ಐದು ವರ್ಷದ ಹಿಂದಿನ ಹರಕೆಯನ್ನು ತೀರಿಸಿದ ವ್ಯಕ್ತಿ
ರಿವರ್ಸ್ ಟ್ರ್ಯಾಕ್ಟರ್ ಚಲಾಯಿಸಿ ಸಾಹಸ ಮೆರೆಯ ಚಾಲಕ
ಹಗಲು ರಾತ್ರಿ ಎನ್ನದೆ ಟ್ರ್ಯಾಕ್ಟರ್ ಚಲಾಯಿಸಿದ ವ್ಯಕ್ತಿ
ಭಕ್ತರು ದೇವರಿಗೆ ನಾನಾ ರೀತಿಯಲ್ಲಿ ಹರಕೆ ಕಟ್ಟಿಕೊಂಡಿರುತ್ತಾರೆ. ಕೆಲವರು ಹಣದ ರೂಪದಲ್ಲಿ ಕೊಟ್ಟರೆ, ಇನ್ನು ಕೆಲವರು ದವಸ-ಧಾನ್ಯ ರೂಪದಲ್ಲಿ ಹರಕೆ ನೀಡುತ್ತಾರೆ. ಆದರೆ ಇಲ್ಲೊಬ್ಬನ ಯುವಕ ದೇವರಿಗೆ ರಿವರ್ಸ್ ಟ್ರ್ಯಾಕ್ಟರ್ ಓಡಿಸುವ ಹರಕೆ ಕಟ್ಟಿಕೊಂಡಿದ್ದಾನೆ. ಅದರಂತೆಯೇ ಈ ಹರಕೆಯನ್ನು ಮಾಡಿ ತೀರಿಸಿದ್ದಾನೆ.
ಹೌದು. 25 ವರ್ಷದ ಶಿವನಗೌಡ ಪಾಟೀಲ್ ಎಂಬ ಯುವಕ ಉಳುವಿ ಚನ್ನಬಸವೇಶ್ವರ ದೇವರಿಗೆ ಹರಕೆ ಕಟ್ಟಿಕೊಂಡಿದ್ದ. ಐದು ವರ್ಷದ ಹಿಂದೆಯೇ ಈ ಹರಕೆಯನ್ನು ಕಟ್ಟಿಕೊಂಡಿದ್ದ. ಅದರಂತೆಯೇ ನಿನ್ನೆ ದೇವರಿಗೆ ಹರಕೆ ಈಡೇರಿಸಿದ್ದಾನೆ. 16 ತಾಸಿನಲ್ಲಿ 174 ಕಿಮೀ ರಿವರ್ಸ್ ಟ್ರ್ಯಾಕ್ಟರ್ ಚಲಾಯಿಸುವ ಮೂಲಕಜ ಎಲ್ಲರನ್ನು ಬೆರಗುಗೊಳಿಸಿದ್ದಾನೆ.
ಶಿವನಗೌಡ ಪಾಟೀಲ್ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕನ್ನೂರು ಗ್ರಾಮದಿಂದ ಉಳುವಿಗೆ ರಿವರ್ಸ್ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದಾನೆ. ಹಗಲು ರಾತ್ರಿ ಎನ್ನದ ಸತತವಾಗಿ ಹಿಂಬದಿಯಿಂದ ಡ್ರೈವಿಂಗ್ ಮಾಡಿ ಸಾಹಸ ಮೆರೆದಿದ್ದಾನೆ.
ಟ್ರ್ಯಾಕ್ಟರ್ ಎಂಜಿನ್ ಚಲಾಯಿಸುವುದೇ ಕಷ್ಟಕರ ಅಂತದ್ರಲ್ಲಿ ಟೇಲರ್ ಸಮೇತ ಪ್ರಯಾಣ ಮಾಡಿದ್ದಾನೆ. ಯುವಕನ ಈ ದಿಟ್ಟ ಸಾಹಸಕ್ಕೆ ಊರಿನ ಹಾಗೂ ತಾಲೂಕಿನ ಜನರು ಫಿದಾ ಆಗಿದ್ದಾರೆ. ಶಹಬ್ಬಾಷ್ ಇದಪ್ಪಾ ಭಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ