newsfirstkannada.com

ಕಟ್ಟಿಗೆ, ಹಗ್ಗ, ಸಿಸಿಟಿವಿ, ಬಟ್ಟೆ, ಎಣ್ಣೆ ಬಾಟಲಿ.. ಒಂದಾ, ಎರಡಾ.. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು!

Share :

Published June 14, 2024 at 11:22am

  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲೂಟ ಗ್ಯಾರೆಂಟಿ?

  ಒಂದಾ, ಎರಡಾ.. ಸಾಲು ಸಾಲು ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿವೆ

  ಕೊಲೆ ಪ್ರಕರಣದ ತನಿಖೆ ವೇಳೆ ಎಡವಟ್ಟು ಮಾಡಿಕೊಂಡ ಆರೋಪಿಗಳು

ನಟ ದರ್ಶನ್​ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿರೋದು ರಾಜ್ಯದ ಜನರಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಗಿದೆ. ಸದ್ಯ ದರ್ಶನ್​ ಮತ್ತು ಟೀಂ ಪೊಲೀಸರ ವಶದಲ್ಲಿದ್ದಾರೆ. ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಸಾಕಷ್ಟು ಸಾಕ್ಷ್ಮಗಳು ಪೊಲೀಸರಿಗೆ ಸಿಕ್ಕಿದೆ.

ಒಂದಾ.. ಎರಡಾ.. ಕೊಲೆಗಡುಕರು ರೇಣುಕಾಸ್ವಾಮಿಯನ್ನು ಹಿಂಸಾತ್ಮಕವಾಗಿ ಕೊಂದಿದ್ದಾರೆ. ದೇಹದ ಬಹುಪಾಲು ಭಾಗಕ್ಕೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದರ್ಶನ್​ ಆ್ಯಂಡ್​ ಟೀಂ ಹಿಂದೆ ಬಿದ್ದ ಪೊಲೀಸರಿಗೆ ಸಾಲು ಸಾಲು ಸಾಕ್ಷ್ಯಗಳು ಸಿಕ್ಕಿವೆ. ಈ ಬಗ್ಗೆ ನ್ಯೂಸ್ ಫಸ್ಟ್ ನಲ್ಲಿ ಎಕ್ಸಕ್ಲೂಸಿವ್ ಡಿಟೇಲ್ಸ್ ಸಿಕ್ಕಿದೆ.

ಇದನ್ನೂ ಓದಿ: ನಟ ದರ್ಶನ್​ ಮೀಟ್​ ಮಾಡಿಸ್ತೀನಿ.. ಆರೋಪಿ ರಾಘವೇಂದ್ರನ ಪ್ಲಾನ್​ಗೆ ರೇಣುಕಾಸ್ವಾಮಿ ಬಲಿಯಾದ್ರಾ?

ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು

1. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಿಸಿದ ಮರದ ರಿಪೀಸ್(ಕಟ್ಟಿಗೆ)

2. ರೇಣುಕಾಸ್ವಾಮಿಯನ್ನ ಕಟ್ಟಿಹಾಕಲು ಬಳಸಿದ ಹಗ್ಗ

3. ಹಲ್ಲೆ ಮಾಡಲು ಬಳಸಿದ ಶೆಡ್​​ನಲ್ಲಿದ್ದ ಕಬ್ಬಿಣದ ವಸ್ತುಗಳು

4. ಆರೋಪಿಗಳು ಶೆಡ್ ಗೆ ಹೋಗುವ ಸಿಸಿಟಿವಿ ವಿಶ್ಯುವಲ್ಸ್

5. ಆರೋಪಿಗಳು ಹತ್ಯೆ ಆದಾಗ ಸ್ಥಳದಲ್ಲಿದ್ದರು ಎನ್ನಲು ಟವರ್ ಡಂಪ್ ಡಿಟೇಲ್ಸ್

6. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕರೆದುಕೊಂಡು ಬಂದ ಕಾರು

7. ಶವವನ್ನ ಸಾಗಾಟ ಮಾಡಲು ಬಳಸಿದ ಕಾರು

8. ಆರೋಪಿಗಳ ಮೊಬೈಲ್ ನಲ್ಲಿ ಒಬ್ಬರಿಗೆ ಒಬ್ಬರು ಮಾತಾಡಿರುವ ಕರೆಗಳ ವಿವರ

9. ಆರೋಪಿಗಳು ನೀಡಿರುವ ಹೇಳಿಕೆಗಳು

10. ಘಟನಾ ಸ್ಥಳದಲ್ಲಿ ಆರೋಪಿಗಳು ಬಳಸಿದ್ದ ವಾಟರ್ ಬಾಟಲ್ ಹಾಗೂ ಮದ್ಯದ ಬಾಟಲ್ ಗಳು

11. ರೇಣುಕಾಸ್ವಾಮಿ‌ ಧರಿಸಿದ್ದ ಬಟ್ಟೆಗಳನ್ನ ಎಫ್ ಎಸ್ ಎಲ್ ಗೆ ಕಳಿಸಿರುವ ಪೊಲೀಸರು

12. ಆರೋಪಿಗಳ ಮೊಬೈಲ್ ಗಳ ಸಿಡಿಆರ್ ವಿವರಗಳು

13. ಕೊಲೆ ಮಾಡಿರುವ ಬಗ್ಗೆ ಸಬ್ ಇನ್ಸಪೆಕ್ಟರ್ ಒಬ್ಬರಿಂದ ಏನು ಮಾಡಬೇಕು ಎಂದು ಸಲಹೆ ಪಡೆದಿರುವುದು

14. ಸಬ್ ಇನ್ಸಪೆಕ್ಟರ್ ಗೆ ಕರೆ ಮಾಡಿರುವ ವಿವರ

15. ಶವವನ್ನ ಬಿಸಾಡಿ ಬರಬೇಕಾದರೆ ಕಾರು ಸೆರೆಯಾಗಿರುವ ಸಿಸಿಟಿವಿ ವಿಶ್ಯುವಲ್

16. ಆರೋಪಿಗಳಿಗೆ ದರ್ಶನ್ ನೀಡಿರುವ 30 ಲಕ್ಷ ಹಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಟ್ಟಿಗೆ, ಹಗ್ಗ, ಸಿಸಿಟಿವಿ, ಬಟ್ಟೆ, ಎಣ್ಣೆ ಬಾಟಲಿ.. ಒಂದಾ, ಎರಡಾ.. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು!

https://newsfirstlive.com/wp-content/uploads/2024/06/darshan8.jpg

Load More