newsfirstkannada.com

ಪ್ರಧಾನಿ ಮೋದಿ ಓದಿದ ಶಾಲೆ ‘ಪ್ರೇರಣಾ’ ತಾಣ; ದೇಶದ 740 ಜಿಲ್ಲೆಯ ಇಬ್ಬರು ಮಕ್ಕಳ ಪ್ರವಾಸಕ್ಕೆ ಅವಕಾಶ

Share :

07-06-2023

    ಪ್ರಧಾನಿ ನರೇಂದ್ರ ಮೋದಿ ಓದಿದ ಶಾಲೆಯೇ ಪ್ರೇರಣೆ

    ಗುಜರಾತ್‌ನ ವಡ್‌ನಗರದಲ್ಲಿರುವ ಐತಿಹಾಸಿಕ ಶಾಲೆ

    ಪ್ರತಿ ಜಿಲ್ಲೆಯ ಇಬ್ಬರು ಮಕ್ಕಳ ಪ್ರವಾಸಕ್ಕೆ ಅವಕಾಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಓದಿದ ಪ್ರಾಥಮಿಕ ಶಾಲೆಗೆ ಹೊಸ ರೂಪ ನೀಡಲಾಗಿದೆ. ಗುಜರಾತ್‌ನ ವಡ್‌ನಗರದಲ್ಲಿರುವ ಪಾರಂಪರಿಕ ಕಟ್ಟಡವನ್ನು ಸಂಪೂರ್ಣ ನವೀಕರಿಸಲಾಗಿದ್ದು, ಪ್ರೇರಣಾ ತಾಣವನ್ನಾಗಿ ಪರಿವರ್ತಿಸಲಾಗ್ತಿದೆ.

ವಡ್‌ನಗರದಲ್ಲಿರುವ ಈ ಶಾಲೆ ಅಹಮದಾಬಾದ್‌ನಿಂದ 100 ಕಿಲೋ ಮೀಟರ್ ದೂರದಲ್ಲಿದೆ. ಈ ಶಾಲೆಗೆ ದೇಶದ ಪ್ರತಿಯೊಂದು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಒಂದು ವಾರ ಪ್ರವಾಸ ಕೈಗೊಳ್ಳುವ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
19ನೇ ಶತಮಾನದಲ್ಲಿ ನಿರ್ಮಾಣವಾಗಿದ್ದ ವಡ್‌ನಗರದ ಈ ಶಾಲೆಯು 2018ರವರೆಗೂ ಕಾರ್ಯ ನಿರ್ವಹಿಸುತ್ತಿತ್ತು. 2018ರ ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಳೆಯ ವಾಸ್ತುಶಿಲ್ಪ ಶೈಲಿಯಲ್ಲಿ ನವೀಕರಿಸಿದೆ.

ಮುಂದಿನ ವರ್ಷದಿಂದ ಪ್ರಧಾನಿ ಮೋದಿ ಅವರು ಓದಿದ ಈ ಶಾಲೆಯು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಪ್ರೇರಣಾ ತಾಣವಾಗಿ ಬದಲಾಗಲಿದೆ. ಇಲ್ಲಿಗೆ ದೇಶದ ಪ್ರತಿಯೊಂದು ಜಿಲ್ಲೆಯ ಇಬ್ಬರು ಮಕ್ಕಳು ಒಂದು ವಾರಗಳ ಕಾಲ ಅಧ್ಯಯನದ ಪ್ರವಾಸ ಕೈಗೊಳ್ಳಲು ಅವಕಾಶ ನೀಡಲಾಗುತ್ತಿದೆ. ಈ ಶಾಲೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರೇರಣಾ ಹೆಸರಿನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರಧಾನಿ ಮೋದಿ ಓದಿದ ಶಾಲೆ ‘ಪ್ರೇರಣಾ’ ತಾಣ; ದೇಶದ 740 ಜಿಲ್ಲೆಯ ಇಬ್ಬರು ಮಕ್ಕಳ ಪ್ರವಾಸಕ್ಕೆ ಅವಕಾಶ

https://newsfirstlive.com/wp-content/uploads/2023/06/MOdi-School.jpg

Load More