newsfirstkannada.com

ರಾತ್ರಿ ಬೆಳಗಾಗೋದರಲ್ಲಿ 17 ರೋಗಿಗಳು ಸಾವು.. ಸಂಚಲನ ಮೂಡಿಸಿದೆ ಆಸ್ಪತ್ರೆಯೊಂದರಲ್ಲಿ ನಡೆದ ಭೀಭತ್ಸ ಘಟನೆ

Share :

Published August 13, 2023 at 3:16pm

    ಹನ್ನೆರಡು ಗಂಟೆಗಳಲ್ಲಿ 17 ರೋಗಿಗಳು ಸಾವು

    ಛತ್ರಪತಿ ಶಿವಾಜಿ ಮಹಾರಾಜ್​ ಆಸ್ಪತ್ರೆಯಲ್ಲಿ ಘಟನೆ

    12 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಸಾವು

ಥಾಣೆ: 12 ಗಂಟೆಗಳಲ್ಲಿ 17 ರೋಗಿಗಳು ಸಾವನ್ನಪ್ಪಿದ ಘಟನೆ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್​ ಆಸ್ಪತ್ರೆಯಲ್ಲಿ ನಡೆದಿದೆ. ಅವರಲ್ಲಿ 12 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ರಾತ್ರಿ ಬೆಳಗಾಗೋದರಲ್ಲಿ ಜನರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ಆಡಳಿತದಲ್ಲಿ ಅವ್ಯವಸ್ಥೆ, ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯಿಂದ ಈ ಇಷ್ಟೊಂದು ಸಾವು ಸಂಭವಿಸಿದೆ. ಇದರ ಜೊತೆಗೆ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ.

ಹೆಚ್ಚಿನವರು ರಾತ್ರಿ ವೇಳೆ ಸಾವನ್ನಪ್ಪಿದ್ದಾರೆ. ಅದರೊಂದಿಗೆ ಖಾಸಗಿ ಆಸ್ಪತ್ರೆಯಿಂದ ಬಂದು ದಾಖಲಾದವರು ಇದ್ದಾರೆ. ಉಸಿರು ನಿಲ್ಲಿಸಿರುವವರಲ್ಲಿ ಹೆಚ್ಚಿನವರು 80 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ತಿಳಿದುಬಂದಿದೆ.

ಅದೇ ಊರಿನಲ್ಲಿದ್ದ ಖಾಸಗಿ ಸಿವಿಲ್​ ಆಸ್ಪತ್ರೆಯೊಂದು ಮುಚ್ಚಿರುವ ಕಾರಣ ಆ ಆಸ್ಪತ್ರೆಯಿಂದ ಬಂದ ರೋಗಿಗಳು ಇಲ್ಲಿ ದಾಖಲಾಗಿದ್ದರು. ಹೀಗಾಗಿ ಛತ್ರಪತಿ ಶಿವಾಜಿ ಮಹಾರಾಜ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳ ಶುಶ್ರೂಷೆ ಮಾಡಲು ಸಿಬ್ಬಂದಿಗಳು, ವೈದ್ಯರು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ.

ಇನ್ನು ಆಗಸ್ಟ್​ 10 ರಂದು ಒಂದೇ ದಿನ 5 ಜನರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅದರಂತೆಯೇ ನಿನ್ನೆ ರಾತ್ರಿ 10.30 ರಿಂದ ಬೆಇಗ್ಗೆ 8.30ರವರೆಗೆ 17 ಮಂದಿ ಸಾವನ್ನಪ್ಪಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ ಬೆಳಗಾಗೋದರಲ್ಲಿ 17 ರೋಗಿಗಳು ಸಾವು.. ಸಂಚಲನ ಮೂಡಿಸಿದೆ ಆಸ್ಪತ್ರೆಯೊಂದರಲ್ಲಿ ನಡೆದ ಭೀಭತ್ಸ ಘಟನೆ

https://newsfirstlive.com/wp-content/uploads/2023/08/Chatrapati-Shivaji-hospital.jpg

Load More