newsfirstkannada.com

×

ಪೃಥ್ವಿ ಶಾ ಮೇಲೆ ಅಟ್ಯಾಕ್​​ ಮಾಡಿದ ಆರೋಪ ಹೊತ್ತ ಈ ಸುಂದರಿ ಯಾರು..?

Share :

Published February 25, 2023 at 4:58am

Update September 25, 2023 at 9:12pm

    ಸೆಲ್ಫಿ ವಿಚಾರಕ್ಕೆ ಪೃಥ್ವಿ ಶಾ ಮತ್ತು ಯೂಟ್ಯೂಬರ್ ಗಿಲ್ ಮಧ್ಯೆ ಗಲಾಟೆ

    ನನ್ನ ಖಾಸಗಿ ಭಾಗಗಳನ್ನು ಮುಟ್ಟಿದ್ದಾರೆಂದು ಗಿಲ್ ಆರೋಪ

    ಮುಂಬೈ ಪೊಲೀಸರಿಗೆ ದೂರು-ಪ್ರತಿದೂರು ದಾಖಲು

ಟೀಂ ಇಂಡಿಯಾದ ಯಂಗ್​ ಸ್ಟಾರ್, ಹೊಡಿಬಡಿ ಬ್ಯಾಟ್ಸ್​ಮನ್ ಪೃಥ್ವಿ ಶಾ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಕಳೆದ ಬುಧವಾರ ರಾತ್ರಿ, ಖ್ಯಾತ ಯೂಟ್ಯೂಬರ್ ಸ್ವಪ್ನಾ ಗಿಲ್​​​ ಜೊತೆ ಸೆಲ್ಫಿ ವಿಚಾರಕ್ಕೆ ಕಿರಿಕ್ ಮಾಡಿಕೊಂಡು ದೊಡ್ಡ ಸುದ್ದಿಯಾಗಿದ್ದಾರೆ. ಸೆಲ್ಫಿ ವಿಚಾರಕ್ಕೆ ಸ್ವಪ್ನಾ ಗಿಲ್ ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಪೃಥ್ವಿ ಶಾ ಅಂಡ್ ಟೀಂ ಆರೋಪಿಸಿದ್ರೆ, ಇಲ್ಲ ಇಲ್ಲ ಪೃಥ್ವಿ ಶಾ ಟೀಂ ಕುಡಿದು ಬಂದು ನಮ್ಮ ಮೇಲೆ ದಾಳಿ ಮಾಡಿದೆ ಅಂತಾ ಸ್ವಪ್ನಾ ಅವರು ಆರೋಪಿಸಿದ್ದಾರೆ. ಇದು ಕ್ರಿಕೆಟ್ ಲೋಕದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಸೆಲ್ಫಿ ಗಲಾಟೆಯಲ್ಲಿ ಪೃಥ್ವಿಯನ್ನೇ ಆರೋಪಿಯನ್ನಾಗಿ ಮಾಡಲಾಗಿದೆ. ಸೆಲ್ಫಿ ನೀಡಿಲ್ಲ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾ INFLUENCER ಸಪ್ನ ಗಿಲ್​​​​ ದೊಡ್ಡ ಗಲಾಟೆ ಮಾಡಿದ್ದೇನೋ ಸರಿ. ಆದರೆ ಪೃಥ್ವಿ ಶಾ ಅಂಡ್ ಟೀಂ ಕುಡಿದು ಹಲ್ಲೆ ಮಾಡಿದೆ ಎಂದು ಗಿಲ್ ಪರ ವಕೀಲರು ಆರೋಪಿಸಿರೋದು ಸದ್ಯದ ಹಾಟ್ ಟಾಪಿಕ್ ಆಗಿದೆ.

ಇದನ್ನೂ ಓದಿ: ‘ದಾರಿ ತಪ್ಪಿದ ಮಗ..!’ ಮತ್ತೊಬ್ಬ ಸಚಿನ್ ಆಗಲಿಲ್ಲ.. ಕಾಂಬ್ಳಿ ಹಾದಿಯಲ್ಲಿ ಪೃಥ್ವಿ..!

ಈ ಪ್ರಕರಣದಲ್ಲಿ ಸಪ್ನಾ ಗಿಲ್ ಸೇರಿ ಒಟ್ಟು 8 ಮಂದಿ ಅರೆಸ್ಟ್ ಆಗಿದ್ದಾರೆ, ಆದರೆ ಪೃಥ್ವಿ ಶಾ ಗ್ಯಾಂಗ್​ನಿಂದ ಯಾರೊಬ್ಬರೂ ಅರೆಸ್ಟ್ ಆಗದಿರೋದು ಹಲವು ಅನುಮಾನಗಳು ಮೂಡಿಸಿದೆ.

ಯಾರು ಈ ಸ್ವಪ್ನಾ ಗಿಲ್..!?
ಪೃಥ್ವಿ ಶಾ ಜೊತೆಗೆ ಗಲಾಟೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಯಾರು ಸ್ವಪ್ನ ಗಿಲ್ ಅಂತಾ ಗೂಗಲ್​ನಲ್ಲಿ ಸರ್ಚ್​ ಮಾಡಲು ಶುರುಮಾಡಿದ್ದಾರೆ ಜನ. ಇವರು ಯೂಟ್ಯೂಬರ್​ ಮಾತ್ರವಲ್ಲ. ಖ್ಯಾತ ಭೋಜ್​ಪುರಿ ನಟಿ ಕೂಡ ಹೌದು. ಕಾಶಿ ಅಮರನಾಥ್, ನಿರುಹಾ ಚಾಲಲ್ ಲಂಡನ್ ಮತ್ತು ಮೇರಾ ವತನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿರುವ ಈ ಸುಂದರಿ, ಕೇವಲ ಇನ್​ಸ್ಟಾಗ್ರಾಮ್​​ ಒಂದರಲ್ಲೇ 220K ಫಾಲೋವರ್ಸ್​ ಹೊಂದಿದ್ದಾರೆ. ಫ್ಯಾಷನ್, ಲೈಫ್​ಸ್ಟೈಲ್ ಮತ್ತು ಡ್ಯಾನ್ಸ್​ ವಿಡಿಯೋಗಳ ಮೂಲಕ ಇವರು ಜನಮೆಚ್ಚುಗೆ ಪಡೆದವರು.

ಮಾತ್ರವಲ್ಲ, ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗಳ ಜೊತೆ ಅಗಾಧ ನೆಟ್​​ವರ್ಕ್​ ಬೆಳೆಸಿಕೊಂಡಿದ್ದಾರೆ.

ಗಲಾಟೆ ಏನು..?
ಬುಧವಾರ ರಾತ್ರಿ ಸ್ವಪ್ನ ಗಿಲ್ ಹಾಗೂ ಆಕೆಯ ಸ್ನೇಹಿತರು ಮುಂಬೈನ ಸಾಂತಾಕ್ರೂಜ್​​ನಲ್ಲಿರುವ ಹೋಟೆಲ್​​ಗೆ ಬಂದಿದ್ದರು. ಇದೇ ಹೋಟೆಲ್​​ಗೆ ಕ್ರಿಕೆಟರ್​ ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ಬಂದಿದ್ದರು. ಹೋಟೆಲ್​​ನಲ್ಲಿ ಊಟ ಮುಗಿಸಿ ಹೊರಡುವ ವೇಳೆ ಗಿಲ್​ ಹಾಗೂ ಆಕೆಯ ಸ್ನೇಹಿತರು ಪೃಥ್ವಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದೆ.

ಬ್ಯಾಟ್ಸ್​ಮನ್ ಪೃಥಿ ಫೋಟೋಗೆ ಪೋಸ್​ ನೀಡಲು ನಿರಾಕರಿಸಿದ್ದಾರೆ. ಆಗ ಸ್ವಪ್ನ ಸ್ನೇಹಿತರು ಮತ್ತೆ ಮತ್ತೆ ಪೃಥ್ವಿ ಬಳಿ ರಿಕ್ವೆಸ್ಟ್ ಮಾಡಿದ್ದಾರೆ. ಆಗಲೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರದೇ ಇದ್ದಾಗ ಗಲಾಟೆ ನಡೆದು ಹೋಗಿದೆ.

ಮಾಹಾರಾಷ್ಟ್ರಿಗರಿಂದ ನಿಗಿ ನಿಗಿ ಕೆಂಡ..!
ಈ ಗಲಾಟೆ ಬೆನ್ನಲೇ ಗಿಲ್ ವಿರುದ್ಧ ಮಹಾರಾಷ್ಟ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಕ್ರಿಕೆಟಿಗನ ಕರಿಯರ್ ಹಾಳು ಮಾಡುವ ಉದ್ದೇಶದಿಂದ ಈಕೆ ಇಲ್ಲ-ಸಲ್ಲದ ಆರೋಪ ಮಾಡಿದ್ದಾಳೆ ಅಂತಾ ಪೃಥ್ವಿ ಶಾ ಅಭಿಮಾನಿಗಳು ಕಿಡಿಕಾರಿದ್ದಾರೆ. ಇತ್ತೀಚೆಗೆ ಪೃಥ್ವಿಶಾ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಆಗಿದ್ದರು.

ಆದರೆ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದಿರಲಿಲ್ಲ. ಇನ್ನು ಇತ್ತೀಚೆಗೆ ನಡೆದ ರಣಜಿ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಸ್ಸಾಂ ವಿರುದ್ಧದ ಪಂದ್ಯ ಒಂದರಲ್ಲಿ 379 ರನ್​​ಗಳನ್ನು ಗಳಿಸಿ ಬಿಸಿಸಿಐ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪೃಥ್ವಿ ಶಾಗೆ ತಂಡಕ್ಕೆ ಆಯ್ಕೆ ಆಗುತ್ತಿಲ್ಲ. ಇದರಿಂದ ಪೃಥ್ವಿ ತುಂಬಾ ಡಿಸ್ಟರ್ಬ್​ ಆಗಿ ಹೀಗೆಲ್ಲಾ ವರ್ತಿಸುತ್ತಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿಬಂದಿದೆ. ಒಟ್ಟಾರೆ ಮೊನ್ನೆ ನಡೆದ ಪ್ರಕರಣದಲ್ಲಿ ಆರೋಪ-ಪ್ರತ್ಯಾರೋಪಗಳು ಕೇಳಬಂದಿವೆ. ಇಲ್ಲಿ ತಪ್ಪು ಯಾರದ್ದು? ಯಾರದ್ದು ಸರಿ? ಅನ್ನೋ ಗೊಂದಲದಲ್ಲಿ ಮಹಾರಾಷ್ಟ್ರ ಪೊಲೀಸರಿದ್ದಾರೆ.

ವಿಶೇಷ ವರದಿ: ಗಣೇಶ್ ಕೆರೆಕುಳಿ, ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಪೃಥ್ವಿ ಶಾ ಮೇಲೆ ಅಟ್ಯಾಕ್​​ ಮಾಡಿದ ಆರೋಪ ಹೊತ್ತ ಈ ಸುಂದರಿ ಯಾರು..?

https://newsfirstlive.com/wp-content/uploads/2023/02/GILL8.jpg

Load More