newsfirstkannada.com

ಬೆಚ್ಚಿ ಬೀಳಿಸೋ ಕೃತ್ಯ; ಚಾಕುವಿನಿಂದ ಪ್ರಿಯತಮೆಗೆ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಚುಚ್ಚಿ ಕೊಂದ

Share :

29-05-2023

    ಚಾಕುವಿನಿಂದ ಪ್ರಿಯತಮೆಗೆ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಚುಚ್ಚಿ ಕೊಂದ

    16 ವರ್ಷದ ಯುವತಿ ಪ್ರಿಯಕರನಿಂದ ಬಲಿ

    ಕೊಲೆ ಮಾಡಲು ನೈಜ ಕಾರಣವೇನು?

ದೆಹಲಿಯಲ್ಲಿ ಕ್ರೂರ ಪ್ರಿಯಕರನೊಬ್ಬ 16 ವರ್ಷದ ಯುವತಿಗೆ 20ಕ್ಕೂ ಹೆಚ್ಚು ಬಾರಿ ಬರ್ಬರವಾಗಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ರೋಹಿಣಿ ಸ್ಲಮ್​​ ಬಳಿ ನಡೆದಿದೆ. ಕೃತ್ಯದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಆರೋಪಿಯು ಚಾಕುವಿನಿಂದು ಸುಮಾರು 20ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. 20 ವರ್ಷದ ಶಾಹೀಲ್ ಎಂಬತ ಕೃತ್ಯ ನಡೆಸಿದ್ದಾನೆ. ಇವರಿಬ್ಬರು ರಿಲೇಷನ್​ಶಿಪ್​ನಲ್ಲಿದ್ದರು. ಹಲವು ದಿನಗಳಿಂದ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು ಎಂದು ವರದಿಯಾಗಿದೆ.

ಹತ್ಯೆಗೊಳಗಾದ ಯುವತಿಯು ಸಂಬಂಧಿಕರೊಬ್ಬರ ಪುತ್ರನ ಬರ್ತಡೇ ಆಚರಣೆಗೆ ಹೋಗುತ್ತಿದ್ದಳು. ಈ ವೇಳೆ ಆಕೆಯನ್ನ ಆರೋಪಿ ಶಾಹೀಲ್ ತಡೆದಿದ್ದಾನೆ. ಮಾತ್ರವಲ್ಲ ಮಾತಿಗೆ ಮಾತು ಬೆಳೆಸಿ ಚಾಕುವಿನಿಂದ ಇರಿದು ಸಾಯಿಸಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಚ್ಚಿ ಬೀಳಿಸೋ ಕೃತ್ಯ; ಚಾಕುವಿನಿಂದ ಪ್ರಿಯತಮೆಗೆ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಚುಚ್ಚಿ ಕೊಂದ

https://newsfirstlive.com/wp-content/uploads/2023/05/DELHI.jpg

Load More