newsfirstkannada.com

ರಜೆ ಇದೆ ಮಜಾ ಮಾಡಬೇಡ ಚೆನ್ನಾಗಿ ಓದಿಕೋ.. ಅಮ್ಮನ ಬುದ್ಧಿವಾದಕ್ಕೆ ಪ್ರಾಣ ಬಿಟ್ಟ 8ನೇ ತರಗತಿ ವಿದ್ಯಾರ್ಥಿ

Share :

14-11-2023

    ಬೆಳಗಾವಿ ಮೂಡಲಗಿ ಪಟ್ಟಣದ ದೇಶಪಾಂಡೆ ಪ್ಲಾಟ್‌ನಲ್ಲಿ ಘಟನೆ

    ಸಮರ್ಥ ಸುರೇಶ ಭಜಂತ್ರಿ (14) ಆತ್ಮಹತ್ಯೆಗೆ ಶರಣಾದ ಬಾಲಕ

    ಬೆಡ್‌ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳಗಾವಿ: ಶಾಲೆಗೆ ದೀಪಾವಳಿ ರಜೆ ಇದೆ ಅಂತ ತಿರುಗಾಡಬೇಡ ಚೆನ್ನಾಗಿ ಓದಬೇಕು ಎಂದು ತಾಯಿ ಬುದ್ಧಿವಾದ ಹೇಳಿದಕ್ಕೆ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಮೂಡಲಗಿ ಪಟ್ಟಣದ ದೇಶಪಾಂಡೆ ಪ್ಲಾಟ್‌ನಲ್ಲಿ ನಡೆದಿದೆ. ಸಮರ್ಥ ಸುರೇಶ ಭಜಂತ್ರಿ (14) ಮೃತ ಬಾಲಕ.

ದೀಪಾವಳಿ ರಜೆ ಇದೆ ಅಂತ ತಿರುಗಬೇಡ. ಚೆನ್ನಾಗಿ ಓದಿಕೋ ಎಂದು ತಾಯಿ ಬುದ್ಧಿಮಾತು ಹೇಳಿದ್ದಾರೆ. ಇಷ್ಟಕ್ಕೆ ಮನನೊಂದು ತಮ್ಮ ಮನೆಯ ಬೆಡ್‌ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಬಾಲಕ ಮೂಡಲಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಜೆ ಇದೆ ಮಜಾ ಮಾಡಬೇಡ ಚೆನ್ನಾಗಿ ಓದಿಕೋ.. ಅಮ್ಮನ ಬುದ್ಧಿವಾದಕ್ಕೆ ಪ್ರಾಣ ಬಿಟ್ಟ 8ನೇ ತರಗತಿ ವಿದ್ಯಾರ್ಥಿ

https://newsfirstlive.com/wp-content/uploads/2023/11/death-2023-11-14T075343.306.jpg

Load More