newsfirstkannada.com

ಕೇವಲ 19 ವರ್ಷಕ್ಕೇ ಕ್ರಿಮಿನಲ್​ಗಳ ಗೊಂಚಲು; ಇಂಟರ್ಪೋಲ್ ರೆಡ್​ ಕಾರ್ನರ್ ನೋಟಿಸ್

Share :

28-10-2023

    ಗ್ಯಾಂಗ್​​ಸ್ಟರ್ ಯೋಗೇಶ್ ಕದ್ಯಾನ್ ವಿರುದ್ಧ ಹೈ-ಅಲರ್ಟ್

    ಗ್ಯಾಂಗ್​​ಸ್ಟರ್​ನ ಹುಡುಕಿಕೊಟ್ಟವ್ರಿಗೆ 1.5 ಲಕ್ಷ ಬಹುಮಾನ ಘೋಷಣೆ

    ನಕಲಿ ಪಾಸ್​ಪೋರ್ಟ್ ಬಳಸಿ ಅಮೆರಿಕ ಹೋಗಿರುವ ಶಂಕೆ

ಹರಿಯಾಣ ಮೂಲದ ಗ್ಯಾಂಗ್​ಸ್ಟರ್, ಕೇವಲ 19 ವರ್ಷದ​ ಯೋಗೇಶ್ ಕದ್ಯಾನ್​​ ವಿರುದ್ಧ ಇಂಟರ್​​ಪೊಲ್ ‘ರೆಡ್​​ ಕಾರ್ನರ್ ನೋಟಿಸ್’ ಜಾರಿಮಾಡಿದೆ. ಆರೋಪಿ ಯೋಗೇಶ್ ವಿರುದ್ಧ ಕೊಲೆ, ಕೊಲೆಗೆ ಯತ್ನ, ಕ್ರಿಮಿನಲ್ ಪಿತೂರಿ, ಶಸ್ತ್ರಾಸ್ತ್ರ ಕಾಯ್ದೆಯಡಿ ಹಲವು ಪ್ರಕಣಗಳು ದಾಖಲಾಗಿವೆ.

ಕೆಲವು ವರದಿಗಳ ಪ್ರಕಾರ.. ಈಗಾಗಲೇ ಈತ ಭಾರತದಿಂದ ತಪ್ಪಿಸಿಕೊಂಡು ಅಮೆರಿಕದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗಿದೆ. ಈ ಗ್ಯಾಂಗ್​​ಸ್ಟರ್ ವಿರುದ್ಧ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳ (NIA) ಕೂಡ ಫೀಲ್ಡ್​ಗೆ ಇಳಿದಿದೆ. ಗ್ಯಾಂಗ್​​ಸ್ಟರ್​ಗೆ ಉಗ್ರರ ನಟ್​​ವರ್ಕ್​ ಏನಾದರೂ ಇದೆಯಾ? ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈಗಾಲೇ ಅನೇಕ ಗ್ಯಾಂಗ್​​ಸ್ಟರ್​ಗಳು ನಕಲಿ ಪಾಸ್​ಪೋರ್ಟ್​ಗಳನ್ನು ಬಳಿಸಿಕೊಂಡು ವಿದೇಶಕ್ಕೆ ಹಾರಿದ್ದಾರೆ. ಅದೇ ರೀತಿ, ಯೋಗೇಶ್ ಕೂಡ ನಕಲಿ ಪಾಸ್​​ಪೋರ್ಟ್ ಪಡೆದು ಎಸ್ಕೇಪ್ ಆಗಿದ್ದನಾ ಎಂಬ ಅನುಮಾನವೂ ಶುರುವಾಗಿದೆ.

ಕುಖ್ಯಾತ ಗ್ಯಾಂಗ್​ಸ್ಟರ್, ಲಾರೆನ್ಸ್ ಬಿಷ್ಣೋಯಿ ಹತ್ಯೆ ಮಾಡಲು ತಯಾರಿ ನಡೆಸಿದ್ದ ತಂಡದಲ್ಲಿ ಈತ ಕೂಡ ಇದ್ದ ಎನ್ನಲಾಗಿದೆ. ಬಾಲಾರೋಪಿಯಾಗಿರುವ ಗ್ಯಾಂಗ್​ಸ್ಟರ್​ ತನ್ನ 17ನೇ ವರ್ಷಕ್ಕೆ ಅಮೆರಿಕಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 1.5 ಲಕ್ಷ ಬಹುಮಾನ ನೀಡೋದಾಗಿ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 19 ವರ್ಷಕ್ಕೇ ಕ್ರಿಮಿನಲ್​ಗಳ ಗೊಂಚಲು; ಇಂಟರ್ಪೋಲ್ ರೆಡ್​ ಕಾರ್ನರ್ ನೋಟಿಸ್

https://newsfirstlive.com/wp-content/uploads/2023/10/Yogesh-Kadyan.jpg

Load More