ಯುರೋಪ್ ಪ್ರತಿಯೊಂದು ದೇಶಕ್ಕೂ ಭೇಟಿ ಕೊಟ್ಟ ಪುಟಾಣಿ
ಪ್ರತಿ ವರ್ಷ 21 ಲಕ್ಷ ರೂಪಾಯಿ ಖರ್ಚು ಮಾಡೋ ಪೋಷಕರು
ಭಾರತೀಯ ಮೂಲದ ಅದಿತಿ ತ್ರಿಪಾಠಿ ಸಂಚಾರದ ಸೀಕ್ರೆಟ್ ಏನು?
ಲಂಡನ್: ಭಾರತೀಯ ಮೂಲದ ಅದಿತಿ ತ್ರಿಪಾಠಿ ಕೇವಲ 10 ವರ್ಷಕ್ಕೆ 50 ದೇಶಗಳಿಗೆ ಭೇಟಿ ಕೊಟ್ಟು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಹಣ ಇದ್ದವರು 10 ವರ್ಷದಲ್ಲಿ 50 ಅಲ್ಲ, 100 ದೇಶಗಳನ್ನು ಬೇಕಾದ್ರೂ ಸುತ್ತಿ ಬರಬಹುದಲ್ವಾ. ಇದರಲ್ಲೇನು ವಿಶೇಷ ಅಂತಾ ನೀವು ಯೋಚನೆ ಮಾಡಬಹುದು. ನಿಮ್ಮ ಊಹೆಯೇನೋ ಸರಿಯಾಗಿದೆ. ಆದರೆ ಅದಿತಿ ತ್ರಿಪಾಠಿ ಅವರ 50 ದೇಶಗಳ ಸಂಚಾರದ ವಿಚಾರನೇ ಬೇರೆ. ಈ ಪುಟ್ಟ ಬಾಲಕಿಯ ವಿಶ್ವ ಪರ್ಯಟನೆಗೆ ಈಕೆಯ ಅಪ್ಪ, ಅಮ್ಮ ಕೂಡ ಸಖತ್ ಪ್ಲಾನ್ ಮಾಡಿದ್ದಾರೆ. ಅದಿತಿ ತ್ರಿಪಾಠಿಯ 50 ದೇಶಗಳ ಸಂಚಾರದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ದೀಪಕ್ ಹಾಗೂ ಅವಿಲಾಶಾ ದಂಪತಿಯ ಮುದ್ದಿನ ಮಗಳು ಅದಿತಿ ತ್ರಿಪಾಠಿ. ಅದಿತಿ ಸದ್ಯ ಸೌಥ್ ಲಂಡನ್‌ನಲ್ಲಿ ತನ್ನ ಅಪ್ಪ, ಅಮ್ಮನ ಜೊತೆ ನೆಲೆಸಿದ್ದಾರೆ. ಲಂಡನ್‌ನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರೋ ಅದಿತಿ ಒಂದು ದಿನವೂ ಶಾಲೆಗೆ ಚಕ್ಕರ್ ಹಾಕಿಲ್ಲ. ಒಂದು ದಿನವೂ ಶಾಲೆಗೆ ರಜೆ ಹಾಕದೇ ಅದಿತಿ ತ್ರಿಪಾಠಿ 50 ದೇಶಕ್ಕೆ ಭೇಟಿ ಕೊಟ್ಟಿರೋದೇ ಸ್ಪೆಷಲ್ ಆಗಿದೆ. ಕೇವಲ 10 ವರ್ಷಕ್ಕೆ ಈ ಪುಟಾಣಿ ಯುರೋಪ್‌ನ ಪ್ರತಿಯೊಂದು ದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ ನೇಪಾಳ, ಥೈಲ್ಯಾಂಡ್, ಇಂಡೋನೇಷ್ಯಾ, ಸಿಂಗಾಪುರ ಸೇರಿದಂತೆ 50 ದೇಶಗಳನ್ನು ಸುತ್ತಿ ಬಂದಿದ್ದಾರೆ.
ಪುಟಾಣಿ ಅದಿತಿ ತ್ರಿಪಾಠಿ ಹುಟ್ಟಿದಾಗಲೇ ಈಕೆಯ ಪೋಷಕರು ಒಂದು ನಿರ್ಧಾರ ಮಾಡಿದ್ದಾರೆ. ನನ್ನ ಮಗಳಿಗೆ ಇಡೀ ಪ್ರಪಂಚದ ಪರಿಚಯವಾಗಬೇಕು. ಎಲ್ಲಾ ದೇಶದ ಸಂಸ್ಕೃತಿ, ಆಹಾರ, ಜನರ ಬಗ್ಗೆ ತಿಳಿಸಬೇಕು ಅಂದುಕೊಂಡಿದ್ದಾರೆ. ಇದಕ್ಕಾಗಿ ಶಾಲೆಯಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಬಾರದು ಅನ್ನೋದು ಇವರ ನಿರ್ಧಾರವಾಗಿದೆ. ಇದಕ್ಕಾಗಿಯೇ ದೀಪಕ್ ಹಾಗೂ ಅವಿಲಾಶಾ ದಂಪತಿ ಪ್ಲಾನ್ ಮಾಡಿದ್ದಾರೆ. ಮಗಳು ದೇಶ, ದೇಶಗಳ ಸುತ್ತಾಟಕ್ಕೆ ಪ್ರತಿ ವರ್ಷ 21 ಲಕ್ಷ ರೂಪಾಯಿ ಖರ್ಚು ಮಾಡಲು ನಿರ್ಧರಿಸಿದ್ದಾರೆ.
ಮಗಳ ಜೊತೆ ದೇಶ, ದೇಶಗಳನ್ನ ಸುತ್ತಲು ದೀಪಕ್ ಹಾಗೂ ಅವಿಲಾಶಾ ದಂಪತಿ ಶಾಲೆಯ ರಜಾ ದಿನಗಳು ಹಾಗೂ ಬ್ಯಾಂಕ್ ರಜಾ ದಿನಗಳನ್ನೇ ಬಳಸಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಅಪ್ಪ, ಅಮ್ಮ ಮಗಳು ವಿಮಾನ ಹತ್ತಿದ್ರೆ ಸೋಮವಾರ ಬೆಳಗ್ಗೆಗೆ ವಾಪಸ್ ಮನೆಗೆ ಬಂದಿದ್ದಾರೆ. ಹೀಗೇ ಒಂದು ದಿನವೂ ಸ್ಕೂಲ್‌ಗೆ ರಜೆ ಹಾಕದೇ ಅದಿತಿ ತ್ರಿಪಾಠಿ 50 ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿ ಬಾರಿ ಮಗಳ ಜೊತೆ ವಿದೇಶ ಪ್ರವಾಸಕ್ಕೆ ಹೋದ ಫೋಟೋಗಳನ್ನ ಅದಿತಿ ತ್ರಿಪಾಠಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Chisinau,Moldova. My country number 49. pic.twitter.com/aVl60x67Rm
— Aditi Tripathi(Account handled by her parents) (@AditiFoxfield) June 5, 2023