30 ರೂಪಾಯಿಗೆ ಒಂದು ಕೆಜಿ ಟೊಮ್ಯಾಟೋ ಎಲ್ಲಿ ಸಿಗುತ್ತೆ ಗೊತ್ತಾ?
ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಲು ಇಲ್ಲಿ ನಾಯಕರ ಪೈಪೋಟಿ
ಟೊಮ್ಯಾಟೋವನ್ನು ಪ್ರಚಾರಕ್ಕೆ ಬಳಸಿಕೊಂಡ ರಾಜಕೀಯ ಪಕ್ಷಗಳು
ಅಮರಾವತಿ: ಈಗಂತೂ ದೇಶಾದ್ಯಂತ ಕೆಂಪು ರಾಣಿ ಟೊಮ್ಯಾಟೋಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಪ್ರತಿ ಕೆಜಿಗೆ 100, 150, 200 ರೂಪಾಯಿ ದಾಟಿರೋ ಟೊಮ್ಯಾಟೋ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿದೆ. ಟೊಮ್ಯಾಟೋ ಬೆಲೆ ಏರಿಕೆಯಿಂದ ರೈತರು ಫುಲ್ ಖುಷಿಯಾಗಿದ್ದರೇ, ಇತ್ತ ಜನ ಸಾಮಾನ್ಯರಿಗೆ ಟೊಮ್ಯಾಟೋ ಬೆಲೆ ಏರಿಕೆ ಬಿಸಿ ತಟ್ಟದಂತೆ ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಲಾಗುತ್ತಿದೆ. ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಲು ಸರ್ಕಾರ ಹಾಗೂ ವಿರೋಧ ಪಕ್ಷ ಟಿಡಿಪಿ ಮಧ್ಯೆ ಪೈಪೋಟಿ ನಡೀತಿದೆ.
ಇನ್ನು, ವೈಎಸ್‌ಆರ್‌ಸಿಪಿ ಸರ್ಕಾರವು ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟ ಮಾಡಲು ಮುಂದಾಗಿದೆ. ಹೀಗಾಗಿ ವೈಎಸ್‌ಆರ್‌ಸಿಪಿ ಸರ್ಕಾರದಿಂದ ಪ್ರತಿ ಕೆಜಿಗೆ 50 ರೂಪಾಯಿಗೆ ರೈತ ಬಜಾರ್ನಲ್ಲಿ ಟೊಮ್ಯಾಟೋ ಮಾರಾಟ ಮಾಡಲಾಗುತ್ತಿದೆ. ಜನಸಾಮಾನ್ಯರ ನೆರವಿಗೆ ಧಾವಿಸಿರುವ ವಿಪಕ್ಷ ಟಿಡಿಪಿ ಪಕ್ಷದಿಂದಲೂ ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಇತ್ತ ಟಿಡಿಪಿ ಪಕ್ಷದಿಂದ ಪ್ರತಿ ಕೆಜಿ ಟೊಮ್ಯಾಟೋಗೆ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಆಡಳಿತ ಹಾಗೂ ಪ್ರತಿಪಕ್ಷದ ಪೈಪೋಟಿಯಿಂದ ಆಂಧ್ರಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಟೊಮ್ಯಾಟೋ ಸಿಗುತ್ತಿರುವದು ಖುಷಿ ತಂದಿದೆ. ಮುಂದಿನ ವರ್ಷದ ಏಪ್ರಿಲ್, ಮೇ ತಿಂಗಳಿಗೆ ಆಂಧ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿ ಈಗಿನಿಂದಲೇ ಜನರ ಮನ ಗೆಲ್ಲಲು ಕಡಿಮೆ ಬೆಲೆಗೆ ಟೊಮ್ಯಾಟೋ ಮಾರಾಟಕ್ಕೆ ಮಾಡಲು ಆಡಳಿತ-ಪ್ರತಿಪಕ್ಷ ಪ್ಲಾನ್ ಮಾಡಿಕೊಂಡಿದೆ. ದೇಶದ ಯಾವುದೇ ಭಾಗದಲ್ಲೂ ಪ್ರತಿ ಕೆಜಿ ಗೆ 30 ರೂಪಾಯಿಗೆ ಟೊಮ್ಯಾಟೋ ಸಿಗುತ್ತಿಲ್ಲ. ಆದರೆ ಚುನಾವಣಾ ಜಿದ್ದಾಜಿದ್ದಿಯಿಂದ ಆಂಧ್ರಪ್ರದೇಶದಲ್ಲಿ ಮಾತ್ರ ಪ್ರತಿ ಕೆಜಿ ಟೊಮ್ಯಾಟೋ ಬೆಲೆ 30 ರೂಪಾಯಿಗೆ ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ