ್ಪ ಇವತ್ತು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅಕ್ಕಿಯನ್ನು ಕೊಡಲು ಆಗುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದಾರೆ ಅಂತಾ ಮುನಿಯಪ್ಪ ಹೇಳಿದ್ದಾರೆ.
ಇದೀಗ ನ್ಯೂಸ್ಫಸ್ಟ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಮುನಿಯಪ್ಪ ಮತ್ತು ಗೋಯಲ್ ನಡುವೆ ಕೆಲವು ಮಹತ್ವದ ಮಾತುಕತೆಗಳು ನಡೆದಿವೆ. ಅಕ್ಕಿ ಪೂರೈಕೆಯ ನೀತಿಯನ್ನು ಬದಲಾಯಿಸಲು ರಾಜ್ಯ ಸರ್ಕಾರ ಒತ್ತಾಯ ಮಾಡಿದೆ. ಆದರೆ ಕೇಂದ್ರ ತನ್ನ ನೀತಿಯನ್ನು ಬದಲಿಸುವ ಸಾಧ್ಯತೆ ಇಲ್ಲ. ಯಾಕಂದ್ರೆ ಕರ್ನಾಟಕ ಮಾತ್ರ ಅಲ್ಲ, ಎಲ್ಲಾ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಮಾರಾಟ ಮಾಡುವುದನ್ನು FCI ನಿಲ್ಲಿಸಿದೆ.
ಹೆಚ್ಚುವರಿ ಅಕ್ಕಿಯನ್ನು ನಿಲ್ಲಿಸಿರೋದಕ್ಕೆ ಕೇಂದ್ರ FCI ಕಾರಣ ಕೂಡ ನೀಡಿದೆ. ಬೆಲೆ ಏರಿಕೆ ನಿಯಂತ್ರಣದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಅಂತಾ ತಿಳಿಸಿದೆ. ಕೇಂದ್ರ ಸರ್ಕಾರ ‘ಗರಿಬ್ ಕಲ್ಯಾಣ್’ ಯೋಜನೆ ಅಡಿಯಲ್ಲಿ ಈಗಾಗಲೇ 5 ಕೆಜಿ ಅಕ್ಕಿಯನ್ನ 80 ಕೋಟಿ ಜನರಿಗೆ ನೀಡುತ್ತಿದೆ. ಉಳಿದ 60 ಕೋಟಿ ಜನರಿಗೆ ಅಕ್ಕಿ ಬೆಲೆ ಏರಿಕೆ ಬಿಸಿ ತಟ್ಟಬಾರದು. ಇದೇ ಕಾರಣಕ್ಕೆ ಸದ್ಯಕ್ಕೆ ಯಾವುದೇ ರಾಜ್ಯಗಳಿಗೆ ಹೆಚ್ಚುವರಿ ಅಕ್ಕಿ ಪೂರೈಕೆ ಇಲ್ಲ FCI ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದಂತೆ ಬೇರೆ ಮತ್ತಿತರ ರಾಜ್ಯಗಳೂ ಉಚಿತ ಅಕ್ಕಿ ಘೋಷಣೆ ಮಾಡಿದರೆ ಭವಿಷ್ಯದಲ್ಲಿ FCIಗೆ ಹೊರೆ ಆಗುವ ಸಾಧ್ಯತೆ ಇದೆ. ಆಗ ಉಚಿತ ಅಕ್ಕಿ ನೀಡುವ ರಾಜ್ಯಗಳಿಗೆ ಹೆಚ್ಚು ಅಕ್ಕಿ ಪೂರೈಕೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕೇಂದ್ರದಿಂದ ಅಕ್ಕಿ ಪೂರೈಕೆ ಸ್ಥಗಿತ ಮಾಡಿದೆ. ಇದೇ ವಿಚಾರವನ್ನು ಪಿಯೂಷ್ ಗೋಯಲ್ ಭೇಟಿ ಸಂದರ್ಭದಲ್ಲಿ ಕೆ.ಹೆಚ್.ಮುನಿಯಪ್ಪ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ