newsfirstkannada.com

ದಸರಾದಲ್ಲಿ ಅಪ್ರಾಪ್ತೆ ಪರಿಚಯ, ಮದ್ದೂರು ಲಾಡ್ಜ್​ನಲ್ಲಿ ಅತ್ಯಾಚಾರ; ವಿಡಿಯೋ ಕಳುಹಿಸಿ ಬ್ಲಾಕ್​ಮೇಲ್​ ಮಾಡಿದ ಕಿರಾತಕರು ಅರೆಸ್ಟ್​

Share :

10-11-2023

    ಮೈಸೂರಿನ ಯುವ ದಸರಾದಲ್ಲಿ ಅಪ್ರಾಪ್ತೆಯ ಪರಿಚಯ

    ಲವ್ ಮಾಡುವುದಾಗಿ ನಂಬಿಸಿ ಸಲುಗೆ ಬೆಳೆಸಿದ A1 ಆರೋಪಿ

    ವಿಡಿಯೋ ಕಳುಹಿಸಿ ಕರೆದಾಗಲೆಲ್ಲ ಬರುವಂತೆ ಬ್ಲಾಕ್ ಮೇಲ್

ಮಂಡ್ಯ: 17 ವರ್ಷದ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಂತೆ ಮೂವರು ಕಿರಾತಕರನ್ನು ಮದ್ದೂರು ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಂತ್ರಸ್ತೆ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಪುನೀತ , ಮಂಜುನಾಥ್, ಸಿದ್ದರಾಜು ಎಂದು ಗುರುತಿಸಲಾಗಿದ್ದು, ಮೂವರು ಮದ್ದೂರು ತಾಲೂಕಿನವರು ಎಂದು ತಿಳಿದುಬಂದಿದೆ.

ಮೈಸೂರು ದಸರಾದಲ್ಲಿ ಪರಿಚಯ

ಮೈಸೂರಿನ ಯುವ ದಸರಾದಲ್ಲಿ ಪುನೀತನಿಗೆ ಅಪ್ರಾಪ್ತೆಯ ಪರಿಚಯವಾಯಿತು. ಬಳಿಕ ಲವ್ ಮಾಡುವುದಾಗಿ ನಂಬಿಸಿ ಆಕೆಯೊಂದಿಗೆ ಸಲುಗೆ ಬೆಳೆಸಿದ್ದನು. ಆ ನಂತರ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್ ಕರೆದುಕೊಂಡು ಹೋಗಿ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಅತ್ಯಾಚಾರದ ವೇಳೆ ಕಿರಾತಕರು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಅಪ್ರಾಪ್ತೆ ಮೊಬೈಲ್​​ಗೆ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಕರೆದಾಗಲೆಲ್ಲ ಬರುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ. ಬಳಿಕ ಅಪ್ರಾಪ್ತೆ ಈ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಈ ಹಿನ್ನೆಲೆ ಅಪ್ರಾಪ್ತೆಯ ಪೋಷಕರು ಮದ್ದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಪ್ರಾಪ್ತೆಯ ಪೋಷಕರು ನೀಡಿದ ದೂರಿನ ಅನ್ವಯ ಮೂವರ ಬಂಧನವಾಗಿದೆ. ಅತ್ಯಾಚಾರ, ಪೋಕ್ಸೊ, ಆಟ್ರಾಸಿಟಿ ಸೆಕ್ಷನ್ ಅಡಿ‌ ಕೇಸ್ ದಾಖಲಾಗಿದೆ. ಸದ್ಯ ಮೂವರನ್ನು ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಸರಾದಲ್ಲಿ ಅಪ್ರಾಪ್ತೆ ಪರಿಚಯ, ಮದ್ದೂರು ಲಾಡ್ಜ್​ನಲ್ಲಿ ಅತ್ಯಾಚಾರ; ವಿಡಿಯೋ ಕಳುಹಿಸಿ ಬ್ಲಾಕ್​ಮೇಲ್​ ಮಾಡಿದ ಕಿರಾತಕರು ಅರೆಸ್ಟ್​

https://newsfirstlive.com/wp-content/uploads/2023/11/Girl-Rape.jpg

Load More