newsfirstkannada.com

BREAKING: ವರ್ತೂರು ಸಂತೋಷ್‌ಗೆ ಜೈಲುವಾಸ ಫಿಕ್ಸ್‌; ಅಧಿಕಾರಿಗಳು ಕೇಳಿದ 5 ಪ್ರಶ್ನೆಗೆ ಬಿಗ್‌ಬಾಸ್ ಸ್ಪರ್ಧಿ ಶಾಕ್‌!

Share :

23-10-2023

    ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಆರೋಪದಲ್ಲಿ ಸಂತೋಷ್ ಜೈಲುವಾಸ

    ವಿಚಾರಣೆ ನಡೆಸಿದ ನ್ಯಾಯಾಧೀಶರಿಂದ 14 ದಿನಗಳ ನ್ಯಾಯಾಂಗ ಬಂಧನ

    ಕೇವಲ ಉಗುರು ಮಾತ್ರ ಇದೆಯಾ? ಹುಲಿಯ ಚರ್ಮ ಏನಾದ್ರು ಇದಿಯಾ?

ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಆರೋಪದಲ್ಲಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ವರ್ತೂರು ಸಂತೋಷ್ ಅವರನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಸದ್ಯ ವರ್ತೂರು ಸಂತೋಷ್‌ಗೆ ಜೈಲುವಾಸ ಖಾಯಂ ಆಗಿದೆ.

ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದ ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪ್ರಮುಖವಾಗಿ ಹುಲಿ ಉಗುರಿನ ಬಗ್ಗೆ ವರ್ತೂರು ಸಂತೋಷ್ ಅವರಿಗೆ 5 ಪ್ರಶ್ನೆಗಳನ್ನು ಕೇಳಲಾಗಿದೆ.

ವರ್ತೂರು ಸಂತೋಷ್‌ಗೆ ಕೇಳಲಾದ 5 ಪ್ರಶ್ನೆಗಳು!

ಪ್ರಶ್ನೆ 1: ಹುಲಿ ಉಗುರಿನ ಪೆಂಡೆಂಟ್‌ ಅನ್ನು ಎಷ್ಟು ವರ್ಷದಿಂದ ನೀವು ಧರಿಸಿದ್ದೀರಾ?

ಪ್ರಶ್ನೆ 2: ಹುಲಿಯ ಉಗುರು ನಿಮಗೆ ಸಿಕ್ಕಿದ್ದು ಹೇಗೆ?

ಪ್ರಶ್ನೆ 3: ಹುಲಿಯ ಉಗುರು ನಿಮಗೆ ಮಾರಾಟ ಮಾಡಿದ್ಯಾರು?

ಪ್ರಶ್ನೆ 4: ಹುಲಿಯ ಉಗುರಿನಿಂದ ಪೆಂಡೆಂಟ್ ಮಾಡಿಸಿದ್ದು ಎಲ್ಲಿ?

ಪ್ರಶ್ನೆ 5: ಹುಲಿಯ ಉಗುರು ಧರಿಸೋದು ಅಪರಾಧ ಅನ್ನೋದು ತಿಳಿದಿಲ್ವಾ?

ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಮೇಲೆ ಪ್ರಶ್ನೆಗಳ ಸುರಿಮಳೆಗೈದಿರುವ ಅರಣ್ಯಾಧಿಕಾರಿಗಳು ಸುಳ್ಳು ಹೇಳಿದ್ರೆ ನಿಮಗೆ ಕಷ್ಟವಾಗುತ್ತೆ ಎಂದು ಎಚ್ಚರಿಸಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು ಹುಲಿಯ ಉಗುರನ್ನ ಅಪರಿಚಿತ ವ್ಯಕ್ತಿ ಗಿಫ್ಟ್ ನೀಡಿದ್ದ. ಈ ಪೆಂಡೆಂಟ್ ಅನ್ನು ಕಳೆದ 3 ವರ್ಷದಿಂದ ಧರಿಸಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಕೇವಲ ಹುಲಿಯ ಉಗುರು ಮಾತ್ರ ಗಿಫ್ಟ್ ಕೊಟ್ಟಿದ್ರಾ, ನಿಮ್ಮ ಬಳಿ ಹುಲಿಯ ಚರ್ಮ ಏನಾದ್ರು ಇದಿಯಾ ಎಂದು ಪ್ರಶ್ನಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ವರ್ತೂರು ಸಂತೋಷ್‌ಗೆ ಜೈಲುವಾಸ ಫಿಕ್ಸ್‌; ಅಧಿಕಾರಿಗಳು ಕೇಳಿದ 5 ಪ್ರಶ್ನೆಗೆ ಬಿಗ್‌ಬಾಸ್ ಸ್ಪರ್ಧಿ ಶಾಕ್‌!

https://newsfirstlive.com/wp-content/uploads/2023/10/vartur-Santhosh.jpg

Load More