ಶಾರುಖ್ ಖಾನ್‌ಗೆ ಪ್ರತಿ ದಿನ 100 ಸಿಗರೇಟ್ ಸೇದೋ ಚಟ ಬಿಡೋಕೆ ಆಗಿಲ್ಲ
2011ರಲ್ಲೇ ಬಾಲಿವುಡ್ ಕಿಂಗ್ ತಮ್ಮ ಚಟಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ರು
ಆಸ್ಕ್ ಮಿ ಎನಿಥಿಂಗ್ ಸಂಭಾಷಣೆಯಲ್ಲಿ ಖಾನ್ ಒಪ್ಪಿಕೊಂಡ್ರು ಸಿಗರೇಟ್ ಸತ್ಯ
ಮುಂಬೈ: ಕಿಂಗ್ ಖಾನ್, ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಪ್ರತಿ ದಿನ ಬರೋಬ್ಬರಿ 100 ಸಿಗರೇಟ್ ಸೇದುತ್ತಾರಾ? ಇದು ಯಾವುದೋ ಗಾಸಿಪ್ ಅಥವಾ ಗಾಳಿ ಸುದ್ದಿಯ ಮಾತಲ್ಲ. ಖುದ್ದು ಶಾರುಖ್ ಖಾನ್ ಅವರೇ ತನಗಿರೋ ಕೆಟ್ಟ ಅಭ್ಯಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಶಾಕಿಂಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.
ಶಾರುಖ್ ಖಾನ್ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಇತ್ತೀಚಿಗೆ ಆಸ್ಕ್ ಮಿ ಎನಿಥಿಂಗ್ ಅಂತಾ ತಮ್ಮ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹೀಗೆ ಟ್ವೀಟ್ ಮಾಡುವಾಗ ಅಭಿಮಾನಿಯೊಬ್ಬ ನೀವು ಸಿಗರೇಟ್ ಸೇದುವುದನ್ನ ಬಿಟ್ಟಿದ್ದೀರಿ ಅಂತಾ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್ ಖಾನ್, ಹೌದು ನಾನು ಸುಳ್ಳು ಹೇಳಿದ್ದೇನೆ. ಕ್ಯಾನ್ಸರ್ ಕಡ್ಡಿಯ ಹೊಗೆ ನನ್ನನ್ನು ಸುತ್ತುವರಿದಿದೆ ಎಂದು ರಿಪ್ಲೈ ಮಾಡಿದ್ದಾರೆ.
2011ರಲ್ಲೇ ಸಿಗರೇಟ್ ಸತ್ಯ ಒಪ್ಪಿಕೊಂಡಿದ್ರು
ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಸಿಗರೇಟ್‌ನ ಚರ್ಚೆ ಇದೇ ಮೊದಲಲ್ಲ. ಇನ್ನು 2011ರಲ್ಲಿ ನೀಡಿದ ಸಂದರ್ಶನದಲ್ಲೇ ಶಾರುಖ್ ಖಾನ್ ತನ್ನ ಸಿಗರೇಟ್ ಚಟದ ಬಗ್ಗೆ ಬಾಯ್ಬಿಟ್ಟಿದ್ದರು. ನಾನು ಪ್ರತಿದಿನ 100 ಸಿಗರೇಟ್‌ಗಳನ್ನು ಸೇದುತ್ತೇನೆ. ಊಟ ಮಾಡುವುದನ್ನೇ ಮರೆತರು 30ಕ್ಕೂ ಹೆಚ್ಚು ಬ್ಲ್ಯಾಕ್ ಕಾಫಿಗಳನ್ನು ಕುಡಿಯುತ್ತೇನೆ ಎಂದಿದ್ದರು. ಇದಾದ ಬಳಿಕ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ನಡೆಯುವಾಗ ಶಾರುಖ್ ಸಿಗರೇಟ್ ಸೇದುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕವಾಗಿ ಹಲವಾರು ಬಾರಿ ಶಾರುಖ್ ಸಿಗರೇಟ್ ಸೇದಿದ ಘಟನೆಗಳು ನಡೆದಿದೆ.
ಜೀವನದಲ್ಲಿ ಅಂದುಕೊಂಡಿದ್ದನ್ನೆಲ್ಲ ಸಾಧಿಸಿರುವ ಶಾರುಖ್ ಖಾನ್‌ಗೆ ಸಿಗರೇಟ್ ಸೇದುವ ಚಟವನ್ನು ಮಾತ್ರ ಬಿಡಲು ಸಾಧ್ಯವಾಗಿಲ್ಲ. ತಾನು ದಿನಕ್ಕೆ 100 ಸಿಗರೇಟ್ ಸೇದುತ್ತೇನೆ ಎಂದು ಸ್ವತಃ ಶಾರುಖ್ ಹೇಳಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ತಂದಿದೆ. ಆಸ್ಕ್ ಮಿ ಎನಿಥಿಂಗ್ ಅನ್ನೋ ಪ್ರಶ್ನಾವಳಿಯಲ್ಲಿ ಶಾರುಖ್ ಖಾನ್ ಹಲವು ವಿಚಾರಗಳು ಹೀಗೆ ಚರ್ಚೆಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
Yes he lied, surrounded by a thick plume of smoke from his cancer stick!!! https://t.co/GmKlXV296K
— Shah Rukh Khan (@iamsrk) June 12, 2023