newsfirstkannada.com

ಕೇರಳದ ಪೌರ ಕಾರ್ಮಿಕರ ತಂಡಕ್ಕೆ ಖುಲಾಯಿಸಿದ ಅದೃಷ್ಟ.. ಬರೋಬ್ಬರಿ 10 ಕೋಟಿ ರೂಪಾಯಿ ಜಾಕ್​​ಪಾಟ್​..!

Share :

29-07-2023

    ಬದುಕು ಬದಲಾಯಿಸಿದ ಕೇರಳದ ಮಾನ್ಸೂನ್ ಲಾಟರಿ

    ತಲಾ 25 ರೂ. ಹಾಕಿ 10 ಕೋಟಿ ಗೆದ್ದ ಮಹಿಳೆಯರು

    ಈ ಹಿಂದೆಯೂ ಲಾಟರಿ ಗೆದ್ದಿದ್ದರು, ಎಷ್ಟು ಹಣ ಗೊತ್ತಾ?

ಕೇರಳದ ನಗರ ಪಾಲಿಕೆಯ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡನಾ ಘಟಕಕ್ಕೆ ಸೇರಿದ 11 ಮಹಿಳೆಯರ ಅದೃಷ್ಟ ಖುಲಾಯಿಸಿದೆ. ಈ 11 ಮಹಿಳೆಯರು ತಲಾ 25 ರೂಪಾಯಿ ಹಾಕಿ 250 ರೂಪಾಯಿಯ ಮಾನ್ಸೂನ್ ಬಂಪರ್ ಲಾಟರಿ ಖರೀಸಿದ್ದರು.

ಇದೀಗ ಅವರಿಗೆ 10 ಕೋಟಿ ರೂಪಾಯಿ ಜಾಕ್​ಪಾಟ್ ಹೊಡೆದಿದೆ. 10 ಕೋಟಿ ರೂಪಾಯಿನಲ್ಲಿ ಪ್ರತಿ ಮಹಿಳೆ 90 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಮಲಪ್ಪುರಂ ಜಿಲ್ಲೆಯ ಪರಪ್ಪನಂಗಡಿ ಮಹಾನಗರ ಪಾಲಿಕೆ ‘ಹರಿತಾ ಕರ್ಮಸೇನಾ’ ಹೆಸರಿನ ತ್ಯಾಜ್ಯ ನಿರ್ವಹಣಾ ಮಹಿಳಾ ತಂಡಕ್ಕೆ ಅದೃಷ್ಟ ಖುಲಾಯಿಸಿದೆ.

ಅಂದ್ಹಾಗೆ ಕಳೆದ ಬಾರಿ ಓಣಂ ಸಂದರ್ಭದಲ್ಲಿ ಹಣ ಸಂಗ್ರಹಿಸಿ ಲಾಟರಿ ಖರೀದಿಸಿದ್ದರು. ಈ ವೇಳೆ 7500 ರೂಪಾಯಿ ಗೆದ್ದಿದ್ದರು. ಅದರಂತೆ ಈ ಸಲ ಮಾನ್ಸೂನ್ ಬಂಪರ್ ಲಾಟರಿ ಗೆಲ್ಲೋಣ ಅಂದ್ಕೊಂಡು 250 ರೂಪಾಯಿಯ ಲಾಟರಿ ಖರೀದಿಸಿದ್ದರು. ಪ್ರತಿಯೊಬ್ಬರು ಒಂದೊಂದು ಲಾಟರಿ ಖರೀದಿ ಮಾಡಬೇಕು ಅಂದ್ಕೊಂಡಿದ್ದರು. ಆದರೆ ಅವರ ಬಳಿ ಅಷ್ಟೊಂದು ಹಣ ಇರಲಿಲ್ಲ. ಹೀಗಾಗಿ 25 ರೂಪಾಯಿಯಂತೆ 250 ರೂಪಾಯಿ ಹೊಂದಿಸಿ ಖರೀದಿಸಿದ್ದರು ಎಂದು ವರದಿಯಾಗಿದೆ.

ಇನ್ನೊಂದು ವಿಚಾರ ಏನೆಂದರೆ, ಅಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ 7500 ರೂಪಾಯಿಯಿಂದ 14 ಸಾವಿರ ರೂಪಾಯಿವೆಗೆ ಸಂಬಳ ಇದೆ. ಇದು ಅವರ ಜೀವನಕ್ಕೆ ಸಾಕಾಗುವುದಿಲ್ಲ. ಅದಕ್ಕಾಗಿ ಆಗಾಗ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳದ ಪೌರ ಕಾರ್ಮಿಕರ ತಂಡಕ್ಕೆ ಖುಲಾಯಿಸಿದ ಅದೃಷ್ಟ.. ಬರೋಬ್ಬರಿ 10 ಕೋಟಿ ರೂಪಾಯಿ ಜಾಕ್​​ಪಾಟ್​..!

https://newsfirstlive.com/wp-content/uploads/2023/07/Money-4.jpg

Load More