ಕಾಂಗ್ರೆಸ್, ಬಿಜೆಪಿ ಮಧ್ಯೆ ತಾರಕಕ್ಕೇರಿದ ಅಕ್ಕಿ ರಾಜಕೀಯ
ಅಕ್ಕಿ ಕೊಡದಿದ್ದರೆ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕೈ ಚಿಂತನೆ
ಮುಂದಿನ ತಿಂಗಳಿನಿಂದಲೇ ‘ಅನ್ನಭಾಗ್ಯ’ ಸಿಗೋದು ಡೌಟು!
ಬೆಂಗಳೂರು: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರೋ ಕಾಂಗ್ರೆಸ್, ಅನ್ನಭಾಗ್ಯ ಗ್ಯಾರಂಟಿಯನ್ನ ಬಡವರ ಮಡಿಲಿಗೆ ಹಾಕಲು ಮುಂದಾಗಿತ್ತು. ಹಸಿದವರ ಹೊಟ್ಟೆ ತುಂಬಿಸಲು 10 ಕೆಜಿ ಗ್ಯಾರಂಟಿ ಅಕ್ಕಿ ನೀಡಲು ನಿರ್ಧರಿಸಿತ್ತು. ಆದ್ರೆ ಅನ್ನಭಾಗ್ಯ ಯೋಜನೆ ಜಾರಿಗೆ ಕೇಂದ್ರ ಅಡ್ಡಗಾಲು ಹಾಕಿದೆ. ಇದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಹಾದಿ ತುಳಿಯುವಂತೆ ಮಾಡಿದೆ. ಇದೇ ವಿಚಾರ ಕೈ-ಕಮಲ ನಾಯಕರ ಮಧ್ಯೆ ವಾಗ್ಯುದ್ಧಕ್ಕೂ ಕಾರಣವಾಗಿದೆ.
ಅನ್ನಭಾಗ್ಯ ಬಡವರ ಹಸಿವನ್ನ ನೀಗಿಸ್ತಿರೋ ಯೋಜನೆ. ಬಡ ಜನರಿಗೆ ಉಚಿತವಾಗಿ ‘ಅನ್ನ’ರಾಮಯ್ಯ ಸರ್ಕಾರ ನೀಡಿರೋ ಮಹತ್ವಾಕಾಂಕ್ಷಿ ಯೋಜನೆ. ಆದ್ರೀಗ ಬಡವರ ಅಕ್ಷಯ ಪಾತ್ರೆಯಂತಿರೋ ಅನ್ನಕ್ಕೆ ಕೇಂದ್ರ ಸರ್ಕಾರ ಕಲ್ಲು ಹಾಕುತ್ತಿದೆ ಅಂತಾ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಜ್ಜಾಗಿದ್ದಾರೆ.
ಮೋದಿ-ಸಿದ್ದರಾಮಯ್ಯ ಸರ್ಕಾರದ ಮಧ್ಯೆ ‘ರೈಸ್’ ಸಂಘರ್ಷ
ಅಕ್ಕಿ ಕೊಡದ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ‘ಕೈ’ ಕರೆ!
ಕಳೆದ ಮೂರು ದಿನಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಅಕ್ಕಿ ರಾಜಕೀಯ ತಾರಕಕ್ಕೇರಿದೆ. ಕೇಂದ್ರ ಸರ್ಕಾರದ ರಾಜ್ಯಕ್ಕೆ ಕೊಡಬೇಕಿದ್ದ 5 ಕೆ.ಜಿ ಅಕ್ಕಿಯನ್ನ ತಡೆಹಿಡಿದಿದೆ ಅಂತಾ ಕಾಂಗ್ರೆಸ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಇದೇ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಜೂನ್ 20ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆಕೊಟ್ಟಿದ್ದಾರೆ.
ಇನ್ನೂ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಎಲ್ಲಾ ಶಾಸಕರು ಭಾಗಿಯಾಗಲಿದ್ದಾರೆ ಅಂತಾ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಅಲ್ಲದೇ ಬಿಜೆಪಿ ಸಂಸದರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿ ಅಂತಾ ಸವಾಲು ಹಾಕಿದ್ದಾರೆ. ಇತ್ತ ಶಾಸಕ ಸತೀಶ್ ಜಾರಕಿಹೊಳಿ ಕೂಡಾ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗರ ಧಮ್ ಮತ್ತು ತಾಕತ್ತಿಗೆ ನೇರ ಸವಾಲು ಹಾಕಿದ್ದಾರೆ.
‘ಕುಣಿಯುವುದಕ್ಕೆ ಬರಲಾಗದವನಿಗೆ ನೆಲ ಡೊಂಕು’
ಇನ್ನೂ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಮೇಲೆ ಮಾಡ್ತಿರೋ ಆರೋಪಕ್ಕೆ ಬಿಜೆಪಿ ನಾಯಕರು ಕೆಂಡಾಮಂಡಲ ಆಗಿದ್ದಾರೆ. ಕುಣಿಯಲು ಬಾರದವನು ನೆಲ ಡೊಂಕು ಅದ್ನಂತೆ ಅಂತಾ ಮೋಜಿ ಕಡೆ ಬೊಟ್ಟು ಮಾಡ್ತಿರೋ ಕಾಂಗ್ರೆಸ್ ಸರ್ಕಾರದ ಬಗ್ಗೆ ಕೇಸರಿ ಕಲಿಗಳು ಲೇವಡಿ ಮಾಡಿದ್ದಾರೆ.
ಒಟ್ಟಾರೆ, ರಾಜ್ಯದಲ್ಲಿ ಅಕ್ಕಿ ರಾಜಕೀಯ ತಾರಕಕ್ಕೇರಿದೆ. ನೀ ಕೊಡೆ.. ನಾ ಬಿಡೆ ಎನ್ನುವಂತೆ ಮೋದಿ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರದ ಮಧ್ಯೆ ತಿಕ್ಕಾಟ ಜೋರಾಗಿದೆ. ಇದೀಗ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವಂತೆ ಮುಂದಿನ ತಿಂಗಳು ಬಡಜನರಿಗೆ ಅಕ್ಕಿ ಸಿಗುತ್ತೋ? ಇಲ್ವೋ ಅನ್ನೋದು ಸದ್ಯದ ಪ್ರಶ್ನೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ