newsfirstkannada.com

ಮುದ್ದಾದ ಮಗುವನ್ನು ಬ್ಲೇಡ್​ನಿಂದ ಕೊಲೆಗೈದ ಪಾಪಿ ಅಮ್ಮ

Share :

10-06-2023

    ತಾನೇ ಹೆತ್ತ ಮಗುವಿಗೆ ಕೊಳ್ಳಿಯಿಟ್ಟು ಆತ್ಮಹತ್ಯೆಗೆ ಯತ್ನ

    ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಭಯಾನಕ ಕೃತ್ಯ

    ಗಂಡನ ವಿಚಾರಣೆ ವೇಳೆ ಗೊತ್ತಾಯ್ತು ಅಸಲಿ ಸತ್ಯ

ತುಮಕೂರು: ಒಂದು ವರ್ಷದ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಬ್ಲೇಡ್​ನಿಂದ ಕೊಲೆ ಮಾಡಿರೋ ಘಟನೆ ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.

ಮಧುಗಿರಿ ಬಳಿಯ ತಿಪ್ಪಾಪುರ ಛತ್ರದ ಹಿಂಭಾಗದ ನಿವಾಸಿ ಶಿವಾನಂದ ಎಂಬವವರ ಪತ್ನಿ ಶ್ವೇತಾ, ಮನೆಯಲ್ಲಿ ಆಟವಾಡುತ್ತಿದ್ದ ಹೆಣ್ಣು ಮಗುವಿನ ಕೈಯನ್ನು ಬ್ಲೇಡ್​​ನಿಂದ ಕುಯ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ಅಲ್ಲದೇ ಮಗುವಿನ ಕೈ ಕೊಯ್ದ ಬಳಿಕ ತಾಯಿ ತನ್ನ ಕುತ್ತಿಗೆಯನ್ನೂ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಪತಿ ಬಿಚ್ಚಿಟ್ಟ ಮಾಹಿತಿ

ವಿಷಯ ಗೊತ್ತಾಗಿ ಸ್ಥಳೀಯರು ಇಬ್ಬರನ್ನೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದರೂ ಮಗು ಅಷ್ಟರಲ್ಲಾಗಲೇ ಸಾವಿಗೀಡಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಶಿವಾನಂದ ಬಳಿ ವಿಚಾರಣೆ ನಡೆಸಿದ್ದಾಗ ಶ್ವೇತಾ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿದೆ. ಇತ್ತೀಚೆಗಷ್ಟೇ ಪತ್ನಿ ಶ್ವೇತಾ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದಳು ಎಂದು ಶಿವಾನಂದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುದ್ದಾದ ಮಗುವನ್ನು ಬ್ಲೇಡ್​ನಿಂದ ಕೊಲೆಗೈದ ಪಾಪಿ ಅಮ್ಮ

https://newsfirstlive.com/wp-content/uploads/2023/06/baby-1.jpg

Load More