ಬೆಳಕಾಗೋ ಹೊತ್ತಲ್ಲೇ ಆವರಿಸಿತು ಅಪಘಾತ ಕತ್ತಲು..!
ಸಿಮೆಂಟ್ ಬಲ್ಕರ್ಗೆ ಟಾಟಾ ಸುಮೋ ಡಿಕ್ಕಿ; 13 ಜನ ಸಾವು!
ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ
ಚಿಕ್ಕಬಳ್ಳಾಪುರ: ಇವತ್ತು ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತವೊಂದು ಚಿಕ್ಕಬಳ್ಳಾಪುರದ ಜನರನ್ನ ಬೆಚ್ಚಿ ಬೀಳಿಸಿಬಿಟ್ಟಿದೆ. ಸದಾ ವಾಹನಗಳು ಓಡಾಡ್ತಿದ್ದ ರಸ್ತೆಯಲ್ಲಿ ಶವಗಳ ಸಾಲು.. ರಕ್ತದೋಕುಳಿ.. ಮುಂಜಾನೆ ಮಂಜಲ್ಲಿ ತಮ್ ತಮ್ಮ ಕೆಲಸಕ್ಕೆ ಹೊರಟಿದ್ದವರು ಸೇರಿದ್ದು.. ಮಸಣದ ಮನೆಯನ್ನ.
ಇನ್ನು, ಚಿಕ್ಕಬಳ್ಳಾಪುರ ನಗರ ಹೊರವಲಯದ ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಟಾಟಾ ಸುಮೋ ವಾಹನ ನಿಂತಿದ್ದ ಸಿಮೆಂಟ್ ಬಲ್ಕರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟಾಟಾ ಸುಮೋದಲ್ಲಿದ್ದ 13 ಮಂದಿ ಸಾಲು ಸಾಲಾಗಿ ಸಾವಿನ ಮನೆ ಸೇರಿದ್ದಾರೆ.
ಬೆಳ್ಳಗ್ಗೆ 7 ಗಂಟೆ ಸುಮಾರಿಗೆ ಹೈವೇ ಮೂಲಕ ಸುಮೋ ಬರ್ತಿತ್ತು. ಈ ವೇಳೆ ದಟ್ಟ ಮಂಜು ಆವರಿಸಿದ್ದರಿಂದ ಚಾಲಕನಿಗೆ ದಾರಿ ಕಾಣಿಸದೇ ಸೈಡಲ್ಲಿ ನಿಂತಿದ್ದ ಸಿಮೆಂಟ್ ಬಲ್ಕರ್ಗೆ ಸುಮೋ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆ ಹೇಗಿತ್ತು ಅಂದ್ರೆ ಸುಮೋದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಸಂಚಾರಿ ಪೊಲೀಸ್ ಠಾಣೆಯ ಕೂಗಳತೆಯಲ್ಲೇ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು. ಆಸ್ಪತ್ರೆಗೆ ಎಸ್ಪಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.
ತಲಾ 2 ಲಕ್ಷ ಪರಿಹಾರ ಘೋಷಣೆ
ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 2 ಲಕ್ಷ ಪರಿಹಾರವನ್ನೂ ಘೋಷಿಸಲಾಗಿದೆ. ಆಂಧ್ರ ಪ್ರದೇಶದಿಂದ ಬಾಡಿಗೆ ಮೂಲಕ ಜನರನ್ನ ಬೆಂಗಳೂರಿಗೆ ಕರೆ ತರ್ತಿದ್ದ ಟಾಟಾಸುಮೋ ಚಾಲಕ ನಿನ್ನೆ ರಾತ್ರಿಯೇ ಒಂದು ಟ್ರಿಪ್ ಜನರನ್ನ ಬಿಟ್ಟು ಮತ್ತೊಂದು ಟ್ರಿಪ್ ಮೂಲಕ ಜನರನ್ನ ಕರೆತರುತ್ತಿದ್ದ ಎನ್ನಲಾಗ್ತಿದೆ. ಬೆಳಗ್ಗೆ 5 ಗಂಟೆಗೆ ಹೊರಟಿದ್ದ ಸುಮೋ 7 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ಇನ್ನೂ ಈ ಅಪಘಾತಕ್ಕೆ ಡ್ರೈವರ್ನ ಅತಿ ವೇಗದ ಜೊತೆಗೆ ಮಂಜು ಕವಿದಿದ್ದೇ ಕಾರಣ ಎನ್ನಲಾಗ್ತಿದೆ. ಜೊತೆಗೆ ಬಸ್ಗಳ ಸರಿಯಾದ ವ್ಯವಸ್ಥೆ ಇಲ್ಲದೇ ಇರೋದು ಒಂದು ಕಾರಣ ಅಂತ ಕುಟುಂಬಸ್ಥರು ಹೇಳ್ತಿದ್ದಾರೆ. ಅದೇನೇ ಇರ್ಲಿ ತಮ್ ತಮ್ಮ ಕೆಲಸಕ್ಕೆ ಹೋಗೋಣ ಅಂತ ಹೊರಟಿದ್ದ ಈ 13 ಜನರು ಬಾರದ ಲೋಕಕ್ಕೆ ಪಯಣ ಬೆಳಸಿದ್ದು ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ