Summer Hillನಲ್ಲಿ ಭೂಕುಸಿತದಿಂದ ನೆಲಕ್ಕುರುಳಿದ ಶಿವ ದೇಗುಲ
50 ಮಂದಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸಂಭವಿಸಿದ ದುರಂತ
ಪೊಲೀಸ್, SDRF ಪಡೆಯಿಂದ ರಕ್ಷಣಾಕಾರ್ಯ ಆರಂಭ
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿರುವ ಶಿವ ದೆಗುಲ ಕುಸಿದು 16 ಭಕ್ತರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸಿಖು ಮಾಹಿತಿ ನೀಡಿದ್ದಾರೆ. ಲ್ಯಾಂಡ್ಸ್ಲೈಡ್ನಿಂದಾಗಿ ದೇವಾಲಯ ಕುಸಿದಿದ್ದು, ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಸಾವು-ನೋವುಗಳ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಸಮ್ಮರ್ ಹಿಲ್ (Summer Hill) ಪ್ರದೇಶದಲ್ಲಿ ಭೂ-ಕುಸಿತ ಸಂಭವಿಸಿ ಅಲ್ಲಿನ ಶಿವದೇಗುಲ ಕುಸಿದಿದೆ. ದುರಂತ ಸ್ಥಳಕ್ಕೆ ಹಿಮಾಚಲ ಪ್ರದೇಶದ ಪೊಲೀಸರು, ಸ್ಟೇಟ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ದೌಡಾಯಿಸಿ, ರಕ್ಷಣಾ ಕಾರ್ಯ ಶುರುಮಾಡಿದ್ದಾರೆ.
ವರದಿಗಳ ಪ್ರಕಾರ ದೇವಾಲಯದಲ್ಲಿ ಸುಮಾರು 50 ಮಂದಿ ನಿಂತು ಪ್ರಾರ್ಥನೆ ಮಾಡುತ್ತಿದ್ದರು. ಹಿಮಾಚಲ ಪ್ರದೇಶದಲ್ಲಿ ಕಳೆದ 48 ಗಂಟೆಯಿಂದ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮ್ಮರ್ ಹಿಲ್ ಕುಸಿದು ದುರಂತ ನಡೆದಿದೆ. ದುರ್ಘಟನಾ ಸ್ಥಳಕ್ಕೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಹೋಗುವ ನಿರೀಕ್ಷೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ