newsfirstkannada.com

ಹಾವೇರಿಯಲ್ಲಿ ಭೀಕರ ಅಪಘಾತ.. ಒಂದೇ ಕುಟುಂಬದ 13 ಮಂದಿ ಬಲಿ ಪಡೆದಿದ್ದು ಚಾಲಕನ ಅಜಾಗೃತೆ

Share :

Published June 28, 2024 at 12:08pm

  ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 13 ಮಂದಿ ಸಾವು

  ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ ವಾಹನ ಚಾಲಕ ಆದರ್ಶ

  ತೀರ್ಥಯಾತ್ರೆ ಮುಗಿಸಿ ವಾಪಸ್ ಆಗುವಾಗ ಸಂಭವಿಸಿದ ಅಪಘಾತ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.

ದುರ್ಘಟನೆಗೆ ಟಿಟಿ ವಾಹನ ಚಾಲಕನ ಅಜಾಗರೂಕ ಚಾಲನೆಯೇ ಕಾರಣ ಎನ್ನಲಾಗುತ್ತಿದೆ. ದುರ್ಘಟನೆಯಲ್ಲಿ ಚಾಲಕ ಆದರ್ಶ ಕೂಡ ಸಾವನ್ನಪ್ಪಿದ್ದಾನೆ. ಅಂದ್ಹಾಗೆ ಈ ಆದರ್ಶಗೆ ಮದುವೆ ಆಗಿರಲಿಲ್ಲ. 21 ವರ್ಷದ ಆದರ್ಶ ಮನೆಯ ಹಿರಿಯ ಮಗನಾಗಿದ್ದ. ಮನೆ ಕಟ್ಟಿಸಿ ಮದುವೆ ಆಗಬೇಕೆಂದಿದ್ದ.

ಇದನ್ನೂ ಓದಿ:ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ

ಆತನ ಅಜಾಗರೂಕತೆಯಿಂದ ಹದಿಮೂರು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಮಳೆಗಾಲ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಜಾಗೃತವಾಗಿ ಚಾಲನೆ ಮಾಡಬೇಕಿತ್ತು. ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಅಪಘಾತ ಮಾಡಿರೋದು ದುರಾದೃಷ್ಟವೇ ಸರಿ. ಬೆಳಗ್ಗೆ 4 ಗಂಟೆ ಹಿನ್ನೆಲೆಯಲ್ಲಿ ನಿದ್ರೆ ಮಂಪರಿನಿಂದ ಚಾಲಕ ಆದರ್ಶ ಗಾಡಿ ಓಡಿಸುತ್ತಿದ್ದ ಎನ್ನಲಾಗುತ್ತಿದೆ.

ಮೊನ್ನೆಯ ದಿನ ಮಹಾರಾಷ್ಟ್ರದಲ್ಲಿನ ತುಳಜಾಭವಾನಿ ದೇವಸ್ಥಾನದಲ್ಲಿ ಸೆಲ್ಫಿ ಸ್ಟೇಟಸ್ ಹಾಕಿದ್ದ. ನಿನ್ನೆ ಸಂಜೆ ಸವದತ್ತಿಗೆ ತೆರಳಿ ಚಿಂಚೊಳ್ಳಿ ಮಾಯಮ್ಮಳ ದರ್ಶನವನ್ನು ಮಾಡಿಸಿದ್ದ. ಆದರೆ ಇಂದು ಬೆಳಗ್ಗೆ 13 ಮಂದಿ ಅಪಘಾತಕ್ಕೆ ಬಲಿಯಾಗಿರೋದು ತುಂಬಾ ದುಃಖದ ವಿಚಾರವಾಗಿದೆ.

ಇದನ್ನೂ ಓದಿ:‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾವೇರಿಯಲ್ಲಿ ಭೀಕರ ಅಪಘಾತ.. ಒಂದೇ ಕುಟುಂಬದ 13 ಮಂದಿ ಬಲಿ ಪಡೆದಿದ್ದು ಚಾಲಕನ ಅಜಾಗೃತೆ

https://newsfirstlive.com/wp-content/uploads/2024/06/HVR-ACCIDENT-8.jpg

Load More