newsfirstkannada.com

‘ದೇವೇಗೌಡ್ರ ಮೇಲೆ ನನಗೆ ತುಂಬಾ ಅಭಿಮಾನ ಇದೆ’- ಸುಮಲತಾ ಅಂಬರೀಶ್​​​

Share :

29-05-2023

    ದೇವೇಗೌಡ್ರ ಮೇಲೆ ನನಗೆ ತುಂಬಾ ಅಭಿಮಾನ ಇದೆ

    ಸುಮಲತಾ ಅಂಬರೀಶ್​​​ ಹೇಳಿದ್ದೇನು..?

    ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರನ್ನು ಭೇಟಿ ಮಾಡಿದ ಮಂಡ್ಯ ಸಂಸದೆ

ಮಂಡ್ಯ: ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಿದ್ದರು. ಈ ನೂತನ ಕಟ್ಟಡ ಲೋಕಾರ್ಪಣೆ ಬಳಿಕ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡರನ್ನು ಭೇಟಿ ಮಾಡಿದ ಬಗ್ಗೆ ಸುಮಲತಾ ಅಂಬರೀಶ್ ತಮ್ಮ ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಸುಮಲತಾ ಮತ್ತೆ ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ.

ಇಂದು ರೆಬೆಲ್​ ಸ್ಟಾರ್​​ ಅಂಬರೀಶ್​​ 71ನೇ ಹುಟ್ಟುಹಬ್ಬದ ಪ್ರಯುಕ್ತ ದೊಡ್ಡ ಅರಸಿನಕೆರೆಗೆ ಭೇಟಿ ನೀಡಿದ್ದ ವೇಳೆ ಮಾತಾಡಿದ ಸುಮಲತಾ ಅವರು, ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಹಿರಿಯರು. ಅವರ ಮೇಲೆ ನನಗೆ ತುಂಬಾ ಅಭಿಮಾನ ಇದೆ. ಯಾವತ್ತೂ ಅಭಿಮಾನ ಇಲ್ಲ ಎಂದು ಹೇಳುವುದಿಲ್ಲ. ದೇವೇಗೌಡರಿಗೆ ಒಂದು ಸ್ಥಾನಮಾನ ಇದೆ. ಅವರೊಂದಿಗೆ ಮಾತಾಡಿದ್ದು ತುಂಬಾ ಖುಷಿಯಾಯ್ತು ಎಂದರು.

ದೇವೇಗೌಡರು ತುಂಬಾ ಅಭಿಮಾನದಿಂದಲೇ ನನ್ನೊಂದಿಗೆ ಮಾತಾಡಿದರು. ನನ್ನ ಮಗ ಅಭಿಷೇಕ್​ ಮದುವೆಗೆ ಆಹ್ವಾನ ನೀಡಿದ್ದೇವೆ. ಎಲ್ಲರನ್ನು ಮದುವೆಗೆ ಕರೆದಿದ್ದೇವೆ. ದೇವೇಗೌಡರಿಗೂ ಮದುವೆ ಬನ್ನಿ ಎಂದು ಆಮಂತ್ರಣ ಕೊಟ್ಟಿದ್ದೇವೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದೇವೇಗೌಡ್ರ ಮೇಲೆ ನನಗೆ ತುಂಬಾ ಅಭಿಮಾನ ಇದೆ’- ಸುಮಲತಾ ಅಂಬರೀಶ್​​​

https://newsfirstlive.com/wp-content/uploads/2023/05/Sumalatha_HDD-1.jpg

Load More