ಮಾವನ ಮನೆಗೆ ಬಂದಿದ್ದೇ ತಪ್ಪಾಯ್ತು..
ವಿದ್ಯುತ್ ತಂತಿ ತಗುಲಿ ಬಾಲಕಿ ದಾರುಣ ಸಾವು
ಮಹಡಿ ಮೇಲೆ ಆಟವಾಡುತ್ತಿದ್ದಾಗ ದುರಂತ
ಬೆಳಗಾವಿ: ವಿದ್ಯುತ್ ತಂತಿ ತಗುಲಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ತಾಲೂಕಿನ ಮಚ್ಚೆ ಗ್ರಾಮದಲ್ಲಿ ನಡೆದಿದೆ. ಮಧುರಾ ಕೇಶವ್ ಮೋರೆ (13) ಮೃತ ಬಾಲಕಿ.
ಇದನ್ನು ಓದಿ: ಈ ಖ್ಯಾತ ಆ್ಯಂಕರ್ ಜೊತೆ ವಾಷಿಂಗ್ಟನ್ ಸುಂದರ್ ಡೇಟಿಂಗ್? ಫೋಟೋ ಇಲ್ಲಿದೆ
ಶಾಲೆ ರಜೆ ಹಿನ್ನೆಲೆಯಲ್ಲಿ 8 ದಿನದ ಹಿಂದೆ ಖಾನಾಪುರ ತಾಲೂಕಿನ ಮಾಚಿಘಡದಿಂದ ಮಚ್ಛೆ ಗ್ರಾಮದ ಸೋದರಮಾವನ ಮನೆಗೆ ಮೃತ ಬಾಲಕಿ ಬಂದಿದ್ದಳು. ಈ ವೇಳೆ ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಬಾಲಕ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ