newsfirstkannada.com

×

ಮಿನಿ Moto GP ರೇಸ್‌ನಲ್ಲಿ ಬೈಕ್ ಕ್ರಾಶ್; 12 ವರ್ಷದ ಡರ್ಟ್‌ ಬೈಕ್ ರೇಸರ್ ಶ್ರೇಯಸ್ ಹರೀಶ್ ನಿಧನ

Share :

Published August 6, 2023 at 9:20am

    ಬೆಂಗಳೂರು ಮೂಲದ 12 ವರ್ಷದ ಶ್ರೇಯಸ್ ಹರೀಶ್

    ಭಾರತದ ಕಿರಿಯ ಡರ್ಟ್‌ ಬೈಕ್‌ ರೇಸರ್ ಅನ್ನೋ ಖ್ಯಾತಿ

    ರಾಷ್ಟ್ರೀಯ ಮಟ್ಟದಲ್ಲೂ ರೇಸ್​ ಗೆದ್ದು ಪ್ರಶಂಸೆಗೆ ಪಾತ್ರನಾಗಿದ್ದ

ಬೈಕ್ ರೇಸ್ ವೇಳೆ ಬೆಂಗಳೂರು ಮೂಲದ ಕಿರಿಯ ಡರ್ಟ್‌ ಬೈಕ್ ರೇಸರ್ ಚೆನ್ನೈನಲ್ಲಿ ಮೃತಪಟ್ಟಿದ್ದಾನೆ. 12 ವರ್ಷದ ಶ್ರೇಯಸ್ ಹರೀಶ್ ಸಾವನ್ನಪ್ಪಿರುವ ರೇಸರ್.

ನಿನ್ನೆ ಚೆನ್ನೈನಲ್ಲಿ ನಡೆದಿದ್ದ ಮಿನಿ ಮೊಟೊ ಜಿಪಿ ರೇಸ್‌ನಲ್ಲಿ ಶ್ರೇಯಸ್ ಭಾಗಿಯಾಗಿದ್ದ. ಈ ವೇಳೆ ಬೈಕ್ ಕ್ರಾಶ್ ಆಗಿ ಭಾರತದ ಕಿರಿಯ ಡರ್ಟ್‌ ಬೈಕ್‌ ರೇಸರ್ ಅನ್ನೋ ಖ್ಯಾತಿ ಪಡೆದಿದ್ದ ಶ್ರೇಯಸ್ ಸಾವನ್ನಪ್ಪಿದ್ದಾನೆ.

ಶ್ರೇಯಸ್​​ 2010, ಜುಲೈ 26ರಂದು ಜನಿಸಿದ್ದನು. ಬೆಂಗಳೂರಿನ ಕೆನ್ಸ್ರಿ ಶಾಲೆಯ ವಿದ್ಯಾಭ್ಯಾಸ ಮಾಡುತ್ತಿದ್ದನು. ಈತ ಪೆಟ್ರೋನಾಸ್​​ನ ರೂಕಿ ವಿಭಾಗದಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದಲ್ಲೂ ರೇಸ್​ ಗೆದ್ದು ಪ್ರಶಂಸೆಗೆ ಪಾತ್ರನಾಗಿದ್ದನು. ಈ ಸೀಸನ್​ನ ಟಿವಿಸ್​​ ಒನ್​-ಮೇಕ್​​ ಚಾಂಪಿಯನ್​ಶಿಪ್​​ನಲ್ಲಿ ಶ್ರೇಯಸ್​ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದನು. ಆದರೆ ಬೈಕ್​ ಕ್ರಾಶ್​ನಿಂದ ಸಾವನ್ನಪ್ಪಿದ್ದಾನೆ. ಇನ್ನು  ಶ್ರೇಯಶ್​ನ ಹಳೆಯ ಡರ್ಟ್‌ ಬೈಕ್ ರೇಸ್​​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಿನಿ Moto GP ರೇಸ್‌ನಲ್ಲಿ ಬೈಕ್ ಕ್ರಾಶ್; 12 ವರ್ಷದ ಡರ್ಟ್‌ ಬೈಕ್ ರೇಸರ್ ಶ್ರೇಯಸ್ ಹರೀಶ್ ನಿಧನ

https://newsfirstlive.com/wp-content/uploads/2023/08/Shreyas.jpg

Load More