ಬೆಂಗಳೂರಿನ ಪೊದೆಯಲ್ಲಿ ಸಿಕ್ತು ಅಮೆರಿಕನ್ ಡಾಲರ್ಗಳು
ಚಿಂದಿ ಆಯ್ತಿದ್ದವನಿಗೆ ಸಿಕ್ತು 2.5 ಮಿಲಿಯನ್ ಡಾಲರ್ ನೋಟುಗಳು
ನೋಟು ಕಂಡು RBIಗೆ ಪತ್ರ ಬರೆದ ಹೆಬ್ಬಾಳ ಪೊಲೀಸರು; ಮುಂದೇನಾಯ್ತು?
ಕಳೆದ ಭಾನುವಾರ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಡಾಲರ್ ಸಿಕ್ಕಿದ್ದು, ಇದೀಗ ಡಾಲರ್ ಬಾಕ್ಸ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಆದರೆ ಸಿಕ್ಕ ಅಮೆರಿಕನ್ ಡಾಲರ್ಗಳು ನಕಲಿ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.
ಅಂದಹಾಗೆಯೇ, ಚಿಂದಿ ಆಯ್ತಿದ್ದವನಿಗೆ ರೈಲ್ವೇ ಹಳಿ ಪಕ್ಕದ ಪೊದೆಯಲ್ಲಿ 2.5 ಮಿಲಿಯನ್ ಯುಎಸ್ ಡಾಲರ್ ಸಿಕ್ಕಿದೆ. ಇದನ್ನು ಆತ ತನ್ನ ಮಾಲೀಕನಿಗೆ ತಿಳಿಸಿದ್ದನು. ಮತ್ತೋರ್ವ ವ್ಯಕ್ತಿ ಕೂಡ ಇದನ್ನು ಕಂಡು ಕಮಿಷನರ್ಗೆ ಮಾಹಿತಿ ಹಂಚಿಕೊಂಡಿದ್ದನು. ಕೂಡಲೇ ಪೊದೆಯಲ್ಲಿ ಸಿಕ್ಕ ಹಣದ ಬಗ್ಗೆ ಹೆಬ್ಬಾಳ ಠಾಣೆಗೆ ಮಾಹಿತಿ ರವಾನಿಸಲಾಗಿದೆ.
ಇನ್ನು ವಶಕ್ಕೆ ಪಡೆದ ಡಾಲರ್ಸ್ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್ನಲ್ಲಿರೋ ಪತ್ರವೊಂದು ಸಿಕ್ಕಿದ್ದು, ಅಮೆರಿಕದಿಂದ ಅಭಿವೃದ್ಧಿಗಾಗಿ ಕಳುಹಿಸಲಾದ ಹಣ ಇದು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಸಿಕ್ಕ ಪತ್ರದಲ್ಲಿ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಉಲ್ಲೇಖಿಸಲಾಗಿದೆ.
ಸದ್ಯ ಹೆಬ್ಬಾಳ ಪೊಲೀಸರಿಗೆ ಈ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡುತ್ತಿದ್ದು, ಈ ವಿಚಾರಣೆಗೆ ಸಂಬಂಧಿಸಿದಂತೆ ಸತ್ಯ ಹುಡುಕಲು ಹೆಬ್ಬಾಳ ಪೊಲೀಸರು RBIಗೆ ಪತ್ರ ಬರೆದಿದ್ದಾರೆ. ಇದಲ್ಲದೆ, ಡಾಲರ್ಗಳ ಸೀರಿಯಲ್ ನಂಬರ್ ಸಹ ಉಲ್ಲೇಖ ಮಾಡಿರುವುದು ಕಂಡು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ