newsfirstkannada.com

PM CARES ನಿಧಿಯ 1,392 ಕೋಟಿ ಹಣವನ್ನು ಪ್ರಧಾನಿ ಮೋದಿಯ PRಗೆ ನೀಡಿದ್ದಾರೆ -ದಾಖಲೆ ಬಿಡುಗಡೆ ಮಾಡಿದ ಟಿಎಂಸಿ

Share :

23-10-2023

    PM CARES ಹಣ ದುರ್ಬಳಕೆ ಬಗ್ಗೆ ಗಂಭೀರ ಆರೋಪ

    ಟಿಎಂಸಿ ಸಂಸದ ಸಾಕೇತ್ ಗೋಖಲೆಯಿಂದ ದಾಖಲೆ ರಿಲೀಸ್

    ಸಂಸದರು ಟ್ವಿಟರ್​ನಲ್ಲಿ ಮಾಡಿದ ಆರೋಪಗಳು ಏನು?

PM CARES ಫಂಡ್​​ನಿಂದ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವಿದೇಶಿ ಪಿಆರ್​ (Public Relations)ಗೆ ಖರ್ಚು ಮಾಡಲಾಗಿದೆ ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದಾರೆ. ತಮ್ಮ ಆರೋಪಕ್ಕೆ ಸಂಬಂಧಿಸಿ ಕೆಲವು ದಾಖಲೆಗಳನ್ನು ಟ್ವಿಟರ್​ನಲ್ಲಿ ಲಗತ್ತಿಸಿ ಶೇರ್ ಮಾಡಿದ್ದಾರೆ.

ಏನಿದು ಆರೋಪ..?

ತಮ್ಮ ಆರೋಪಕ್ಕೆ ಸಂಬಂಧಿಸಿ ಸರಣಿ ಟ್ವೀಟ್ ಮಾಡಿರುವ ಗೋಖಲೆ.. PM CARES ನಿಧಿ 2021ರಲ್ಲಿ ಬಿಡುಗಡೆ ಮಾಡಿರುವ ದಾಖಲೆ ಪ್ರಕಾರ, 6.6 ಕೋಟಿ ವ್ಯಾಕ್ಸಿನ್ ಸಂಗ್ರಹಿಸಲು 1,392 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆಸಕ್ತಿಕರ ವಿಚಾರ ಏನಂದರೆ ‘ವ್ಯಾಕ್ಸಿನ್ ಮೈತ್ರಿ’ ಕಾರ್ಯಕ್ರಮದ ಅಡಿಯಲ್ಲಿ 6 ಕೋಟಿ ವ್ಯಾಕ್ಸಿನ್​ ಅನ್ನು ಭಾರತ ಇತರೆ ದೇಶಗಳಿಗೆ ಉಡುಗೊರೆಯಾಗಿ ನೀಡಿದೆ.

PM CARES ನಿಧಿಯ ಹಿಂದಿನ ಉದ್ದೇಶ, ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ತುರ್ತಾಗಿ ಎದುರಿಸುವುದಾಗಿತ್ತು ಎಂದು ಘೋಷಿಸಲಾಗಿದೆ. ಈ ನಿಧಿಯು ವಾಸ್ತವಾಗಿ ಭಾರತ ಮತ್ತು ವಿದೇಶಿ ಕಂಪನಿ ಹಾಗೂ ಬೇರೆ ಬೇರೆ ವ್ಯಕ್ತಿಗಳಿಂದ ಧನ ಸಹಾಯ ಪಡೆದುಕೊಂಡಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕೋಟಿ ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಲಾಗಿದೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಲಸಿಕೆಯನ್ನು ಖರೀದಿಸುವ ಬದಲು, ‘ವಿಶ್ವಗುರು’ವಾಗಲು ಪಿಎಂ ಕೇರ್ಸ್​ ಮೂಲಕ 6 ಕೋಟಿ ವ್ಯಾಕ್ಸಿನ್​ ಅನ್ನು ವಿದೇಶಕ್ಕೆ ಉಚಿತವಾಗಿ ನೀಡಿದರು. ಪರಿಣಾಮ 2021ರಲ್ಲಿ ದೇಶದಲ್ಲಿ ವ್ಯಾಕ್ಸಿನ್ ಕೊರತೆ ಉಂಟಾಯಿತು ಎಂದು ಆರೋಪಿಸಿದ್ದಾರೆ.

ಹಾಗೆಯೇ.. PM CARES ಅನ್ನೋದು ಪ್ರಧಾನಿ ಮೋದಿ ಮತ್ತು ಪಿಎಂಓದ ಪಾರದರ್ಶಕ ನಿಧಿಯಾಗಿದೆ. ಅದು ಸರ್ಕಾರದ ನಿಧಿಯಲ್ಲ. ಹೀಗಾಗಿ ಇದು ಆರ್​​ಟಿಐ ಅಡಿಯಲ್ಲಿ ಬರುವುದಿಲ್ಲ ಎಂದು ದೆಹಲಿ ಹೈಕೋರ್ಟ್​​ಗೆ ಸರ್ಕಾರ ಹೇಳಿದೆ. PM CARES ಉದ್ದೇಶ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಎದುರಿಸೋದಾಗಿರೋದು ನಿಜನಾ? ಈ ನಿಧಿಯ ಹಣವನ್ನು ಪ್ರಧಾನಿ ಮೋದಿ ಅವರ ವೈಯಕ್ತಿಕ ಪಿಆರ್​ಗೆ ಯಾವುದೇ ನಾಚಿಕೆ ಇಲ್ಲದೇ ಬಳಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PM CARES ನಿಧಿಯ 1,392 ಕೋಟಿ ಹಣವನ್ನು ಪ್ರಧಾನಿ ಮೋದಿಯ PRಗೆ ನೀಡಿದ್ದಾರೆ -ದಾಖಲೆ ಬಿಡುಗಡೆ ಮಾಡಿದ ಟಿಎಂಸಿ

https://newsfirstlive.com/wp-content/uploads/2023/10/MODI-18.jpg

Load More