newsfirstkannada.com

ಎಚ್ಚರ!! 17 ಮಂದಿಗೆ ಹುಚ್ಚು ನಾಯಿ ಕಡಿತ; ಗ್ರಾಮಸ್ಥರಲ್ಲಿ ಆತಂಕ

Share :

23-05-2023

  ಗ್ರಾಮದಲ್ಲಿ ಹುಚ್ಚು ನಾಯಿ ದಾಳಿ

  17 ಮಂದಿಗೆ ಹುಚ್ಚು ನಾಯಿ ಕಡಿತ

  ಬೆನ್ನು ಹಾಗು ಕುತ್ತಿಗೆಗೆ ಹುಚ್ಚು ನಾಯಿ ದಾಳಿ

ಬೀದರ್: ಬಾಲಕಿ ಸೇರಿ 17 ಮಂದಿಗೆ ಹುಚ್ಚು ನಾಯಿ ಕಚ್ಚಿದ ಘಟನೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಹುಚ್ಚು ನಾಯಿ ಎರಡು ದಿನಗಳಿಂದ ನಿರಂತರ ದಾಳಿ ಮಾಡುತ್ತಿದ್ದು, ಮನುಷ್ಯರು‌ ಸೇರಿದಂತೆ ಹಸು ಎಮ್ಮೆಗಳಿಗೂ ಕಚ್ಚಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ನಿನ್ನೆ ರಾತ್ರಿ 5 ಜನ ಹಾಗೂ ಬೆಳಿಗ್ಗೆ ಮೂವರಿಗೆ ಹುಚ್ಚು ನಾಯಿ ಕಚ್ಚಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬೆನ್ನು ಹಾಗು ಕುತ್ತಿಗೆಗೆ ಹುಚ್ಚು ನಾಯಿ ಕಚ್ಚುತ್ತಾ ಬಂದಿದೆ. ಎರಡು ದಿನಗಳಿಂದ ನಾಯಿ ದಾಳಿ‌ ಮಾಡ್ತಾ ಇದ್ರು ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ಕಂಡು ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.

ಇನ್ನು ಹುಚ್ಚು ನಾಯಿ ದಾಳಿಗೆ ಒಳಗಾದವರು ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಹುಚ್ಚು ನಾಯಿ ದಾಳಿಯಿಂದ ಗ್ರಾಮಸ್ಥರಲ್ಲಿ‌‌ ಆತಂಕ ಮನೆ ಮಾಡಿದೆ. ಹೀಗಾಗಿ ಜನರು ಮನೆಯಿಂದ ಹೊರಬರಲು ಹೆದರಿ ಮನೆಯಲ್ಲಿಯೇ ಕುಳಿತುಕೊಂಡಿದ್ದಾರೆ. ಈ ಕಾರಣಕ್ಕೆ ನಾರಾಯಣಪುರ ಗ್ರಾಮ ಭೀಕೋ ಎನ್ನುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ!! 17 ಮಂದಿಗೆ ಹುಚ್ಚು ನಾಯಿ ಕಡಿತ; ಗ್ರಾಮಸ್ಥರಲ್ಲಿ ಆತಂಕ

https://newsfirstlive.com/wp-content/uploads/2023/05/Mad-Dog.jpg

Load More