newsfirstkannada.com

ದೀಪಾವಳಿ ಹಬ್ಬಕ್ಕೆ ರಶ್​​.. ರೈಲು ಹತ್ತುವಾಗ ನೂಕಲು; ಓರ್ವ ಸಾವು, ಹಲವರಿಗೆ ಗಾಯ

Share :

11-11-2023

    ರೈಲ್ವೆ ಇಲಾಖೆಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ

    ದೀಪಾವಳಿ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುತ್ತಿರೋ ಜನ

    ರೈಲು ಬರ್ತಿದ್ದಂತೆ ನಿಲ್ದಾಣದಲ್ಲಿ ಕಾಲ್ತುಳಿತ, ಓರ್ವ ಸಾವು

ಗಾಂಧಿನಗರ: ಟ್ರೈನ್​ ಹತ್ತಲು ಹೋಗಿ ಕಾಲ್ತುಳಿತ ಉಂಟಾಗಿ ಓರ್ವ ಸಾವನ್ನಪ್ಪಿ, ಹಲವಾರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್​ನ ಸೂರತ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ತಮ್ಮ ತಮ್ಮ ಊರಿಗೆ ತೆರಳುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ.

ಸೂರತ್ ರೈಲ್ವೆ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆ ನಾ ಮುಂದು, ನೀ ಮುಂದು ಎಂದು ಹತ್ತಲು ಹೋಗಿ ಪ್ರಯಾಣಿಕರ ನಡುವೆ ನೂಕು ನುಗ್ಗಲಾಗಿದೆ. ಇದರಿಂದ ಮಹಿಳೆ, ಮಕ್ಕಳು ಕೆಳಗೆ ಬಿದ್ದಿದ್ದರಿಂದ ಜನ ದಟ್ಟಣೆಯಲ್ಲಿ ಮೇಲೆ ಏಳಲು ಆಗಿಲ್ಲ. ಹೀಗಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಹಲವಾರು ಪ್ರಯಾಣಿಕರು ಗಾಯಾಗೊಂಡಿದ್ದಾರೆ. ಗಾಯಾಳುಗಳನ್ನು ರೈಲ್ವೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಲಾಗಿದೆ.

ದೀಪಾವಳಿ ಹಬ್ಬ ಇರುವುದರಿಂದ ಸುಮಾರು 7 ಲಕ್ಷಕ್ಕೂ ಅಧಿಕ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಜನರನ್ನು ನಿಯಂತ್ರಣ ಮಾಡಲು ಸ್ಟೇಷನ್​ನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿಯೇ ಇಲಾಖೆಯು ಗುಜರಾತ್, ಮುಂಬೈ, ಮಧ್ಯಪ್ರದೇಶದ ನಡುವೆ ಸುಮಾರು 46 ಜೋಡಿ ಟ್ರೈನ್​ಗಳನ್ನು ಹೆಚ್ಚುವರಿಯಾಗಿ ಓಡಾಡುತ್ತಿವೆ. ಇವು ಒಟ್ಟು 400 ಟ್ರಿಪ್​ಗಳನ್ನು ಹಾಕಲಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಾವಳಿ ಹಬ್ಬಕ್ಕೆ ರಶ್​​.. ರೈಲು ಹತ್ತುವಾಗ ನೂಕಲು; ಓರ್ವ ಸಾವು, ಹಲವರಿಗೆ ಗಾಯ

https://newsfirstlive.com/wp-content/uploads/2023/11/SURAT_GUJARAT.jpg

Load More