newsfirstkannada.com

ಒಂದು ಬಿಸ್ಕೆಟ್ ಮಿಸ್‌ ಮಾಡಿದ್ದಕ್ಕೆ 1 ಲಕ್ಷ ದಂಡ; ಸನ್‌ಫೀಸ್ಟ್ ಮೇರಿ ‘ಲೈಟ್‌’ ವೇಟ್ ಆಗಿದ್ದೇಕೆ? ಆಮೇಲೆ ಏನಾಯ್ತು?

Share :

Published September 6, 2023 at 1:25pm

    ಸನ್‌ಫೀಸ್ಟ್ ಮೇರಿ ಲೈಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ!

    ಗ್ರಾಹಕರಿಗೆ ಪ್ರತಿದಿನ 29 ಲಕ್ಷ ಬಿಸ್ಕೆಟ್‌ಗಳು ಮೋಸದ ಆರೋಪ

    ಪ್ಯಾಕೇಟ್‌ನಲ್ಲಿ 16 ಬಿಸ್ಕೆಟ್‌ ಹಾಕಿದ್ರೆ 76 ಗ್ರಾಂನಷ್ಟು ತೂಕ ಇರ್ಬೇಕು

ಚೆನ್ನೈ: ಯಾವುದೇ ಬಿಸ್ಕೆಟ್ ಪ್ಯಾಕ್‌ ತಗೊಂಡ್ರೆ ಸಾಮಾನ್ಯವಾಗಿ ನಾವೆಲ್ಲಾ ಅದರಲ್ಲಿ ಎಷ್ಟಿರುತ್ತೆ ಅಂತಾ ಲೆಕ್ಕ ಹಾಕೋಕೆ ಹೋಗಲ್ಲ. ಆದರೆ ಈ ಪ್ರಕರಣವನ್ನ ನೋಡಿದ್ರೆ ಇನ್ಮುಂದೆ ಪ್ರತಿಯೊಬ್ಬರು ಬಿಸ್ಕೆಟ್ ಪ್ಯಾಕ್‌ ಕೊಂಡು ಕೊಂಡ್ರೆ ಅದರಲ್ಲಿ ಎಷ್ಟಿದೆ ಅನ್ನೋದನ್ನ ಕೌಂಟ್ ಮಾಡ್ಬೇಕು. ಯಾಕಂದ್ರೆ ITC ಕಂಪನಿಯ ಸನ್‌ಫೀಸ್ಟ್ ಮೇರಿ ಲೈಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ ಇರೋದು ಪತ್ತೆಯಾಗಿದೆ. ಇದರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ವ್ಯಕ್ತಿಗೆ 1 ಲಕ್ಷ ರೂಪಾಯಿ ಪರಿಹಾರವೂ ಸಿಕ್ಕಿದೆ.

ಒಂದು ಬಿಸ್ಕೆಟ್‌ ಮೋಸದ ಈ ಕಥೆ ಬಯಲಾಗಿದ್ದೇ ಚೆನ್ನೈ ನಿವಾಸಿ ಪಿ. ದಿಲ್ಲಿಬಾಬು ಅವರಿಂದ. ದಿಲ್ಲಿಬಾಬು ಬೀದಿ ನಾಯಿಗಳಿಗೆ ಬಿಸ್ಕೆಟ್ ಹಾಕಲು ಸನ್‌ಫೀಸ್ಟ್ ಮೇರಿ ಲೈಟ್ ಕೊಂಡು ಕೊಂಡಿದ್ದಾರೆ. ಅದರಲ್ಲಿ 16ರ ಬದಲು 15 ಬಿಸ್ಕೆಟ್‌ಗಳು ಇರೋದು ಗೊತ್ತಾಗಿದೆ. ITC ಕಂಪನಿ ತನ್ನ ಸನ್‌ಫೀಸ್ಟ್ ಮೇರಿ ಲೈಟ್ ಪ್ಯಾಕೆಟ್‌ ಮೇಲೆ 16 ಬಿಸ್ಕೆಟ್‌ಗಳಿವೆ ಅಂತಾ ಬರೆದಿದೆ. ತನ್ನ ಜಾಹೀರಾತುಗಳಲ್ಲೂ 16 ಬಿಸ್ಕೆಟ್‌ಗಳನ್ನೇ ನಾವು ಕೊಡುತ್ತೇವೆ ಅಂತಾ ಹೇಳಿದೆ. ಆದರೆ ಸನ್‌ಫೀಸ್ಟ್ ಮೇರಿ ಲೈಟ್‌ನಲ್ಲಿ ಕೇವಲ 15 ಬಿಸ್ಕೆಟ್ ಇರೋದು ಪತ್ತೆಯಾಗಿದೆ.

ಇದನ್ನೂ ಓದಿ: ಮೋಹಕ ತಾರೆ ಸಾವಿನ ಬಗ್ಗೆ ವದಂತಿ; ನಟಿ ರಮ್ಯಾ ಈಗ ಎಲ್ಲಿದ್ದಾರೆ? ಜೊತೆಗಿರೋ ಸ್ನೇಹಿತೆ ಹೇಳಿದ್ದೇನು?

ಒಂದು ಬಿಸ್ಕೆಟ್ ಕಡಿಮೆ ಇರೋದನ್ನು ಗಮಿನಿಸಿದ ದಿಲ್ಲಿಬಾಬು ಅವರು ಸ್ಥಳೀಯ ಅಂಗಡಿಗೆ ಹೋಗಿ ಕೇಳಿದ್ದಾರೆ. ಅಲ್ಲಿ ಅವರಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಕೊನೆಗೆ ದಿಲ್ಲಿಬಾಬು ಅವರು ಗ್ರಾಹಕರ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಸನ್‌ಫೀಸ್ಟ್ ಮೇರಿ ಲೈಟ್‌ ಪ್ಯಾಕೆಟ್‌ ಮೇಲೆ 16 ಬಿಸ್ಕೆಟ್‌ಗಳಿವೆ ಅಂತಾ ದಾಖಲಾಗಿದೆ. ಅಂದ್ರೆ ಒಂದು ಬಿಸ್ಕೆಟ್‌ಗೆ 75 ಪೈಸೆಯಂತೆ ಚಾರ್ಜ್‌ ಮಾಡಲಾಗುತ್ತೆ. ಆದ್ರೆ ITC ಕಂಪನಿ 15 ಬಿಸ್ಕೆಟ್‌ಗಳನ್ನೇ ನೀಡುತ್ತಿದೆ ಎಂದು ದೂರಲಾಗಿದೆ. ಜೊತೆಗೆ ITC ಕಂಪನಿಯು ಪ್ರತಿದಿನ 50 ಲಕ್ಷ ಬಿಸ್ಕೆಟ್ ಪ್ಯಾಕ್‌ಗಳನ್ನು ಉತ್ಪಾದಿಸುತ್ತಿದೆ. ಅದರಂತೆ ಒಂದು ಬಿಸ್ಕೆಟ್ ಮಿಸ್ ಆದ್ರೂ ಗ್ರಾಹಕರಿಗೆ ಪ್ರತಿದಿನ 29 ಲಕ್ಷ ಬಿಸ್ಕೆಟ್‌ಗಳು ಮೋಸ ಆಗುತ್ತಿದೆ ಎನ್ನಲಾಗಿದೆ.

ITC ಕಂಪನಿಯ ವಾದ ತಿರಸ್ಕರಿಸಿದ ಕೋರ್ಟ್‌!

ದಿಲ್ಲಿಬಾಬು ಅವರ ಈ ದೂರಿಗೆ ITC ಕಂಪನಿಯು ಸ್ಪಷ್ಟನೆ ನೀಡಿದೆ. ಗ್ರಾಹಕರ ಕೋರ್ಟ್‌ನಲ್ಲಿ ವಾದಸಿದ ITC ನಾವು ತೂಕದ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತೇವೆ. ಸನ್‌ಫೀಸ್ಟ್ ಮೇರಿ ಲೈಟ್‌ 76 ಗ್ರಾಂನಷ್ಟು ತೂಕವಿದೆ ಎಂದು ಹೇಳಿದೆ. ಇದನ್ನೂ ಪರೀಕ್ಷಿಸಿದ ನ್ಯಾಯಾಲಯ 15 ಬಿಸ್ಕೆಟ್‌ಗಳ ಪ್ಯಾಕ್‌ ಕೇವಲ 74 ಗ್ರಾಂ ತೂಕ ಇರೋದನ್ನೂ ಪತ್ತೆ ಮಾಡಿದೆ. ಕೊನೆಗೆ ITC ಕಂಪನಿ ವಾದವನ್ನು ಒಪ್ಪದ ಕೋರ್ಟ್‌ ಮನವಿಯನ್ನು ತಿರಸ್ಕರಿಸಿದೆ. ಒಂದು ಬಿಸ್ಕೆಟ್ ಕಡಿಮೆ ಮಾಡಿದ ತಪ್ಪಿಗೆ ದೂರುದಾರ ದಿಲ್ಲಿಬಾಬು ಅವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಒಂದು ಬಿಸ್ಕೆಟ್ ಮಿಸ್‌ ಮಾಡಿದ್ದಕ್ಕೆ 1 ಲಕ್ಷ ದಂಡ; ಸನ್‌ಫೀಸ್ಟ್ ಮೇರಿ ‘ಲೈಟ್‌’ ವೇಟ್ ಆಗಿದ್ದೇಕೆ? ಆಮೇಲೆ ಏನಾಯ್ತು?

https://newsfirstlive.com/wp-content/uploads/2023/09/Marie-Light-Biscuit.jpg

Load More