newsfirstkannada.com

Coromandel Expressಗೆ ‘ಸರಣಿ ಕಂಟಕ’.. 14 ವರ್ಷದ ಹಿಂದೇ ಇದೇ ವಾರ ನಡೆದಿತ್ತು ಭೀಕರ ದುರಂತ..!

Share :

03-06-2023

  ಕೋರಮಂಡಲ್ ಎಕ್ಸ್‌ಪ್ರೆಸ್​ಗೆ ಇದೆಂಥಾ ಸರಣಿ ಸಂಕಟ!

  14 ವರ್ಷದ ಹಿಂದೆ ಇದೇ ವಾರ ನಡೆದಿತ್ತು ಭೀಕರ ಅಪಘಾತ

  ಗೂಡ್ಸ್​ ಟ್ರೈನ್​ಗಳ ಮಧ್ಯೆ ಘೋರ ಅನಾಹುತ ಸೃಷ್ಟಿ!

Odisha train accident: ಒಡಿಶಾದ ಬಾಲ್​ಸೋರ್​ನಲ್ಲಿ ನಡೆದ ರೈಲು ದುರಂತಕ್ಕೆ ಇಡೀ ದೇಶವೇ ಮರಗುತ್ತಿದೆ. ಮೂರು ರೈಲುಗಳ ಭೀಕರ ಸರಣಿ ಅಪಘಾತದ ಪರಿಣಾಮ 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 900 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಗಾಯಗೊಂಡರವ ರಕ್ಷಣಾ ಕಾರ್ಯ ಮುಂದುವರಿದಿದೆ.

 ಬೆಂಗಳೂರು-ಹೌರಾ ಸೂಪರ್​ಫಾಸ್ಟ್​ ಎಕ್ಸ್​ಪ್ರೆಸ್​, Shalimar-Chennai Central Coromandel Express ಹಾಗೂ ಗೂಡ್ಸ್​ ಟ್ರೈನ್​ಗಳ ಮಧ್ಯೆ ಅಪಘಾತ ಸಂಭವಿಸಿ ಘೋರ ಅನಾಹುತ ಸೃಷ್ಟಿಯಾಗಿದೆ. ನಿನ್ನೆ ಸಂಜೆ 7 ಗಂಟೆಗೆ ನಡೆದಿದ್ದು, ಗಾಯಗೊಂಡವರ ರಕ್ಷಣಾಕಾರ್ಯ ಇನ್ನೂ ನಡೆಯುತ್ತಿದೆ.

ಕಾಕತಾಳಿಯ ಎಂಬಂತೆ 14 ವರ್ಷಗಳ ಹಿಂದೆ ಇದೇ ‘ಕೊರೊಮಂಡಲ್ ಎಕ್ಸ್​​ಪ್ರೆಸ್​’ (Howrah-Chennai Coromandel Express) ಅಪಘಾತಕ್ಕೆ ಒಳಗಾಗಿತ್ತು. ಫೆಬ್ರವರಿ 13, 2009 ರಂದು ಹಳಿತಪ್ಪಿ ಭೀಕರ ಅಪಘಾತ ಸಂಭವಿಸಿತ್ತು. ರಾಜಸ್ಥಾನದ ಜೈಪುರ ಬಳಿ ಹಳಿ ತಪ್ಪಿ, 15 ಪ್ರಯಾಣಿಕರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು. ಅವತ್ತೂ ಕೂಡ ಶುಕ್ರವಾರವೇ ಆಗಿತ್ತು.

32 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು
ಅಂದ್ಹಾಗೆ Coromandel Express 2009ರಲ್ಲೇ ಮೊದಲ ಬಾರಿಗೆ ಅಪಘಾತಕ್ಕೆ ಒಳಗಾಗಿಲ್ಲ. ಹಲವು ಬಾರಿ ಸಣ್ಣಪುಟ್ಟ ಅಪಘಾತಕ್ಕೆ ಒಳಾಗಿತ್ತು. ಮಾರ್ಚ್​​ 15, 2022ರಲ್ಲಿ ಕಳಪೆ ಟ್ರ್ಯಾಕ್​ನಿಂದ Howrah-Chennai Coromandel Express ನೆಲ್ಲೂರು ಬಳಿ ಹಳಿ ತಪ್ಪಿತ್ತು. ಮಾತ್ರವಲ್ಲ, ಡಿಸೆಂಬರ್ 3, 2011ರಲ್ಲೂ ಆಂಧ್ರಪ್ರದೇಶದ ನೆಲ್ಲೂರು ಬಳಿ ಅಪಘಾತಕ್ಕೆ ಒಳಗಾಗಿತ್ತು. ಈ ವೇಳೆ 32 ಪ್ರಯಾಣಿಕರು ಪ್ರಾಣವನ್ನು ಕಳೆದುಕೊಂಡಿದ್ದರು. ಜನವರಿ 14, 2012ರಲ್ಲಿ  ಬೆಂಕಿ ಕಾಣಿಸಿಕೊಂಡಿತ್ತು. ಲಿಂಗರಾಜ್​ ರೈಲ್ವೇ ನಿಲ್ದಾಣದಲ್ಲಿ ಜನರಲ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಲ್ಲಿ ಯಾರಿಗೂ ಯಾವುದೇ ಗಾಯಗಳು ಆಗಿರಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Coromandel Expressಗೆ ‘ಸರಣಿ ಕಂಟಕ’.. 14 ವರ್ಷದ ಹಿಂದೇ ಇದೇ ವಾರ ನಡೆದಿತ್ತು ಭೀಕರ ದುರಂತ..!

https://newsfirstlive.com/wp-content/uploads/2023/06/TRAIN-6.jpg

Load More