newsfirstkannada.com

ಶುಭ ಕಾರ್ಯದ ವೇಳೆ ಮಾಡಿದ್ದ ಬಿರಿಯಾನಿ ಸೇವಿಸಿ 17 ಮಂದಿ ಆಸ್ಪತ್ರೆಗೆ ದಾಖಲು

Share :

21-11-2023

    17 ಮಂದಿಯಲ್ಲಿ ಮಕ್ಕಳೂ ಕೂಡ ಅಸ್ವಸ್ಥರಾಗಿದ್ದಾರೆ

    ಗಾಬರಿಯಿಂದ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಕೆ.ಎಸ್.ಆನಂದ್

    ಶುಭ ಕಾರ್ಯ ನಡೆದ ಮನೆಯಲ್ಲಿ ದುಃಖದ ವಾತಾವರಣ

ಚಿಕ್ಕಮಗಳೂರು: ಬಿರಿಯಾನಿ ತಿಂದು ಗ್ರಾಮಸ್ಥರು, ಸಂಬಂಧಿಕರು ಆಸ್ಪತ್ರೆಗೆ ಸೇರಿದ ಘಟನೆ ಕಡೂರು ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

ಒಂದು‌ ದಿನದ ಹಿಂದೆ ಮಾಡಿದ್ದ ಬಿರಿಯಾನಿಯನ್ನು ತಿಂದಿದ್ದ ಗ್ರಾಮದ 17 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲಿನ ಶುಭಕಾರ್ಯ ಮುಗಿಸಿ ಸಂಜೆ ಸಂಬಂಧಿಕರಿಗಾಗಿ ಬಿರಿಯಾನಿ ತಯಾರಿಸಲಾಗಿತ್ತು.

ಅಸ್ವಸ್ಥರಾದವರನ್ನು ಕಡೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥಗೊಂಡವರಲ್ಲಿ ಮಕ್ಕಳೂ ಕೂಡ ಸೇರಿದ್ದಾರೆ. ಆಸ್ಪತ್ರೆಗೆ ಕಡೂರು ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುಭ ಕಾರ್ಯದ ವೇಳೆ ಮಾಡಿದ್ದ ಬಿರಿಯಾನಿ ಸೇವಿಸಿ 17 ಮಂದಿ ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2023/06/biriyani-3.jpg

Load More