ಮುಂದಿನ 3 ತಿಂಗಳಲ್ಲಿ ತುರ್ತಾಗಿ 4 ಸಾವಿರ ಬಸ್ ಖರೀದಿ
ಬಿಎಂಟಿಸಿಗೆ 2 ಸಾವಿರ ಹೊಸ ಬಸ್‌ಗಳ ಖರೀದಿಸೋ ಪ್ಲಾನ್
ಮತ್ತಷ್ಟು ಬಸ್ಗಳನ್ನ ಖರೀದಿ ಮಾಡೋಕೆ ಸಾರಿಗೆ ಇಲಾಖೆ
ಶಕ್ತಿ ಯೋಜನೆ ಜಾರಿಯಾಗಿ ಒಂದು ತಿಂಗಳು ಕಳೆದಿದೆ. ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡುತ್ತಾ ಶಕ್ತಿ ಯೋಜನೆಗೆ ಪವರ್ ತುಂಬುತ್ತಿದ್ದಾರೆ. ಮಹಿಳೆಯರ ಜೊತೆ ಪುರುಷರ ಓಡಾಟ ಕೂಡಾ ಹೆಚ್ಚಾಗಿದ್ದು ಲಾಸ್ನಲ್ಲಿದ್ದ ನಿಗಮಗಳು ಚೇತರಿಕೆಯತ್ತ ಹೆಜ್ಜೆ ಹಾಕಿವೆ. ಆದರೆ ಪ್ರಯಾಣಿಕರು ಹೆಚ್ಚಾದ್ರೂ ಬಸ್‌ಗಳ ಸಂಖ್ಯೆ ಕಡಿಮೆ ಇರೋದ್ರಿಂದ ನಿತ್ಯ ಒಂದಿಲ್ಲೊಂದು ಅವಾಂತರ ನಡೆಯುತ್ತಾನೇ ಇದೆ.
ಶಕ್ತಿಯಿಂದ ರಶ್ ಆಗಿರೋ ಬಸ್‌ಗಳಿಂದ ಜನ ಕಡಿಮೆ ಮಾಡಬೇಕು ಅಂದ್ರೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಹೀಗಾಗಿ ಸಾರಿಗೆ ಇಲಾಖೆ ಮತ್ತಷ್ಟು ಬಸ್ಗಳನ್ನ ಖರೀದಿ ಮಾಡೋಕೆ ಮುಂದಾಗಿದೆ. 10 ಸಾವಿರ ಬಸ್ಗಳನ್ನ ಖರೀದಿ ಮಾಡಲು ಸಾರಿಗೆ ಸಚಿವರು ನಿರ್ಧರಿಸಿದ್ದಾರೆ.
ಮುಂದಿನ 3 ತಿಂಗಳಲ್ಲಿ ತುರ್ತಾಗಿ 4 ಸಾವಿರ ಬಸ್ ಖರೀದಿ ಮಾಡಲಿರೋ ಸಾರಿಗೆ ಸಂಸ್ಥೆ ಬಿಎಂಟಿಸಿಗೆನೇ 2 ಸಾವಿರ ಹೊಸ ಬಸ್ಗಳನ್ನ ಖರೀದಿಸಲು ಪ್ಲಾನ್ ಮಾಡಿದೆ. ಸದ್ಯ ಬಿಎಂಟಿಸಿ ಬಳಿ 6,500 ಬಸ್ಗಳು ಕಾರ್ಯ ನಿರ್ವಹಿಸುತ್ತಿವೆ. ಹಲವು ಬಸ್ಗಳು 10 ಲಕ್ಷ ಕಿ.ಮೀಗೂ ಹೆಚ್ಚು ಓಡಾಟ ನಡೆಸಿವೆ. ಈ ಬಸ್ಗಳನ್ನ ಸ್ಕ್ರ್ಯಾಪ್ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಬಸ್ ಕೊರತೆಯಿಂದ ಕೆಲ ರೂಟ್ಗಳು ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಹೊಸ ಬಸ್ ಖರೀದಿ ಬಳಿಕ ಕ್ಯಾನ್ಸಲ್ ಆದ ರೂಟ್ ಪುನಾರಂಭ ಮಾಡಲು ಹೊಸ ಬಸ್ಗಳು ಸಹಾಯಕಾರಿಯಾಗಿದೆ.
ಶಕ್ತಿ ಯೋಜನೆ ಬಳಿಕ ಶಾಲಾ, ಕಾಲೇಜು ಮಕ್ಕಳಿಗೂ ತೊಂದರೆಯುಂಟಾಗಿದ್ದು, ಅದನ್ನ ಸರಿ ಮಾಡೋಕೂ ಬಸ್‌ಗಳ ಅಗತ್ಯವಿದೆ. ಹೀಗಾಗಿ ಹೊಸ ಬಸ್ ಖರೀಗೆ ಸಾರಿಗೆ ಇಲಾಖೆ ಮುಂದಾಗಿದೆ. ಅದೇನೇ ಇರಲಿ ಶಕ್ತಿ ಯೋಜನೆ ಸಾರಿಗೆ ಇಲಾಖೆಗೆ ಶಕ್ತಿ ತುಂಬಿದ್ದು, ಇಷ್ಟು ದಿನ ಲಾಸ್ ಲಾಸ್ ಅಂತಿದ್ದ ಸಂಸ್ಥೆ ಇನ್ಮುಂದೆ ಲಾಭವನ್ನು ಕಾಣುತ್ತಾ, ಒದ್ದಾಡ್ಕೊಂಡು, ನೇತಾಡಿಕೊಂಡು ಬಸ್‌ನಲ್ಲಿ ಹೋಗೋ ಪ್ರಯಾಣಿಕರ ಸಮಸ್ಯೆಗೆ ಮುಕ್ತಿ ಸಿಗುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ