newsfirstkannada.com

ಸಿಎಂ ಪರಿಹಾರ ನಿಧಿಗೆ 109 ಕೋಟಿ ರೂ. ಕೊಟ್ಟ ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌

Share :

Published July 4, 2024 at 6:12pm

Update July 4, 2024 at 6:19pm

    ಈ ಹಿಂದೆ ಮೈಸೂರು ಮಿನರಲ್ಸ್‌ ಸಂಸ್ಥೆಯಾಗಿದ್ದ KSMCL

    ಗಣಿಗಾರಿಕೆಯಲ್ಲಿ ತೊಡಗಿರುವ ಸರ್ಕಾರಿ ಮಾಲೀಕತ್ವದ ಉದ್ದಿಮೆ

    ಕಳೆದ ಸಾಲಿಗಿಂತ ಸುಮಾರು ಶೇಕಡಾ 90%ರಷ್ಟು ಅಧಿಕ ವಹಿವಾಟು

ಬೆಂಗಳೂರು: ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಹಿಂದೆ ಮೈಸೂರು ಮಿನರಲ್ಸ್‌ ಸಂಸ್ಥೆ) ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬರೋಬ್ಬರಿ 15 ಕೋಟಿ ರೂಪಾಯಿಗಳನ್ನ ನೀಡಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್.ಎಸ್.‌ ಮಲ್ಲಿಕಾರ್ಜುನ ಮತ್ತು ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ನ ಅಧ್ಯಕ್ಷ ಜಿ.ಎಸ್.ಪಾಟೀಲ್‌ ಅವರು 2022-23ನೇ ಸಾಲಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.10.00 ಕೋಟಿಗಳ ಧನಾದೇಶವನ್ನು ಹಾಗೂ ರೂ.109.07 ಕೋಟಿಗಳ ಲಾಭಾಂಶದ ಧನಾದೇಶವನ್ನು ನೀಡಿದ್ದಾರೆ.

ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಈ ಹಿಂದೆ ಮೈಸೂರು ಮಿನರಲ್ಸ್‌ ಸಂಸ್ಥೆ) ಗಣಿಗಾರಿಕೆಯಲ್ಲಿ ತೊಡಗಿರುವ ಕರ್ನಾಟಕ ಸರ್ಕಾರದ ಸಂಪೂರ್ಣ ಮಾಲೀಕತ್ವದ ಒಂದು ಸಾರ್ವಜನಿಕ ಉದ್ದಿಮೆಯಾಗಿದೆ. ಈ ಸಂಸ್ಥೆಯು 2022-23ನೇ ಸಾಲಿನಲ್ಲಿ ರೂ.757.89 ಕೋಟಿಗಳ ವಹಿವಾಟು ನಡೆಸಿ ರೂ.467.99 ಕೋಟಿ ತೆರಿಗೆ ಪೂರ್ವ ಲಾಭ ಹಾಗೂ ರೂ.366.64 ಕೋಟಿ ತೆರಿಗೆ ನಂತರದ ಲಾಭ ಗಳಿಸಿರುತ್ತದೆ.

ಇದನ್ನೂ ಓದಿ: VIDEO: ಪತ್ನಿ ಹೆಸರಿಗೆ 14 ಮೂಡಾ ಸೈಟ್‌ಗಳ ವಿಚಾರ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ 

ದಿನಾಂಕ 16.12.2023 ರಂದು ನಡೆದ 346ನೇ ಮಂಡಳಿ ಸಭೆಯಲ್ಲಿ ಕಂಪನಿಯು 2022-23ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ (Net profit) ಮೇಲೆ ಷೇರುದಾರರಿಗೆ ಅಂದರೆ ಸರ್ಕಾರಕ್ಕೆ ರೂ. 366.64 ಕೋಟಿಗಳನ್ನು ಶೇಕಡಾ 30% ಲಾಭಾಂಶವಾಗಿ ನೀಡಲು ಮಂಡಳಿ ನಿರ್ದೇಶಕರು ಒಪ್ಪಿಗೆ ನೀಡಿದz. ದಿನಾಂಕ 06.04.2024 ರಂದು ನಡೆದ 57ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.

ಪ್ರತಿ ವರ್ಷ ಈ ನಿಗಮದಿಂದ ರೂ.15 ಕೋಟಿಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. 2022-23ನೇ ಸಾಲಿಗೆ ರೂ.15.00 ಕೋಟಿಗಳನ್ನು ನಿಗಧಿಪಡಿಸಿದ್ದು, ರೂ. 5.00 ಕೋಟಿಗಳನ್ನು ಈಗಾಗಲೇ ಪಾವತಿಸಲಾಗಿದೆ. ಬಾಕಿ ರೂ.10.00 ಕೋಟಿಗಳನ್ನು ಈ ದಿನ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸುತ್ತಿದ್ದೇವೆ.

ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆಯಡಿಯಲ್ಲಿ ರೂ.12.99 ಕೋಟಿಗಳನ್ನು ಮಂಜೂರು ಮಾಡಿದ್ದು, ರೂ.9.68 ಕೋಟಿಗಳನ್ನು ಸಿಎಸ್‌ಆರ್‌ ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡಲಾಗಿದೆ.
2023-24ನೇ ಸಾಲಿನಲ್ಲಿ ಕಂಪನಿಯು ಕಳೆದ ಸಾಲಿಗಿಂತ ಸುಮಾರು ಶೇಕಡಾ 90%ರಷ್ಟು ಅಧಿಕ ವಹಿವಾಟನ್ನು ಮಾಡಿದ್ದು, ಆಡಿಟ್‌ ಪ್ರಗತಿಯಲ್ಲಿದೆ ಹಾಗೂ ಕಳೆದ ವರ್ಷಕ್ಕಿಂತ ಇನ್ನೂ ಹೆಚ್ಚಿನ ಲಾಭಾಂಶದ ನಿರೀಕ್ಷಣೆಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ ಪರಿಹಾರ ನಿಧಿಗೆ 109 ಕೋಟಿ ರೂ. ಕೊಟ್ಟ ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌

https://newsfirstlive.com/wp-content/uploads/2024/07/CM-Siddaramaiah.jpg

Load More