newsfirstkannada.com

ತೆಲಂಗಾಣದಲ್ಲಿ ಭೀಕರ ಪ್ರವಾಹ; 17 ಮಂದಿ ಸಾವು; ಮನೆಯಿಂದ ಹೊರಬಾರದ ಸಿಎಂ ಕೆಸಿಆರ್​​

Share :

29-07-2023

    ಭೀಕರ ಮಳೆಗೆ ತತ್ತರಿಸಿದ ತೆಲಂಗಾಣ

    ಭೀಕರ ಪ್ರವಾಹಕ್ಕೆ 17 ಮಂದಿ ಸಾವು!

    ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಚಾಟಿ

ಹೈದರಾಬಾದ್​: ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರೋ ಭಾರೀ ಮಳೆಗೆ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ದೆಹಲಿ, ಹರಿಯಾಣ, ಪಂಜಾಬ್​​, ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ತೆಲಂಗಾಣದಲ್ಲಂತೂ ದಿನವಿಡೀ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಈ ಭೀಕರ ಪ್ರವಾಹಕ್ಕೆ ಇದುವರೆಗೂ 17 ಮಂದಿ ಬಲಿಯಾಗಿದ್ದಾರೆ.

ಪ್ರವಾಹದಿಂದ 17 ಮಂದಿ ಅಸುನೀಗಿದರೆ 10ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅದರಲ್ಲೂ ಮುಲುಗು ಜಿಲ್ಲೆಯಲ್ಲಿ ಹೆಚ್ಚಿನ ಸಾವು ನೋವುಗಳು ಸಂಭವಿಸಿವೆ. ಇಲ್ಲಿ ಅತೀ ಹೆಚ್ಚು ಬುಡಕಟ್ಟು ಜನಾಂಗ ವಾಸ ಮಾಡುತ್ತಿದೆ. ಭೀಕರ ಪ್ರವಾಹಕ್ಕೆ ಹಲವರು ನೀರಿನಲ್ಲೇ ಕೊಚ್ಚಿಕೊಂಡಿದ್ದಾರೆ. ಇನ್ನೂ ಹಲವರ ದೇಹಗಳು ಸಿಕ್ಕಿಲ್ಲವಾದರೂ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

ಇಷ್ಟಾದ್ರೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​​, ಪುತ್ರ ಕೆಟಿಆರ್​​​ ಮನೆಯಿಂದಲೇ ಹೊರ ಬಂದಿಲ್ಲ, ಜನರ ಸಮಸ್ಯೆ ಕೇಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ತೆಲಂಗಾಣ ಹೈಕೋರ್ಟ್​​​ನಲ್ಲಿ ಜನ ಪಿಐಎಲ್ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ಚಾಟಿ

ಸದ್ಯ ಪಿಐಎಲ್​​ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ. ಜತೆಗೆ ಇದುವರೆಗೂ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ನೀಡಿ ಎಂದು ಕೇಳಿದೆ. ಇದಕ್ಕೆ ಉತ್ತರಿಸಿದ ಕೆಟಿಆರ್​​, ಸದ್ಯದಲ್ಲೇ ಉತ್ತರ ನೀಡುವುದಾಗಿ ಹೈಕೋರ್ಟ್​​ಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೆಲಂಗಾಣದಲ್ಲಿ ಭೀಕರ ಪ್ರವಾಹ; 17 ಮಂದಿ ಸಾವು; ಮನೆಯಿಂದ ಹೊರಬಾರದ ಸಿಎಂ ಕೆಸಿಆರ್​​

https://newsfirstlive.com/wp-content/uploads/2023/07/Telangana-2.jpg

Load More