newsfirstkannada.com

ಬನ್ನೇರುಘಟ್ಟ ಉದ್ಯಾನವನದ ಪ್ರಮುಖ ಆಕರ್ಷಣೆ ಸಿಂಹ ರಾಮ ನಿಧನ

Share :

17-11-2023

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಹ

    ಸಿಂಹ ಅಗಲಿಕೆಗೆ ಉದ್ಯಾನವನದ ಸಿಬ್ಬಂದಿ ಬೇಸರ

    ವೈದ್ಯರಿಂದ ಮರಣೋತ್ತರ ಪರೀಕ್ಷೆ ಮುಕ್ತಾಯ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಗಂಡು ಸಿಂಹವೊಂದು ಸಾವನ್ನಪ್ಪಿದೆ. ರಾಮ ಎಂಬ ಹೆಸರಿನ ಸಿಂಹ ನಿಧನವಾಗಿದ್ದು, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ರಾಮನಿಗೆ 14 ವರ್ಷ ಆಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿಂಹ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ. ಮೃತ ಸಿಂಹದ ಮರಣೋತ್ತರ ಪರೀಕ್ಷೆಯನ್ನು ವೈದ್ಯರು ನಡೆಸಿದ್ದಾರೆ. ದೇಹದ ಕೆಲ ಅಂಗಾಂಗಳ ಮಾದರಿ ಸಂಗ್ರಹ ಮಾಡಿದ್ದಾರೆ.

ಮೃತ ಸಿಂಹದ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದೆ. ಸಿಂಹವನ್ನು ಕಳೆದುಕೊಂಡ ಜೈವಿಕ ಉದ್ಯಾನವನದ ಸಿಬ್ಬಂದಿ ದುಃಖ ವ್ಯಕ್ತಪಡಿಸಿದ್ದಾರೆ. ಪ್ರಮುಖ ಆಕರ್ಷಣೆಯಾಗಿದ್ದ ಸಿಂಹ ರಾಮ ಇನ್ಮೇಲೆ ಪ್ರವಾಸಿಗರಿಗೆ ನೋಡಲು ಸಿಗುವುದಿಲ್ಲ. ಉದ್ಯಾನವನಕ್ಕೆ ರಾಮನ ಅನುಪಸ್ಥಿತಿ ಕಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬನ್ನೇರುಘಟ್ಟ ಉದ್ಯಾನವನದ ಪ್ರಮುಖ ಆಕರ್ಷಣೆ ಸಿಂಹ ರಾಮ ನಿಧನ

https://newsfirstlive.com/wp-content/uploads/2023/11/RAMU.jpg

Load More