newsfirstkannada.com

ಪ್ಲಾನ್ ಮಾಡಿ ಬರೋಬ್ಬರಿ 1 ಕೋಟಿ ಕದ್ದಿದ್ದ ಖದೀಮರು ಅರೆಸ್ಟ್​​.. ಇವರು ಸಿಕ್ಕಿಬಿದ್ದಿದ್ದೇ ರೋಚಕ!

Share :

03-11-2023

  ಅಡಿಕೆ ವ್ಯಾಪಾರಕ್ಕಾಗಿ 1 ಕೋಟಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ಉಮೇಶ್

  ಮತ್ತೆ ವಾಪಸ್ ಊರಿಗೆ ಹೋಗಿ ನೋಡಿದಾಗ ಆ ಒಂದು ಕೋಟಿ ಮಿಸ್ಸಿಂಗ್!

  ಪಕ್ಕಾ ಪ್ಲಾನ್ ಮಾಡಿ ಕೋಟಿ ಕದ್ದ ಖತರ್ನಾಕ್ ಖದೀಮರು ಕೊನೆಗೂ ಅಂದರ್

ಆತ ಅಡಿಕೆ ವ್ಯಾಪರಿ. ಊರು ಊರುಗಳಿಗೆ ತೆರಳಿ ಅಡಿಕೆ ಖರೀದಿಸಿ ವ್ಯಾಪಾರ ಮಾಡೋದು ಆತನ ವೃತ್ತಿ. ಅಡಿಕೆ ಖರೀದಿಗೆ ಅಂತ 1 ಕೋಟಿ ರೂಪಾಯಿ ಕಾರ್​ನಲ್ಲಿ ಇಟ್ಟುಕೊಂಡು ಚಿತ್ರದುರ್ಗದಿಂದ ಹೊರಟವನೇ ಬೆಂಗಳೂರಿನ ಕಡೆ ಬಂದಿದ್ದ. ವಾಪಸ್​ ಚಿತ್ರದುರ್ಗಕ್ಕೆ ಹೋಗುವಷ್ಟರಲ್ಲಿ ಕಾರಿನಲ್ಲಿದ್ದ ಒಂದು ಕೋಟಿ ರೂಪಾಯಿ ಮಾಯ ಆಗಿತ್ತು.

ಪಕ್ಕಾ ಪ್ಲಾನ್ ಮಾಡಿ ಕೋಟಿ ಕದ್ದ ಖದೀಮರು ಕೊನೆಗೂ ಅಂದರ್!

ಇದು ಒಂದು ಕೋಟಿ ರೂಪಾಯಿ ಕದ್ದವರ ಖತರ್ನಾಕ್​​ ಖದೀಮರ ಕಥೆ. ಕೋಟಿ ಕಿತ್ತುಕೊಂಡು ಹೋಗಿ ಲೈಫ್​ ಸೆಟ್ಲಾ ಮಾಡಿಕೊಳ್ಳೋಣ ಅಂತ ಹೋದವರು ಸಿಕ್ಕಿಬಿದ್ದ ರೋಚಕ ಕಥೆ. ಒಂದು ಕೋಟಿ ರೂಪಾಯಿ ಕದ್ದು ಸಿಕ್ಕಿಬಿದ್ದವರಿಂದ ರಿಕವರ್ ಮಾಡಿರೋ ನೋಟಿನ ಕಂತೆ ಹೇಗಿದೆ ಅಂತ. ಎಲ್ಲ 500 ರೂಪಾಯಿ ಗರಿ ಗರಿ ನೋಟುಗಳೇ. ಮೂವತ್ತೈದರಿಂದ ನಾಲವತ್ತು ಕಟ್ ಇದೆ. ಬರೀ ದುಡ್ಡ ಮಾತ್ರವಲ್ಲ ಆ ಕಳ್ಳರಿಂದ ಬೆಲೆ ಬಾಳುವ ಮೊಬೈಲ್, ವಾಚ್​ಗಳು, ಬಡ್ಸ್​​ ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಡಿಕೆ ಮಾರುವ ವ್ಯಾಪಾರಿಯಿಂದ ಒಂದು ಕೋಟಿ ರೂಪಾಯಿ ಕದ್ದು ಎಸ್ಕೇಪ್ ಆದವರೇ ಹತ್ತು ಲಕ್ಷ ರೂಪಾಯಿವರೆಗೂ ಬಿಂದಾಸ್ ಆಗಿ ಖರ್ಚು ಮಾಡಿದ್ದಾರೆ. ತಮಗೆ ಬೇಕಾದ ವಸ್ತುಗಳನ್ನ ಖರೀದಿ ಮಾಡಿದ್ದಾರೆ. ಎರಡು ಐ ಫೋನ್​ಗಳು ಸೇರಿ, ಚಿನ್ನದ ಸರ, ವಾಚ್​ ಹೀಗೆ ಆಭರಣಗಳನ್ನು ಖರೀದಿ ಮಾಡಿ ಶೋಕಿ ಮಾಡಿದ್ದಾರೆ. ಅದಕ್ಕೆ ಪೊಲೀಸರು ಬೀಸಿದ ಬಲೆಗೆ ಈ ಚಾಲಾಕಿ ಕಳ್ಳ ಗ್ಯಾಂಗ್ ಸಿಕ್ಕಿಬಿದ್ದಿದೆ. ಸ್ವಾಮಿ, ಪವನ್​, ಅನುಪಮ ಹಾಗೂ ಕಾರ್ತಿಕ್. ಸದ್ಯ ಈ ನಾಲ್ಕು ಜನರನ್ನೂ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರೂ ಬಂಧಿಸಿದ್ದು, ರಾಬರಿಯ ಪಿನ್ ಟು ಪಿನ್​ ಕಥೆ ಬಹಿರಂಗಪಡಿಸಿದ್ದಾರೆ.

ಅಡಿಕೆ ವ್ಯಾಪಾರಕ್ಕಾಗಿ 1 ಕೋಟಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ಉಮೇಶ್!

ಚಿತ್ರದುರ್ಗ ಮೂಲದ ಉಮೇಶ್ ಎಂಬಾತ ಬಹಳ ವರ್ಷಗಳಿಂದ ಅಡಿಕೆ ವ್ಯಾಪಾರ ಮಾಡ್ತಿದ್ದ. ಊರು ಊರುಗಳಿಗೆ ಹೋಗಿ ಅಡಿಕೆ ಖರೀದಿಸಿ, ವ್ಯಾಪಾರ ಮಾಡೋದು ಈತನ ವೃತ್ತಿ. ಅದೇ ಉದ್ದೇಶದಿಂದ ಅಕ್ಟೋಬರ್ 7ನೇ ತಾರೀಖು ​ಉಮೇಶ್, ತನ್ನ ಕಾರು ಚಾಲಕ ಸ್ವಾಮಿನ ಕರೆದುಕೊಂಡು ಬೆಂಗಳೂರಿನ ಕಡೆ ಹೊರಟಿದ್ದ. ಬರುವ ವೇಳೆ ಒಂದು ಕೋಟಿ ರೂಪಾಯಿ ಹಣವನ್ನ ಕಾರಿನಲ್ಲಿ ಇಟ್ಟುಕೊಂಡು ಬಂದಿದ್ದ. ಬರುವ ಮಾರ್ಗದಲ್ಲಿ ಅಡಿಕೆ ವ್ಯಾಪಾರಿಗಳನ್ನು ಭೇಟಿ ಮಾಡಿ, ಅಡ್ವಾನ್ಸ್​ ಕೊಡೋದು, ಟ್ರಾನ್ಸ್​ಪೋರ್ಟ್​ ಮಾಡಿಸೋದು ಆತನ ಉದ್ದೇಶವಾಗಿತ್ತು. ಹಾಗೆ ಶಿರಾ, ತುಮಕೂರು ಮಾರ್ಗವಾಗಿ ಬೆಂಗಳೂರಿನ ಗಾಂಧೀ‌ನಗರಕ್ಕೆ ಬಂದಿದ್ದ ಉಮೇಶ್​ ಊಟಕ್ಕೆಂದು ಕಾರು ನಿಲ್ಲಿಸಿದ್ದರು.

ಗಾಂಧಿನಗರದಲ್ಲಿ ಊಟಕ್ಕೆಂದು ಕಾರು ನಿಲ್ಲಿಸಿದ್ದ ಎಚ್​ಎಸ್​ ಉಮೇಶ್​ ಊಟ ಮುಗಿಸಿ ಮತ್ತೆ ಕಾರಲ್ಲಿ ಚಿತ್ರದುರ್ಗದ ಕಡೆ ಹೊರಟಿದ್ದಾರೆ. ಹೋಗುವ ಮಧ್ಯೆ ಚಂದ್ರಾಲೇಔಟ್, ದಾಬಸ್ ಪೇಟೆಯಲ್ಲೂ ಕೆಲ ಸಮಯ ನಿಲ್ಲಿಸಿದ್ದರಂತೆ. ಆಮೇಲೆ ಸಂಜೆ 7:45ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿ ಬಳಿ ತೆರಳಿದಾಗ, ಕಾರಿನ ಡಿಕ್ಕಿಯಲ್ಲಿದ್ದ ಒಂದು ಕೋಟಿ ರೂಪಾಯಿನ ಚೆಕ್ ಮಾಡಿಕೊಂಡಿದ್ದಾರೆ. ಆಗಲೇ ನೋಡಿ ಅಡಿಕೆ ವ್ಯಾಪಾರಿ ಉಮೇಶ್​ಗೆ ಆಘಾತ ಎದುರಾಗಿದ್ದು. ಅಡಿಕೆ ಖರೀದಿಗಾಗಿ ಕಾರಿನ ಡಿಕ್ಕಿಯಲ್ಲಿದ್ದ ಒಂದು ಕೋಟಿ ಮಾಯವಾಗಿತ್ತು. ಕೂಡಲೇ ಗಾಬರಿಯಾಗಿ ಉಮೇಶ್​ಗೆ, ಏನಾಯ್ತು? ದುಡ್ಡು ಎಲ್ಲೋಯ್ತು ಅನ್ನೋದೇ ಗೊತ್ತಾಗಿಲ್ಲ. ಆಮೇಲೆ ತನ್ನ ಡ್ರೈವರ್ ಸ್ವಾಮಿ ಮೇಲೆ ಅನುಮಾನಗೊಂಡ ಉಮೇಶ್, ಆತನನ್ನ ಕರೆಸಿ ವಿಚಾರಣೆನೂ ಮಾಡ್ತಾರೆ. ಬಹುಶಃ ತಗೊಂಡು ಹೋಗಿದ್ರೆ ವಾಪಸ್ ತಂದು ಕೊಡ್ತಾನೆ ಅಂತ ಕಾದು ನೋಡ್ತಾನೆ. ಆದ್ರೆ ಸ್ವಾಮಿ ಕಡೆಯಿಂದ ಯಾವುದೇ ರಿಯಾಕ್ಷನ್ ಬರಲ್ಲ. ಕೊನೆಗೆ ಬೆಂಗಳೂರಿನಲ್ಲಿ ಈ ಘಟನೆ ಆಗಿರಬಹುದು ಅಂತ ಪುನಃ ಸಿಲಿಕಾನ್ ಸಿಟಿಗೆ ಬಂದು ಉಪ್ಪಾರಪೇಟೆಯಲ್ಲಿ ದೂರು ದಾಖಲು ಮಾಡ್ತಾರೆ. ಗಾಂಧಿನಗರಕ್ಕೆ ಬಂದಿದ್ದ ವೇಳೆ ಊಟಕ್ಕೆಂದು ಕಾರು ನಿಲ್ಲಿಸಿದ್ದು, ಕಾರಿನ ಡಿಕ್ಕಿಯಲ್ಲಿ ಒಂದು ಕೋಟಿ ರೂಪಾಯಿ ಇತ್ತು. ಕಳ್ಳತನ ಆಗಿದೆ ಅಂತ ಕಂಪ್ಲೆಂಟ್​ ಫೈಲ್ ಮಾಡ್ತಾರೆ.

ದಾಬಸ್ ​ಪೇಟೆಯಲ್ಲಿ ದುಡ್ಡು ಎಗರಿಸಿದ್ದ ಕಳ್ಳರು!

ಒಂದು ಕೋಟಿ ರೂಪಾಯಿ ಮಿಸ್ಸಿಂಗ್ ದೂರಿನ ಹಿನ್ನೆಲೆ ಕಾರ್ಯಾಚರಣೆಗೆ ಇಳಿಯುವ ಪೊಲೀಸರು ಬೆಂಗಳೂರಿಗೆ ಬಂದಿದ್ದ ಉಮೇಶ್​ ಅವರು ಎಲ್ಲೆಲ್ಲಿ ನಿಲ್ಲಿಸಿದ್ದರು? ಯಾರು ಫಾಲೋ ಮಾಡಿದ್ರು? ಹೇಗೆ ಹೋದರು ಅನ್ನೋದನ್ನ ಸಿಸಿಟಿವಿ ಮೂಲಕ ಪರಿಶೀಲನೆ ನಡೆಸಿದ್ದಾರೆ. ಆಗ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ಅಡಿಕೆ ವ್ಯಾಪಾರ. ಪ್ರತಿನಿತ್ಯನೂ ಕೋಟಿ ಕೋಟಿ ವ್ಯವಹಾರ. ಇದೆಲ್ಲವನ್ನ ಉಮೇಶ್​ಗೆ ಹತ್ತಿರವಿದ್ದುಕೊಂಡು ನೋಡುತ್ತಿದ್ದ ಸ್ವಾಮಿಗೆ, ದುರಾಸೆ ಅನ್ನೋದು ಸೃಷ್ಟಿಯಾಗಿತ್ತು. ಹೇಗಾದರೂ ಮಾಡಿ ಉಮೇಶ್​ ಬಳಿ ದುಡ್ಡನ್ನು ಹೊಡಿಲೇಬೇಕು ಅಂತ ಸ್ಕೆಚ್ ಹಾಕಿ, ತನ್ನ ಗೆಳೆಯರನ್ನ ಸೇರಿಸಿಕೊಂಡ. ಕಾರ್ತಿಕ್, ಅನುಪಮ, ಪವನ್ ಜೊತೆ ಕೈ ಜೋಡಿಸಿ ಉಮೇಶ್​ಗೆ ಸ್ಕೆಚ್ ಹಾಕಿದ್ದಾನೆ.

ಬೆಂಗಳೂರಿಗೆ ಬರುವ ವೇಳೆ ಒಂದು ಕೋಟಿ ರೂಪಾಯಿ ಇರುತ್ತೆ. ಅದನ್ನು ಕದಿಯೋಣ ಅಂತಾ ತನ್ನ ಹುಡುಗರಿಗೆ, ಡ್ಯೂಪ್ಲೆಕೇಟ್​ ಕೀ ಮಾಡಿಸಿ ಕೊಟ್ಟಿದ್ದ. ಕಾರು ನಿಲ್ಲಿಸಿ ಹೋದರೂ ಡ್ಯೂಪ್ಲಿಕೇಟ್​ ಕೀ ಬಳಸಿ ಡಿಕ್ಕಿ ತೆಗೆದು ದುಡ್ಡು ಎತ್ಕೊಂಡು ಹೋಗುವಂತೆ ಐಡಿಯಾನೂ ಕೊಟ್ಟಿದ್ದ. ಅದರಂತೆ ಕಾರ್ತಿಕ್ ಎಂಬಾತ ದಾಬಸ್​ಪೇಟೆಯಲ್ಲಿ ತನ್ನ ಕೆಲಸನೂ ಮುಗಿಸಿದ್ದ. ಕೋಟಿ ಎಗರಿಸಿಕೊಂಡು ಹೋದವರು ತಮಗೆ ಬೇಕಾಗಿದ್ದನ್ನ ಖರೀದಿಸಿದ್ರು. ಆಭರಣ, ಮೊಬೈಲ್ ಹಾಗೂ ಅನಾಥಶ್ರಾಮಕ್ಕೂ 3 ಲಕ್ಷ ರೂಪಾಯಿ ದಾನ ಮಾಡಿದ್ದರಂತೆ. ನಂಬಿಕೆ ಮೇಲೆ ಕೆಲಸ ಇಟ್ಕೊಂಡಿದ್ದ. ಕಷ್ಟ ಅಂತ ಬಂದಾಗ ದುಡ್ಡು ಕೊಡುತ್ತಿದ್ದ. ಆದ್ರೆ ಸ್ವಾಮಿ ಮಾಲೀಕನಿಗೆ ಗುನ್ನ ಇಟ್ಟಿದ್ದ. ಕೆಲವೂ ಸಲ ಹೀಗೆ, ದುಡ್ಡಿನ ಮುಂದೆ ಯಾವ ನಂಬಿಕೆನೂ ಕೆಲಸ ಮಾಡಲ್ಲ. ಅದಕ್ಕೆ ಬೆಸ್ಟ್​ ಎಕ್ಸಾಂಪಲ್ ಒಂದು ಕೋಟಿ ರೂಪಾಯಿ ಕೇಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಲಾನ್ ಮಾಡಿ ಬರೋಬ್ಬರಿ 1 ಕೋಟಿ ಕದ್ದಿದ್ದ ಖದೀಮರು ಅರೆಸ್ಟ್​​.. ಇವರು ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2023/11/thief-5.jpg

Load More