newsfirstkannada.com

15 ಬಾರಿ ಮಾರಣಾಂತಿಕ ಹಲ್ಲೆ.. ನಡುರೋಡಲ್ಲೇ ಯುವತಿಯ ಭಯಾನಕ ಹತ್ಯೆ; ವಿಡಿಯೋ

Share :

Published June 18, 2024 at 5:22pm

  ನಡುರೋಡಲ್ಲೇ ರೊಚ್ಚಿಗೆದ್ದು 15 ಬಾರಿ ಹಲ್ಲೆ ಮಾಡಿ ನಿಂತ ಯುವಕ

  ಜನನಿಬಿಡ ಪ್ರದೇಶದಲ್ಲೇ ಯುವತಿ ಪ್ರಾಣ ತೆಗೆದು ನಿಂತಿದ್ದ ಕಿರಾತಕ

  ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಮೇಲೆ ಭಯಾನಕ ಹಲ್ಲೆ

ಮುಂಬೈ: ಪ್ರೀತಿಸಿದ ಯುವತಿಯನ್ನೇ ಯುವಕನೊಬ್ಬ ನಡುರೋಡಲ್ಲಿ, ಜನರ ಮಧ್ಯೆಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮುಂಬೈ ನಗರದ ವಾಸಯಿಯಲ್ಲಿ ನಡೆದಿದೆ. ಹತ್ಯೆಗೈದ ಯುವಕನನ್ನು ರೋಹಿತ್ ಮತ್ತು ಕೊಲೆಯಾದ ಯುವತಿಯನ್ನು 20 ವರ್ಷದ ಆರತಿ ಎಂದು ಗುರುತಿಸಲಾಗಿದೆ.

ಕೊಲೆಯಾದ ಆರತಿಯು ರೋಹಿತ್ ಗರ್ಲ್ ಫ್ರೆಂಡ್ ಆಗಿದ್ದಳು. ಕಳೆದ 6 ವರ್ಷಗಳಿಂದ ಇವರಿಬ್ಬರು ಪ್ರೀತಿಸಿದ್ದು ಇತ್ತೀಚೆಗೆ ಲವ್ ಬ್ರೇಕಪ್ ಆಗಿತ್ತು. ಆರತಿ ಮತ್ತೊಬ್ಬನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಯುವಕ ಇಂದು ಬೆಳಗ್ಗೆ ಕಬ್ಬಿಣದ ಸಲಾಕೆಯಿಂದ 15 ಬಾರಿ ಹೊಡೆದು ಹತ್ಯೆ ಮಾಡಿದ್ದಾನೆ. ರೋಹಿತ್ ಯಾದವ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಹಿಟಾಚಿ ಮೇಲೆ ಉರುಳಿಬಿದ್ದ ಹೆಬ್ಬಂಡೆ.. ಕಲ್ಲುಕ್ವಾರಿಯಲ್ಲಿ ದಾರುಣ ಘಟನೆ 

6 ವರ್ಷಗಳಿಂದ ಲವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ರೋಹಿತ್, ಆರತಿ ಮಧ್ಯೆ ಮನಸ್ತಾಪ ಶುರುವಾಗಿತ್ತು. ಆರತಿ ಲವ್ ಬ್ರೇಕಪ್‌ ಮಾಡಿಕೊಂಡಿದ್ದಕ್ಕೆ ರೊಚ್ಚಿಗೆದ್ದ ರೋಹಿತ್ ಕಬ್ಬಿಣದ ಸಲಾಕೆಯಿಂದ ಬಂದು ತಲೆಗೆ ಹೊಡೆದಿದ್ದಾನೆ. ವ್ಯಕ್ತಿಯೊಬ್ಬ ರೋಹಿತ್‌ನನ್ನು ತಡೆದರೂ ಬಿಡದೇ ರೋಹಿತ್, ಆರತಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಹಾಡಹಗಲೇ ರೋಹಿತ್, ಆರತಿಯನ್ನ ಭೀಕರವಾಗಿ ಹತ್ಯೆ ಮಾಡಿ ನಡುರೋಡಲ್ಲಿ ನಿಂತಿದ್ದಾನೆ. ಕಬ್ಬಿಣದ ಸಲಾಕೆಯಲ್ಲಿ ಹೊಡೆಯುತ್ತಿದ್ದಂತೆ ಕೆಳಗೆ ಬಿದ್ದ ಯುವತಿ ತೀವ್ರ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾಳೆ. ಆರತಿ ಸಾವನ್ನಪ್ಪಿರೋದನ್ನು ಖಚಿತಪಡಿಸಿಕೊಳ್ಳುವವರೆಗೂ ರೋಹಿತ್ ಹಲ್ಲೆ ಮಾಡಿದ್ದಾನೆ. ಅಕ್ಕಪಕ್ಕದಲ್ಲಿದ್ದ ಜನರು ಕೊಲೆಯ ದೃಶ್ಯ ನೋಡುತ್ತಿದ್ದರು ಹತ್ಯೆಯಾಗುವುದನ್ನು ತಡೆಯಲು ವಿಫಲರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

15 ಬಾರಿ ಮಾರಣಾಂತಿಕ ಹಲ್ಲೆ.. ನಡುರೋಡಲ್ಲೇ ಯುವತಿಯ ಭಯಾನಕ ಹತ್ಯೆ; ವಿಡಿಯೋ

https://newsfirstlive.com/wp-content/uploads/2024/06/Mumbai-Murder-CCTV.jpg

Load More