newsfirstkannada.com

VIDEO: ತಾಯಿಯ ಎದುರೇ ಮಗಳನ್ನು ಚುಚ್ಚಿ, ಚುಚ್ಚಿ ಕೊಂದ ಕಿರಾತಕ; ಹಾಡಹಗಲೇ ಮತ್ತೊಂದು ಭಯಾನಕ ಹತ್ಯೆ

Share :

10-07-2023

    ಅಮ್ಮನ ಎದುರೇ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಪಿ

    ನಡುರೋಡಲ್ಲಿ ಚುಚ್ಚಿ, ಚುಚ್ಚಿ ಸಾಯಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ನಾಲ್ಕು ತಿಂಗಳ ಹಿಂದೆ ಪರಿಚಯವಾದ ಯುವತಿಯ ಬರ್ಬರ ಹತ್ಯೆ

ಚಂಡೀಗಢ: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರೀತಿಸಿದ ಯುವತಿಯನ್ನು ತಾಯಿಯ ಮುಂದೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗುರುಗ್ರಾಮದ ಪಾಲಮ್ ವಿಹಾರ ಥಾನದಲ್ಲಿ ನಡೆದಿದೆ. 19 ವರ್ಷದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಭೀಕರವಾಗಿ ಕೊಲೆ ಮಾಡಿತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೊಲೆ ಆಗಿದ್ದೇಗೆ ಗೊತ್ತಾ..?

ತಾಯಿ ಹಾಗೂ ಮಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಇದೇ ವೇಳೆ 23 ವರ್ಷದ ಯುವಕನೊಬ್ಬ ಅವರ ಮುಂದೆ ಬರುತ್ತಾನೆ. ಕೆಲ ಕಾಲ ಈ ತಾಯಿ, ಮಗಳು ಮತ್ತು ಯುವಕನ ನಡುವೆ ಮಾತುಕತೆ ನಡೆಯುತ್ತದೆ. ಈ ವೇಳೆ ಯುವತಿಯು ಮುಂದೆ ಹೋಗಲು ಯತ್ನಿಸುತ್ತಾಳೆ. ಆದರೆ ಆಕೆಯನ್ನು ದಿಢೀರ್ ಅಡ್ಡಗಟ್ಟಿ ತಾಯಿ ಮುಂದೆಯೇ ಹಲವು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡುತ್ತಾನೆ. ಇನ್ನು, ಭೀಕರವಾಗಿ ಕೊಲೆ ಮಾಡುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಯುವಕ ಹಾಗೂ ಯುವತಿ ಉತ್ತರ ಪ್ರದೇಶದ ಬದೌನ್ ಮೂಲದವರು. ನಾಲ್ಕು ತಿಂಗಳ ಹಿಂದೆ ಈ ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಆದರೆ ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಯುವಕ ಕೋಪಕೊಂಡು ಯುವತಿಯನ್ನು ಕೊಲೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತಾಯಿಯ ಎದುರೇ ಮಗಳನ್ನು ಚುಚ್ಚಿ, ಚುಚ್ಚಿ ಕೊಂದ ಕಿರಾತಕ; ಹಾಡಹಗಲೇ ಮತ್ತೊಂದು ಭಯಾನಕ ಹತ್ಯೆ

https://newsfirstlive.com/wp-content/uploads/2023/07/girl-death-2.jpg

Load More