newsfirstkannada.com

100 ಗೆಸ್ಟ್, 10 ಬಗೆಯ ಫುಡ್, 2,500 ರೂ. ಗಿಫ್ಟ್‌; ಮದುವೆಯ ದುಂದು ವೆಚ್ಚಕ್ಕೆ ಕಡಿವಾಣ ಹಾಕೋ ಕಾನೂನು ಜಾರಿಯಾಗುತ್ತಾ?

Share :

05-08-2023

    ಒಂದು ಮದುವೆಗೆ 100 ಅತಿಥಿಗಳಿಗೆ ಮಾತ್ರ ಆಹ್ವಾನ ಸಿಗಬೇಕು

    ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಖಾಸಗಿ ಮಸೂದೆ ಮಂಡನೆ

    ಮದುವೆ ಊಟವನ್ನು ಕಸದ ತೊಟ್ಟಿಗೆ ಬಿಸಾಡೋದು ತಪ್ಪು!

ಮದುವೆ ಅಂದ್ರೆ ಆಡಂಬರ, ಮದುವೆ ಅಂದ್ರೆ ಅಬ್ಬರ, ಮದುವೆ ಅಂದ್ರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವವರನ್ನ ನಾವು ನೀವೆಲ್ಲಾ ನೋಡಿದ್ದೇವೆ. ಮದುವೆ ವಿಜೃಂಭಣೆಗೆ ಇಷ್ಟೊಂದು ಖರ್ಚು ಮಾಡಬೇಕಾ ಅನ್ನೋದು ಒಂದು ಪ್ರಶ್ನೆ. ದುಡ್ಡಿದ್ದವರೇನೋ ಧಾರಾಳವಾಗಿ ಮದುವಗಾಗಿ ದುಡ್ಡು ಸುರಿಯುತ್ತಾರೆ. ಆದರೆ, ಬಡವರು ಒಂದು ಹೆಣ್ಣು ಮಗಳ ಮದುವೆ ಮಾಡಿ ಮುಗಿಸುವಷ್ಟರಲ್ಲಿ ಇದ್ದಬದ್ದ ಹಣವನ್ನೆಲ್ಲಾ ಕಳೆದುಕೊಳ್ತಾರೆ. ಎಷ್ಟೋ ಜನ ಸಾಲ ಮಾಡಿನೇ ಮದುವೆ ಮಾಡೋ ಪರಿಸ್ಥಿತಿ ನಮ್ಮ ದೇಶದಲ್ಲಿ. ಹೀಗೆ ಆಡಂಬರ, ಅಬ್ಬರದಲ್ಲಿ ದುಂದು ವೆಚ್ಚ ಮಾಡೋ ಮದುವೆಗಳಿಗೆ ಕಡಿವಾಣ ಹಾಕಬೇಕು ಅನ್ನೋ ಕೂಗು ಕೇಳಿ ಬಂದಿದೆ. ಲೋಕಸಭೆಯಲ್ಲಿ ಸಂಸದರೊಬ್ಬರು ಈ ಕುರಿತು ಮಹತ್ವದ ಮಸೂದೆಯನ್ನು ಮಂಡಿಸಿ ಗಮನ ಸೆಳೆದಿದ್ದಾರೆ.

ಕಳೆದ ಶುಕ್ರವಾರ ಲೋಕಸಭೆಯಲ್ಲಿ ಪಂಜಾಬ್‌ನ ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಅವರು ಖಾಸಗಿ ಮಸೂದೆಯೊಂದನ್ನು ಪ್ರಸ್ತಾಪಿಸಿದ್ದಾರೆ. ಈ ಬಿಲ್‌ನಲ್ಲಿ ಅದ್ಧೂರಿ ಮದುವೆಯ ಖರ್ಚಿಗೆ ಕಡಿವಾಣ ಹಾಕಲು ಸಂಸದರು ಒತ್ತಾಯಿಸಿದ್ದಾರೆ. ಮದುವೆ ಅಂದ್ರೆ ನೂರಾರು ಜನರಿಗೆ ಆಹ್ವಾನ ನೀಡಲಾಗುತ್ತೆ. ದುಬಾರಿ ಖರ್ಚಿನ ಜೊತೆಗೆ ಹತ್ತಾರು ಬಗೆಯ ಆಹಾರ ಪದಾರ್ಥಗಳನ್ನು ರೆಡಿ ಮಾಡಲಾಗುತ್ತೆ. ಇದರಿಂದ ದುಂದು ವೆಚ್ಚದ ಜೊತೆಗೆ ರೆಡಿ ಮಾಡಿದ್ದ ಎಷ್ಟೋ ಊಟವನ್ನು ಕಸದ ತೊಟ್ಟಿಗೆ ಬಿಸಾಡೋದು ಸಾಮಾನ್ಯವಾಗಿದೆ. ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಸಂಸದ ಜಸ್ಬೀರ್ ಸಿಂಗ್ ಗಿಲ್ ಅವರು ಈ ಖಾಸಗಿ ಮಸೂದೆಯಲ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸಂಸದ ಜಸ್ಬೀರ್ ಸಿಂಗ್ ಗಿಲ್ ಅವರ ಮಸೂದೆಯಲ್ಲಿ ಸ್ಪಷ್ಟವಾಗಿ ಮದುವೆಯ ಆಡಂಬರಕ್ಕೆ ಕಡಿವಾಣ ಹಾಕಲು ಕೋರಲಾಗಿದೆ. ಅಂದ್ರೆ ಮದುವೆಗೆ ಆಹ್ವಾನಿಸುವ ಅತಿಥಿಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು. ಒಂದು ಮದುವೆಗೆ 100 ಜನ ಗೆಸ್ಟ್‌ಗಳು ಬಂದರೆ ಸಾಕು. ಇನ್ನೂ ಮದುವೆ ಊಟದಲ್ಲಿ ಉಂಡವನೇ ಜಾಣ ಅಂತಾ ಆಗೋದು ಬೇಡ. ಹೀಗಾಗಿ 10 ಬಗೆಯ ತಿಂಡಿ, ತಿನಿಸುಗಳಿಗೆ ಸೀಮಿತಗೊಳಿಸಬೇಕು. ಪ್ರಮುಖವಾಗಿ ನವವಧುವರರಿಗೆ ನೀಡುವ ಉಡುಗೊರೆಗೂ ಕಡಿವಾಣ ಹಾಕಬೇಕು ಅನ್ನೋ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ. ಮದುವೆಯಲ್ಲಿ ನೀಡಲಾಗುವ ಗಿಫ್ಟ್‌ಗಳ ಮೌಲ್ಯ 2,500 ರೂಪಾಯಿಯನ್ನು ಮೀರದಂತೆ ನೋಡಿಕೊಳ್ಳಬೇಕು. ಈ ದುಂದುವೆಚ್ಚದ ಉಡುಗೊರೆಗಳ ಬದಲಿಗೆ, ಬಡವರು, ನಿರ್ಗತಿಕರು, ಅನಾಥರು ಅಥವಾ ಸಮಾಜದ ದುರ್ಬಲ ವರ್ಗಗಳಿಗೆ ಅಥವಾ ಎನ್‌ಜಿಒಗಳಿಗೆ ದೇಣಿಗೆ ನೀಡಬೇಕು ಎನ್ನಲಾಗಿದೆ.

ಅದ್ಧೂರಿ ಮದುವೆಗೆ ಬ್ರೇಕ್ ಹಾಕುವ ಈ ಖಾಸಗಿ ಮಸೂದೆಯಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಜೊತೆಗೆ ಸಮಾಜಕ್ಕೆ ಹಲವು ಅನುಕೂಲಗಳಿವೆ ಎಂದು ತಿಳಿಸಲಾಗಿದೆ. ದೇಶಾದ್ಯಂತ ಮದುವೆಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ್ರೆ ಬಡವರು ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಹೊರೆಯಿಂದ ಪಾರಾಗಬಹುದು. ಅದರಲ್ಲೂ ಹೆಣ್ಣು ಮಕ್ಕಳನ್ನು ಹೆತ್ತ ಬಡ ಕುಟುಂಬಗಳಿಗೆ ಇದರಿಂದ ಭಾರೀ ಪ್ರಯೋಜನವಾಗಲಿದೆ. ಲಿಂಗ ಅನುಪಾತ, ಭ್ರೂಣಹತ್ಯೆ ಆಗುವುದನ್ನು ತಡೆಗಟ್ಟಬಹುದು ಎನ್ನಲಾಗಿದೆ.

ಖಾಸಗಿ ಮಸೂದೆ ಮಂಡನೆ ಜಾರಿಯಾಗುತ್ತಾ?

ಲೋಕಸಭೆಯಲ್ಲಿ ಸಂಸದ ಜಸ್ಬೀರ್ ಸಿಂಗ್ ಗಿಲ್ ಮಂಡಿಸಿರೋ ಈ ಬಿಲ್ ಖಾಸಗಿ ಮಸೂದೆಯಾಗಿದೆ. ಕಳೆದ ಜನವರಿ 2020ರಲ್ಲಿ ಗಿಲ್ ಅವರು ಈ ಮಸೂದೆಯನ್ನು ಮೊದಲ ಬಾರಿಗೆ ಮಂಡನೆ ಮಾಡಿದ್ರು. ನಿನ್ನೆ ಅಂದ್ರೆ ಆಗಸ್ಟ್ 04, 2023ರಂದು ಈ ಖಾಸಗಿ ಮಸೂದೆಯ ಚರ್ಚೆಗೆ ಲೋಕಸಭೆಯಲ್ಲಿ ಅವಕಾಶ ನೀಡಲಾಗಿದೆ. ಮೊದಲೇ ಹೇಳಿದಂತೆ ಇದೊಂದು ಖಾಸಗಿ ಮಸೂದೆಯಾಗಿದ್ದು ವಿರೋಧ ಪಕ್ಷದ ಸಂಸತ್ ಸದಸ್ಯರಿಂದ ಮಂಡನೆಯಾಗಿದೆ. ಕೇಂದ್ರ ಸರ್ಕಾರ ಈ ಮಸೂದೆಯನ್ನು ಒಪ್ಪಿಕೊಂಡು, ಸರ್ಕಾರಿ ಮಸೂದೆಯಾಗಿ ಮಂಡಿಸಬೇಕು. ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕಾರವಾದ್ರೆ ಮಾತ್ರ ಇದು ಕಾಯ್ದೆ ಆಗುತ್ತೆ. ಸದ್ಯ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾಂಗ್ರೆಸ್ ಸಂಸದನ ಖಾಸಗಿ ಮಸೂದೆಯನ್ನು ಗಂಭೀರವಾಗಿ ಪರಿಗಣಿಸುತ್ತಾ ಅನ್ನೋದೇ ಮೂಲ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

100 ಗೆಸ್ಟ್, 10 ಬಗೆಯ ಫುಡ್, 2,500 ರೂ. ಗಿಫ್ಟ್‌; ಮದುವೆಯ ದುಂದು ವೆಚ್ಚಕ್ಕೆ ಕಡಿವಾಣ ಹಾಕೋ ಕಾನೂನು ಜಾರಿಯಾಗುತ್ತಾ?

https://newsfirstlive.com/wp-content/uploads/2023/08/Wedding-Marriaga.jpg

Load More