newsfirstkannada.com

ದಟ್ಟ ಮಂಜಿನಿಂದ ಸರಣಿ ಅಪಘಾತ.. 100ಕ್ಕೂ ಹೆಚ್ಚು ವಾಹನಗಳು ಜಖಂ, ಓರ್ವ ಸಾವು

Share :

14-11-2023

  ಸರಣಿ ಅಪಘಾತ ಹಿನ್ನೆಲೆಯಲ್ಲಿ ಓರ್ವ ಸಾವು, ಹಲವರು ಗಂಭೀರ

  13 ಕಿಮೀ ವ್ಯಾಪ್ತಿಯಲ್ಲಿ ಒಂದಕ್ಕೊಂದು ಡಿಕ್ಕಿಯಾದ ವಾಹನಗಳು..!

  ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ

ಚಂಡೀಗಢ: ರಸ್ತೆಯಲ್ಲಿ ದಟ್ಟ ಮಂಜಿನಿಂದ ವಿವಿಧೆಡೆ ಸರಣಿ ಅಪಘಾತಗಳು ಸಂಭವಿಸಿ 100ಕ್ಕೂ ಅಧಿಕ ವಾಹನಗಳು ಡಿಕ್ಕಿಯಾಗಿ ಓರ್ವ ಸಾವನಪ್ಪಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಪಂಜಾಬ್​​ನ ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ದೆಹಲಿ-ಅಮೃತಸರ ರಾಷ್ಟ್ರೀಯ ಹೆದ್ದಾರಿಯ ಸುಮಾರು 13 ಕಿಮೀ ಪ್ರದೇಶದ ವ್ಯಾಪ್ತಿಯಲ್ಲಿ ಈ ಸರಣಿ ಅಪಘಾತ ಸಂಭವಿಸಿದೆ. 100ಕ್ಕೂ ಹೆಚ್ಚು ವಾಹನಗಳು ಒಂದಕ್ಕೆ ಒಂದು ಡಿಕ್ಕಿಯಾಗಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖನ್ನಾ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.

ಲೂಧಿಯಾನ, ಖನ್ನಾ ನಗರ ಸೇರಿದಂತೆ ನಗರಗಳ ವಿವಿಧಡೆ ಬೆಳಗಿನ ಜಾವಾ ರಸ್ತೆಯಲ್ಲಿ ಮಂಜು ಬೀಳುತ್ತಿರುತ್ತದೆ. ಹೀಗಾಗಿ ವಾಹನದ ಚಾಲಕರಿಗೆ ಮುಂದೆ ಏನು ಬರುತ್ತಿದೆ ಎಂದು ಗೊತ್ತಿಲ್ಲದೇ ಈ ರೀತಿ ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದೆ. ಒಟ್ಟು 4 ಕಡೆಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿ ವಾಹನಗಳು ಜಖಂಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಟ್ಟ ಮಂಜಿನಿಂದ ಸರಣಿ ಅಪಘಾತ.. 100ಕ್ಕೂ ಹೆಚ್ಚು ವಾಹನಗಳು ಜಖಂ, ಓರ್ವ ಸಾವು

https://newsfirstlive.com/wp-content/uploads/2023/11/CAR_ACCIDENT_RAJASTAN.jpg

Load More