newsfirstkannada.com

Share :

25-05-2023

  ಹಠಾತ್ ಹೃದಯಾಘಾತದಿಂದ ಬಾಲಕ ಸಾವು

  ಜಾತ್ರೆಯಲ್ಲಿ ಬೌನ್ಸಿ ಬಲೂನ್​ ಆಡ್ತಿದ್ದ ಬಾಲಕ!

  ದೊಡ್ಡಬಳ್ಳಾಪುರ ಪೊಲೀಸ್ ಅಧಿಕಾರಿಗಳು ಭೇಟಿ

ಚಿಕ್ಕಬಳ್ಳಾಪುರ: ಬೌನ್ಸಿ ಬಲೂನ್‌ ಜಾರುಬಂಡಿಯಲ್ಲಿ ಆಡ್ತಿದ್ದ ಬಾಲಕನಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರೋ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ. ಶ್ರೇಯಸ್ (11) ಮೃತ ಬಾಲಕ.

ನಗರದ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಅಳವಡಿಸಿದ್ದ ಬೌನ್ಸಿ ಬಲೂನ್‌ ಜಾರುಬಂಡಿಯಲ್ಲಿ ಆಟವಾಡುವಾಗ ಬಾಲಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಕೂಡಲೇ ಬಾಲಕನಿಗೆ ನೋವು ಕಾಣಿಸಿಕೊಂಡಿದೆ. ಸ್ಥಳೀಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ‌ ಚಿಕಿತ್ಸೆ ನೀಡಲಾಗುತ್ತಿತ್ತು. ತಪಾಸಣೆ ವೇಳೆ ಬಾಲಕನಿಗೆ ಹೃದಯಾಘಾತ ಆಗಿರೋದು ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More