newsfirstkannada.com

ಕೊಹ್ಲಿಯಿಂದ ಜಡೇಜಾವರೆಗೆ.. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 19 ವಿಶ್ವ ದಾಖಲೆಗಳು ಉಡೀಸ್..!

Share :

06-11-2023

  ನಿನ್ನೆ ದಾಖಲಾಗಿರುವ 19 ರೆಕಾರ್ಡ್ಸ್ ಯಾವವು..?

  ನಿನ್ನೆ ಭಾರತ ತಂಡಕ್ಕೆ 243 ರನ್​ಗಳ ಭರ್ಜರಿ ಗೆಲುವು

  ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ಸೋಲು ಕಂಡ ದಕ್ಷಿಣ ಆಫ್ರಿಕಾ

ನಿನ್ನೆ ಕೋಲ್ಕತ್ತದ ಈಡನ್ ಗಾರ್ಡನ್​ನಲ್ಲಿ ನಡೆದ ವಿಶ್ವಕಪ್​ನ 37ನೇ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 243 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಐತಿಹಾಸಿಕ ಗೆಲುವಿನ ಜೊತೆಗೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್​ ಅವರು ಏಕದಿನ ಕ್ರಿಕೆಟ್​ನಲ್ಲಿ ಬಾರಿಸಿದ್ದ 49 ಶತಕಗಳ ದಾಖಲೆಯನ್ನು ರನ್ ಮಷಿನ್ ವಿರಾಟ್ ಕೊಹ್ಲಿ ಸರಿಗಟ್ಟಿದರು.

ಜೊತೆಗೆ ಶ್ರೇಯಸ್ ಅಯ್ಯರ್, 77 ರನ್​ಗಳನ್ನು ಬಾರಿಸುವ ಮೂಲಕ ವಿಶ್ವಕಪ್​ನಲ್ಲಿ ಸತತ 2ನೇ ಅರ್ಧ ಶತಕ ಬಾರಿಸಿ ಮಿಂಚಿದರು. ಪರಿಣಾಮ ಭಾರತ ನಿಗಧಿತ 50 ಓವರ್​ನಲ್ಲಿ 326ರನ್​ಗಳಿಸಿತು. ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ 10 ಓವರ್​ ಎಸೆದು ಕೇವಲ 30 ರನ್​ ನೀಡಿ ಒಂದು ವಿಕೆಟ್ ಪಡೆದು ಮಿಂಚಿದರು. 327 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ದಕ್ಷಿಣ ಆಫ್ರಿಕಾ 83 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಪ್ರದರ್ಶನ ನೀಡಿತು. ಹೀಗೆ ನಿನ್ನೆ ಮೈದಾನದಲ್ಲಿ ಬರೋಬ್ಬರಿ 19 ದಾಖಲೆಗಳು ಸೃಷ್ಟಿಯಾದವು.

ವಿಶ್ವಕಪ್​ನಲ್ಲಿ ಕೊಹ್ಲಿ 1500 ರನ್​..!

ವಿರಾಟ್ ಕೊಹ್ಲಿ 121 ಬಾಲ್​ಗಳನ್ನು ಎದುರಿಸಿ ಬರೋಬ್ಬರಿ 10 ಬೌಂಡರಿಗಳನ್ನು ಬಾರಿಸಿ 101 ರನ್​ಗಳಿಸಿದರು. ಈ ಮೂಲಕ ಕೊಹ್ಲಿ ಏಕದಿನ ವಿಶ್ವಕಪ್​​ನಲ್ಲಿ 1500 ರನ್​ ಕಲೆ ಹಾಕಿದರು. 58.25 ಸರಾಸರಿಯಲ್ಲಿ ವಿಶ್ವಕಪ್​ನಲ್ಲಿ 1573 ರನ್​ಗಳಿಸಿ ಮುನ್ನುಗ್ಗುತ್ತಿದ್ದಾರೆ ಕಿಂಗ್ ಕೊಹ್ಲಿ. ಅದರಲ್ಲಿ 4 ಶತಕ ಹಾಗೂ 10 ಅರ್ಧ ಶತಕಗಳು ಸೇರಿವೆ. ಏಕದಿನ ವಿಶ್ವಕಪ್​ನಲ್ಲಿ 1500ಕ್ಕೂ ಹೆಚ್ಚು ರನ್ ಬಾರಿಸಿದ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಿಂದೆ ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಈ ಸಾಧನೆ ಮಾಡಿದ್ದರು.

2023 ವಿಶ್ವಕಪ್​ನಲ್ಲಿ 500 ರನ್..!​

2023ರ ವಿಶ್ವಕಪ್​ನಲ್ಲಿ 500 ರನ್​ ಪೂರೈಸಿದ ಭಾರತದ ಮೊದಲ ಆಟಗಾರ ವಿರಾಟ್ ಕೊಹ್ಲಿ. 500 ರನ್ ಸಿಡಿಸಿದ ವಿಶ್ವದ ಮೂರನೇ ಆಟಗಾರ ಎಂಬ ಕೀರ್ತಿ ಕೊಹ್ಲಿಗೆ ಸೇರಿದೆ. ವಿರಾಟ್ 543 ರನ್​ಗಳಿಸಿ ವಿಶ್ವಕಪ್​ನಲ್ಲಿ ಆಡುತ್ತಿದ್ದಾರೆ. ವಿಶೇಷ ಅಂದರೆ 8 ಪಂದ್ಯಗಳನ್ನು ಆಡಿರುವ ವಿರಾಟ್ ನಾಲ್ಕು ಅರ್ಧ ಶತಕ, ಎರಡು ಶತಕಗಳು ಬಂದಿವೆ. ರನ್​ಗಳಿಕೆಯಲ್ಲಿ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿ ಕಾಕ್ ಅವರು 550 ರನ್​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್​ನ ರಚಿನ್ ರವೀಂದ್ರ 523 ರನ್​ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ತವರಿನಲ್ಲಿ 6000 ರನ್ ಪೂರೈಸಿದ ಕೊಹ್ಲಿ..!

ಏಕದಿನ ಕ್ರಿಕೆಟ್​ನಲ್ಲಿ ಭಾರತದ ನೆಲದಲ್ಲಿ 6000 ರನ್​ ಪೂರೈಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಈ ಮೊದಲು ಸಚಿನ್ ತೆಂಡುಲ್ಕರ್ 6000ಕ್ಕೂ ಹೆಚ್ಚು ರನ್ ಬಾರಿಸಿದ್ದರು. ವಿರಾಟ್ ಕೊಹ್ಲಿ 6046 ರನ್​ಗಳಿಸಿ ಮುನ್ನುಗ್ಗುತ್ತಿದ್ದರೆ, ಸಚಿನ್ 6976 ರನ್​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿಯ ಈ ಸಾಧನೆಯಲ್ಲಿ 23 ಶತಕ, 31 ಅರ್ಧ ಶತಕ ಸೇರಿವೆ.

49 ಶತಕ ಬಾರಿಸಿದ ವಿರಾಟ್..!

ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್​ನಲ್ಲಿ 49 ಶತಕಗಳನ್ನು ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಅದನ್ನು ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ 70 ಅರ್ಧಶತಕಗಳನ್ನು ಬಾರಿಸಿದ್ರೆ ಸಚಿನ್ ಹೆಸರಲ್ಲಿ 96 ಅರ್ಧಶತಕ ಇದೆ.

ODIನಲ್ಲಿ 50ಕ್ಕೂ ಹೆಚ್ಚು ರನ್​ಗಳಿಸಿದ 2ನೇ ಆಟಗಾರ..!

ಏಕದಿನ ಕ್ರಿಕೆಟ್​ನಲ್ಲಿ 50ಕ್ಕೂ ಹೆಚ್ಚು ರನ್​ಗಳಿಸಿದ ವಿಶ್ವದ ಎರಡನೇ ಆಟಗಾರ ಎಂಬ ಕೀರ್ತಿ ವಿರಾಟ್ ಕೊಹ್ಲಿಯದ್ದು. ಇದುವರೆಗೆ ಕೊಹ್ಲಿ 119 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್ ಹೆಸರಲ್ಲಿ 145 ಇದೆ. ಶ್ರೀಲಂಕ ಮಾಜಿ ಕ್ರಿಕೆಟಿಗ ಕುಮಾರ್ ಸಂಗಾಕರ್ 118 ಸಲ 50ಕ್ಕೂ ಹೆಚ್ಚು ರನ್​ಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ 1500 ರನ್​..!

ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ಊರಿದ್ದಾರೆ. ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1500 ರನ್​ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 5 ಶತಕ, 8 ಅರ್ಧಶತಕ ಬಾರಿಸಿ 1504 ರನ್​ ಕಲೆ ಹಾಕಿದ್ದಾರೆ. ಶ್ರೀಲಂಕಾ ವಿರುದ್ಧ ಅತ್ಯಧಿಕ 2594, ಆಸ್ಟ್ರೇಲಿಯಾ ವಿರುದ್ಧ 2013, ವೆಸ್ಟ್​ ವಿಂಡೀಸ್ ವಿರುದ್ಧ 2261 ಹಾಗೂ ನ್ಯೂಜಿಲೆಂಡ್ ವಿರುದ್ಧ 1528 ರನ್​ಗಳನ್ನು ಗಳಿಸಿಕೊಂಡಿದ್ದಾರೆ.

ಹುಟ್ಟು ಹಬ್ಬದ ದಿನ ಶತಕ ಬಾರಿಸಿದ 3ನೇ ಆಟಗಾರ

ಹುಟ್ಟು ಹಬ್ಬದ ದಿನ ಶತಕ ಬಾರಿಸಿದ ಭಾರತದ ಮೂರನೇ ಆಟಗಾರ ಅನ್ನೋ ದಾಖಲೆಯನ್ನೂ ಕೊಹ್ಲಿ ಬರೆದಿದ್ದಾರೆ. ನಿನ್ನೆ ನವೆಂಬರ್ 5, ವಿರಾಟ್ ಕೊಹ್ಲಿ ಬರ್ತ್​​ಡೇ ಆಗಿತ್ತು. ಅದೇ ದಿನ ಶತಕ ಬಾರಿಸಿ ಮಿಂಚಿದ್ದಾರೆ. 1998ರಲ್ಲಿ ಹುಟ್ಟುಹಬ್ಬದ ದಿನ ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯಾ ವಿರುದ್ಧ 134 ರನ್​ಗಳಿಸಿ ಸಾಧನೆ ಮಾಡಿದ್ದರು. 1993ರಲ್ಲಿ ಇಂಗ್ಲೆಂಡ್ ವಿರುದ್ಧ 100 ರನ್​ಗಳಿಸಿ ವಿನೋದ್ ಕಾಂಬ್ಳಿ ಈ ಸಾಧನೆ ಮಾಡಿದ್ದರು.

2023ರಲ್ಲಿ 2ನೇ ಅತ್ಯಧಿಕ ಸ್ಕೋರ್..!

ಪಾಥುಮ್ ನಿಸ್ಸಾಂಕ ಅವರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ಈ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಎರಡನೇ ಆಟಗಾರ ಆಗಿದ್ದಾರೆ 72.18 ಸರಾಸರಿಯಲ್ಲಿ 1155 ರನ್​ಗಳಿಸಿದ್ದಾರೆ.

ಎಬಿಡಿ ದಾಖಲೆ ಸರಿಗಟ್ಟಿದ ರೋಹಿತ್..!

ಈಡನ್​ ಗಾರ್ಡನ್​ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಸ್ಮರಣೀಯ ದಾಖಲೆ ಬರೆದಿದ್ದಾರೆ. ಪಂದ್ಯದಲ್ಲಿ 2 ಸಿಕ್ಸರ್​ ಸಿಡಿಸಿದ ಹಿಟ್​ಮ್ಯಾನ್,​ ಈ ವರ್ಷದಲ್ಲಿ ಒಟ್ಟು 58 ಸಿಕ್ಸರ್​​ ಪೂರೈಸಿದರು. ಈ ಮೂಲಕ ಬಹು ಕಾಲದಿಂದ ಎಬಿ ಡಿವಿಲಿಯರ್ಸ್​ ಹೆಸರಲ್ಲಿದ್ದ ದಾಖಲೆಯನ್ನ ಸರಿಗಟ್ಟಿದ್ರು. 2015ರಲ್ಲಿ ಎಬಿಡಿ 58 ಸಿಕ್ಸರ್​ಗಳನ್ನು ಬಾರಿಸಿ ತಮ್ಮ ಹೆಸರಲ್ಲಿ ದಾಖಲೆಗಳನ್ನು ಬರೆದುಕೊಂಡಿದ್ದರು. ಕ್ರಿಸ್ ಗೇಲ್ 2019ರಲ್ಲಿ ಏಕದಿನ ಪಂದ್ಯಗಳಲ್ಲಿ 56 ಸಿಕ್ಸರ್​ಗಳನ್ನು ಬಾರಿಸಿ ಆ ವರ್ಷದ ಕ್ಯಾಲೆಂಡರ್​ನಲ್ಲಿ ತಮ್ಮ ಹೆಸರನ್ನು ಅಧಿಕೃತಗೊಳಿಸಿದ್ದರು. ಶಾಹಿದ್ ಅಫ್ರಿದಿ 2002ರಲ್ಲಿ 48 ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಪಾಕಿಸ್ತಾನದ ಶಾಹಿದ್ ಅಫ್ರಿದಿ ಈ ಸಾಧನೆ ಮಾಡಿದ್ದರು. ವಿಶೇಷ ಅಂದರೆ 2023ರಲ್ಲಿ ಯುಎಇ ಆಟಗಾರ ಮೊಹ್ಮದ್ ವಾಸೀಮ್ ಕೂಡ 47 ಸಿಕ್ಸರ್​ಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.

ಅಯ್ಯರ್ ವಿರುದ್ಧ ಎನ್​​ಗಿಡಿ ದಾಖಲೆ

ದಕ್ಷಿಣ ಆಫ್ರಿಕಾ ತಂಡದ ಎನ್​ಗಿಡಿ, ಶ್ರೇಯಸ್ ಅಯ್ಯರ್ ವಿರುದ್ಧ ವಿಶೇಷ ದಾಖಲೆ ಮಾಡಿದರು. 37 ಓವರ್​ನಲ್ಲಿ ಅಯ್ಯರ್ ಅವರನ್ನು ಔಟ್ ಮಾಡುವ ಮೂಲಕ ಸತತ 5ನೇ ಬಾರಿಗೆ ವಿಕೆಟ್ ಎತ್ತಿದ್ದ ಖ್ಯಾತಿ ಪಡೆದರು. ಆಸ್ಟ್ರೇಲಿಯಾ ಆಟಗಾರ ಆ್ಯಡಂ ಜಂಪಾ, ಅಯ್ಯರ್ ಅವರನ್ನು ಮೂರು ಬಾರಿ ಔಟ್ ಮಾಡಿದ್ದಾರೆ.

1000 ರನ್ ಪೂರೈಸಿದ ಡಿಕಾಕ್

ವಿಶ್ವಕಪ್​ನಲ್ಲಿ ಕ್ವಿಂಟನ್ ಡಿಕಾಕ್ ಇಲ್ಲಿಯವರೆಗೆ 25 ಪಂದ್ಯಗಳನ್ನು ಆಡಿ 1000 ರನ್​ ಪೂರೈಸಿದರು. ವಿಶ್ವಕಪ್​ನಲ್ಲಿ ಸಾವಿರ ರನ್ ಪೂರೈಸಿದ ದಕ್ಷಿಣ ಆಫ್ರಿಕಾದ 4ನೇ ಆಟಗಾರ ಅನ್ನೋ ಹೆಗ್ಗಳಿಗೆ ಡಿಕಾಕ್​​ ಅವರದ್ದಾಗಿದೆ.

ಜಡೇಜಾ ಭಯಂಕರ ದಾಖಲೆ

ನಿನ್ನೆಯ ಪಂದ್ಯದಲ್ಲಿ ರವೀಂದ್ರ ಜಡೇಜಾ ಅಮೋಘ ದಾಖಲೆ ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ 9 ಓವರ್​ಗಳನ್ನು ಮಾಡಿ ಕೇವಲ 33 ರನ್​ಗಳನ್ನು ನೀಡಿ 5 ವಿಕೆಟ್ ಪಡೆದು ಐತಿಹಾಸಿಕ ದಾಖಲೆ ಬರೆದರು. ವಿಶ್ವಕಪ್​ನಲ್ಲಿ 5 ವಿಕೆಟ್ ಪಡೆದ ಭಾರತ ಎರಡನೇ ಸ್ಪಿನ್ನರ್ ಅನ್ನೋ ಹೆಗ್ಗಳಿಕೆ ಪಾತ್ರರಾದರು. ದಕ್ಷಿಣ ಆಫ್ರಿಕಾ ವಿರುದ್ಧ ಒಡಿಐ ವಿಶ್ವಕಪ್​​ನಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ ಎನಿಸಿಕೊಂಡರು.

ಭಾರತದ 7ನೇ ಬೌಲರ್..!

ವಿಶ್ವಕಪ್​ನಲ್ಲಿ ಭಾರತದ ಪರ ಒಂದೇ ಪಂದ್ಯದಲ್ಲಿ 5 ವಿಕೆಟ್​​ಗಳನ್ನು ಪಡೆದ ಭಾರತದ 7ನೇ ಆಟಗಾರ ಅನ್ನೋ ಸಾಧನೆ ಮಾಡಿದರು. ಯುವರಾಜ್ ಸಿಂಗ್ ಬಳಿಕ 5 ವಿಕೆಟ್​ ಪಡೆದ ಎರಡನೇ ಆಟಗಾರ ಆಗಿದ್ದಾರೆ.

ಜಡೇಜಾ 3ನೇ ಬೌಲರ್

ದಕ್ಷಿಣ ಆಫ್ರಿಕಾ ವಿರುದ್ಧ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಮೂರನೇ ಆಟಗಾರ ಜಡೇಜಾ. ಸುನಿಲ್ ಜೋಶಿ, ಚಹಾಲ್ ಬಳಿಕ ಜಡೇಜಾ ಈ ಸಾಧನೆ ಮಾಡಿದಂತಾಗಿದೆ.

ಈ ಮೈದಾನದಲ್ಲಿ ಭಾರತದ 2ನೇ ಆಟಗಾರ..!

ಕೋಲ್ಕತ್ತಾದ ಈಡನ್ ಗಾರ್ಡನ್​ನಲ್ಲಿ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದ ಎರಡನೇ ಬೌಲರ್ ಜಡೇಜಾ ಆಗಿದ್ದಾರೆ. ವೆಸ್ಟ್​ ವಿಂಡೀಸ್ ವಿರುದ್ಧ 12 ರನ್​ ನೀಡಿ 6 ವಿಕೆಟ್ ಪಡೆದಿದ್ದರು ಅನಿಲ್ ಕುಂಬ್ಳೆ. ದಕ್ಷಿಣ ಆಫ್ರಿಕಾದ ಅಲ್ಲನ್ ಡೊನಾಲ್ಡ್ ಇದೇ ಮೈದಾನದಲ್ಲಿ ಐದು ವಿಕೆಟ್ ಪಡೆದಿದ್ದರು.

ವಿಶ್ವಕಪ್​ನಲ್ಲಿ ಅತ್ಯಧಿಕ ಕಡಿಮೆ ಸ್ಕೋರ್..!

ಏಕದಿನ ವಿಶ್ವಕಪ್​ನ ಇತಿಹಾಸದಲ್ಲೇ ದಕ್ಷಿಣ ಆಫ್ರಿಕಾ ನಿನ್ನೆ ಗಳಿಸಿದ ರನ್ ಅತ್ಯಧಿಕ ಕಡಿಮೆ ಸ್ಕೋರ್. ಇದೇ ಮೊದಲ ಬಾರಿಗೆ 100ಕ್ಕಿಂತ ಕಡಿಮೆ ಸ್ಕೋರ್​ ಗಳಿಸಿತು. 2007ರಲ್ಲಿ ದಕ್ಷಿಣ ಆಫ್ರಿಕಾ 149 ರನ್​ಗಳಿಸಿತ್ತು. ಅದೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಾಡಿದ್ದ ಅತ್ಯಂತ ಕಡಿಮೆ ಸ್ಕೋರ್ ಆಗಿತ್ತು.

ಭಾರತ ವಿರುದ್ಧ ODIನಲ್ಲಿ ಕಡಿಮೆ ಸ್ಕೋರ್..!

ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಇದಾಗಿದೆ. 2002ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದ ವೇಳೆ 99 ರನ್​ಗಳಿಸಿ ಕೆಟ್ಟ ದಾಖಲೆ ಬರೆದಿತ್ತು.

2023ರಲ್ಲಿ ಅತ್ಯಧಿಕ ವಿಕೆಟ್..!

ಕುಲ್ದೀಪ್ ಯಾದವ್ ನಿನ್ನೆಯ ಪಂದ್ಯದಲ್ಲಿ ಎರಡು ವಿಕೆಟ್ ಪಡೆದರು. ಈ ಮೂಲಕ 2023ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರರ ಪೈಕಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟು 45 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ನೇಪಾಳದ ಸಂದೀಪ್ 43 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಅತಿ ದೊಡ್ಡ ಸೋಲು..!

ನಿನ್ನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ 243 ರನ್​ಗಳ ಸೋಲು ಆಗಿದೆ. ಇದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲು ಆಗಿದೆ. ಈ ಹಿಂದೆ ಪಾಕ್ ವಿರುದ್ಧ 182 ರನ್​ಗಳಿಂದ ಸೋತಿತ್ತು.

-ಗಣೇಶ್, ಕೆರೆಕುಳಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿಯಿಂದ ಜಡೇಜಾವರೆಗೆ.. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 19 ವಿಶ್ವ ದಾಖಲೆಗಳು ಉಡೀಸ್..!

https://newsfirstlive.com/wp-content/uploads/2023/11/KOHLI-2.jpg

Load More