ಆಪರೇಷನ್ ಸಕ್ಸಸ್ ಎಂದಿದ್ದ ವೈದ್ಯರು, ಆಮೇಲೇನಾಯ್ತು..?
ಅಪೆಂಡಿಕ್ಸ್ ಆಪರೇಷನ್ಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ
ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ!
ಚಾಮರಾಜನಗರ: ವೈದ್ಯರ ನಿರ್ಲಕ್ಷ್ಯದಿಂದ ಬಾಲಕನೊರ್ವ ಸಾವನ್ನಪ್ಪಿರೋ ಘಟನೆ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹಳೇ ಹಂಪಾಪುರ ಗ್ರಾಮದ ವಿಜಯ್ (10) ಮೃತ ದುರ್ದೈವಿ.
ಅಪೆಂಡಿಕ್ಸ್ ಆಪರೇಷನ್ಗಾಗಿ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಪರೇಷನ್ ಯಶಸ್ವಿಯಾಗಿದೆಂದು ವೈದ್ಯರು ತಿಳಿಸಿದ್ದರು. ಆದರೆ ಶಸ್ತ್ರ ಚಿಕಿತ್ಸೆಯಾದ ಬೆನ್ನಲ್ಲೇ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಶಸ್ತ್ರ ಚಿಕಿತ್ಸೆಗೆ ಮೊದಲು ಸರಿಯಾದ ಅರವಳಿಕೆ ಚುಚ್ಚುಮದ್ದು ಕೊಟ್ಟಿಲ್ಲ. ಹೀಗಾಗಿ ನಮ್ಮ ಮಗನ ಸಾವಿಗೆ ವೈದ್ಯರೆ ಕಾರಣ ಎಂದು ಕುಟುಂಬಸ್ಥರ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ, ಕೊಳ್ಳೇಗಾಲ ಎಸಿ ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.