newsfirstkannada.com

Video: ಕೇವಲ 19 ವರ್ಷ.. ಅಂದು ಉಲ್ಟಾ, ಇಂದು ಸೀದಾ ಲಾಂಗ್​ ಬೀಸಿದ! ಪೊಲೀಸರು ಏನು ಮಾಡಿದ್ರು ಗೊತ್ತಾ?

Share :

20-08-2023

    ಲಾಂಗ್​ ಹಿಡಿದು ಹವಾ ಮೆಂಟೇನ್ ಮಾಡುತ್ತಿದ್ದ 19ರ ಯುವಕ​

    ಮನೆ ಮಾಲೀಕನ ಮೇಲೆ ಸೀದಾ ಲಾಂಗ್​ ಬೀಸಿದ ಚಿಗುರು ಮೀಸೆಯ ಯುವಕ

    3 ತಿಂಗಳಿಂದ ಹುಚ್ಚಾಟ ಮೆರೆಯುತ್ತಿದ್ದವನನ್ನು ಪೊಲೀಸರು ಈಗೇನು ಮಾಡಿದ್ರು?

ಹವಾ ಮೆಂಟೇನ್​ ಮಾಡಲು ಅಂದು ಉಲ್ಟಾ ಲಾಂಗ್ ಬೀಸಿದ್ದ ಹದಿ ಹರೆಯದ ಪುಂಡನೋರ್ವ ಸ್ನೇಹಿತರೊಂದಿಗೆ ಸೇರಿ ಇಂದು ಸೀದಾ ಲಾಂಗ್ ಬೀಸಿದ್ದಾನೆ. ಮನೆಯೊಂದಕ್ಕೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆತ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.

ದೃಶ್ಯದಲ್ಲಿ ಕಂಡಂತೆ ಲಾಂಗ್ ಬೀಸಿದ್ದ ಯುವಕನ ಹೆಸರು ಅಭಿ. ಕೇವಲ 19 ವರ್ಷ. 3 ತಿಂಗಳ ಹಿಂದೆಯೇ ಆತ ಉಲ್ಟಾ ಲಾಂಗ್​ ಬೀಸಿದ್ದ. ಈ ದೃಶ್ಯ ಕೂಡ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿದ್ಯಾಮಾನ ನಗರ, ತಿಗಳರ ಪಾಳ್ಯ ಮತ್ತು ಚಕ್ರ ನಗರದಲ್ಲಿ ಲಾಂಗ್​ ಬಿಸುತ್ತಾ ಕೃತ್ಯವೆಸಗಿದ್ದ. ಆದರೆ ಅಂದು ಈತನ ಬಗ್ಗೆ ಪೊಲೀಸರು ಅಲರ್ಟ್​ ಆಗಿರಲಿಲ್ಲ.

ಉಲ್ಟಾ ಲಾಂಗ್​ ಬೀಸಿದ್ದ ಅಭಿ ದೃಶ್ಯ

ಆದರೆ ಇಂದು ನೇರವಾಗಿ ಲಾಂಗ್​ ಬೀಸಿದ್ದಾನೆ. ಸ್ನೇಹಿತರೊಂದಿಗೆ ಮನೆಯೊಂದಕ್ಕೆ ನುಗ್ಗಿ ಹಲ್ಲೆ ಮಾಡಿದ್ದಾನೆ. ಬಳಿಕ ಲಾಂಗ್​ ಹಿಡಿದು ಕಾರಿನ ಗಾಜು ಹೊಡೆದಿದ್ದಾನೆ. ಇದನ್ನು ಕಂಡು ಮನೆಯಿಂದ ಹೊರಬಂದ ಮನೆ ಮಾಲೀಕನ ಮೇಲೆಯೇ ಲಾಂಗ್​ ಬೀಸಿದ್ದಾನೆ.

ಸದ್ಯ ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳಾದ ಅಭಿ, ದರ್ಶನ್ ಸೇರಿ ಆತನ ಸ್ನೇಹಿತನೋರ್ವನನ್ನು ಅರೆಸ್ಟ್ ಮಾಡಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಕೇವಲ 19 ವರ್ಷ.. ಅಂದು ಉಲ್ಟಾ, ಇಂದು ಸೀದಾ ಲಾಂಗ್​ ಬೀಸಿದ! ಪೊಲೀಸರು ಏನು ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2023/08/Abhi.jpg

Load More