newsfirstkannada.com

ಆಘಾತಕಾರಿ ಸುದ್ದಿ: ಒಂದೇ ಜಿಲ್ಲೆಯಲ್ಲಿ ಕೇವಲ 3 ತಿಂಗಳ ಅವಧಿಯಲ್ಲಿ 179 ನವಜಾತ ಶಿಶುಗಳು ಸಾವು

Share :

17-09-2023

  0-28 ದಿನಗಳ ಮಕ್ಕಳೇ ಹೆಚ್ಚು ಸಾವು

  ಶೇ.20 ರಷ್ಟು ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೆ ಸಾವು

  ಆರೋಗ್ಯ ಅಧಿಕಾರಿ ಕೊಟ್ಟ ಮಾಹಿತಿ ಏನು..?

ಮಹಾರಾಷ್ಟ್ರದ ನಂದುರ್​ಬರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 179 ಮಕ್ಕಳು ಸಾವನ್ನಪ್ಪಿದ್ದಾರೆ.

ಈ ಆಘಾತಕಾರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ನಂದುರ್​ಬರ್ ಮುಖ್ಯ ಆರೋಗ್ಯಾಧಿಕಾರಿ ಎಂ ಸಾವನ್ ಕುಮಾರ್.. ಹಲವು ಕಾರಣಗಳಿಂದ ಮಕ್ಕಳು ಸಾವನ್ನಪ್ಪಿವೆ. ಹುಟ್ಟುವಾಗ ಕಮ್ಮಿ ತೂಕ, ಉಸಿರಾಟದ ತೊಂದರೆ, ಹುಟ್ಟುವಾಗ ಉಸಿರುಗಟ್ಟುವಿಕೆ ಹಾಗೂ ಸೆಪ್ಸಿಸ್​ನಿಂದ ಸಾವನ್ನಪ್ಪಿವೆ ಎಂದಿದ್ದಾರೆ.

ನಂದುರ್​ಬರ್ ಜಿಲ್ಲೆಯು ಗುಡ್ಡಗಾಡುವಿನಿಂದ ಕೂಡಿದ್ದು, ಬುಡಕಟ್ಟು ಸಮುದಾಯದ ಜನರೇ ಹೆಚ್ಚು ವಾಸಿಸುತ್ತಿದ್ದಾರೆ. ಮೃತಪಡುತ್ತಿರೋರಲ್ಲಿ ಶೇಕಡಾ 70 ರಷ್ಟು 0-28 ದಿನದ ಕಂದಮ್ಮಗಳು ಆಗಿವೆ. ಹುಟ್ಟುವ ಮಕ್ಕಳಲ್ಲಿ ಗಮನಾರ್ಹವಾಗಿ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬರುತ್ತಿದೆ. ಶೇಕಡಾ 20 ರಷ್ಟು ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೇ ಇರೋದ್ರಿಂದ ಮಕ್ಕಳು ಸಾವನ್ನಪ್ಪುತ್ತಿವೆ ಎಂದು ಸಾವನ್ ತಿಳಿಸಿದ್ದಾರೆ.

ಕಳೆದ ಜುಲೈನಲ್ಲಿ 75 ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆಗಸ್ಟ್​ನಲ್ಲಿ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. 86 ಮಕ್ಕಳು ಆಗಸ್ಟ್​ನಲ್ಲಿ ಸಾವನ್ನಪ್ಪಿದ್ರೆ, ಸೆಪ್ಟೆಂಬರ್​ನಲ್ಲಿ 18 ಮಕ್ಕಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಘಾತಕಾರಿ ಸುದ್ದಿ: ಒಂದೇ ಜಿಲ್ಲೆಯಲ್ಲಿ ಕೇವಲ 3 ತಿಂಗಳ ಅವಧಿಯಲ್ಲಿ 179 ನವಜಾತ ಶಿಶುಗಳು ಸಾವು

https://newsfirstlive.com/wp-content/uploads/2023/09/NewBornBaby.jpg

Load More