newsfirstkannada.com

​​ಚಿನ್ನದ ಅಂಗಡಿ ಮಾಲೀಕರೇ ಎಚ್ಚರ! ಈ ಖತರ್ನಾಕ್​​​ ಲೇಡಿಗಳ ಕಥೆ ಓದಿದ್ರೆ ಬೆಚ್ಚಿಬೀಳ್ತೀರಾ!

Share :

02-09-2023

    ಯಾವುದೇ ಕಾರಣಕ್ಕೂ ಈ ಮಹಿಳೆಯರ ಬಗ್ಗೆ ನಿರ್ಲಕ್ಷ್ಯ ಬೇಡ

    ಸದ್ದಿಲ್ಲದೆ ಮಾಲೀಕರಿಗೆ ಗೊತ್ತಿಲ್ಲದ ಹಾಗೇ ಗೋಲ್ಡ್ ಎಗರಿಸ್ತಾರೆ!

    ಚಿನ್ನದ ಅಂಗಡಿ ಮಾಲೀಕರೇ ಇವರ ಬಗ್ಗೆ ಎಚ್ಚರವಹಿಸಲೇಬೇಕು

ಬೆಂಗಳೂರು: ಕೆದರಿರೋ ಕೂದಲು.. ಬಾಡಿರೋ ಮುಖ.. ಅಮಾಯಕಳಂತೆ ನಿಂತಿರೋ ಈಕೆ ಹೆಸರು ರತ್ನ ವೇಡಿವೇಲು.. ತನ್ನದ್ದೇನು ತಪ್ಪೇ ಇಲ್ಲದಂತೆ ನಗ್ತಾ ಫೋಟೋಗೆ ಫೋಸ್​​ ಕೊಟ್ಟಿರೋ ಈಕೆ ಹೆಸ್ರು ಕೃಷ್ಣವೇಣಿ. ​​ಇವರಿಬ್ಬರು ಮೂಲತಃ ತಮಿಳುನಾಡಿನ ನಿವಾಸಿಗಳು.. ಹಲವು ಠಾಣೆಗೆ ಬೇಕಾಗಿರೋ ಖತರ್ನಾಕ್​​ ಲೇಡಿಗಳು.. ಬರೋಬ್ಬರಿ 10 ವರ್ಷದ ನಂತರ ಸಾಕ್ಷಿ ಸಮೇತ ಪೊಲೀಸರ ಕೈಯಲ್ಲಿ ಲಾಕ್​ ಆಗ್ಬಿಟ್ಟಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಈ ಲೇಡಿ ಕೇಡಿಗಳು ಚಿನ್ನದಂಗಡಿಗೆ ಹೀಗೆ ಎಂಟ್ರಿ ಕೊಡ್ತಾರೆ. ನಕಲಿ ಚಿನ್ನದೊಂದಿಗೆ ಬರೋ ಈ ಚಾಲಾಕಿಗಳು, ಚಿನ್ನದ ಬಾಕ್ಸ್​​ ಓಪನ್​ ಮಾಡ್ತಾರೆ. ಬಲ ಕೈಯಲ್ಲಿ ಗೋಲ್ಡ್​​​​​ ರಿಂಗ್​ ಎಗರಿಸಿದ್ರೆ, ಎಡಗೈಯಲ್ಲಿ ಸಲೀಸಾಗಿ ರೋಲ್ಡ್​​ ಗೋಲ್ಡ್​​ ಅನ್ನ ಅದೇ ಜಾಗದಲ್ಲಿ ಇಟ್ಟು ​ಯಾಮಾರಿಸಿಯೇ ಬಿಡ್ತಾರೆ.

ಬೆಂಗಳೂರಿನ ಚಿನ್ನದ ಅಂಗಡಿಗಳನ್ನೇ ಹೆಚ್ಚಾಗಿ ಟಾರ್ಗೆಟ್​​ ಮಾಡ್ತಿದ್ದ ಈ ಚಾಲಾಕಿಯರು, ಎಂದಿನಂತೆ ಅಂದೂ ಸಹ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ರು. ಯಾವಾಗ ಅಂಗಡಿ ಮಾಲೀಕ ಬನಶಂಕರಿ ಪೊಲೀಸ್​ ಮೆಟ್ಟಿಲೇರಿದ್ನೋ ಈ ಸಿಸಿಟಿವಿ ಪತ್ತೆಯಾಗಿದ್ದು, ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಅದೇನೆ ಇರ್ಲಿ, ಇಂತಹ ಕಿಲಾಡಿಗಳ ಬಗ್ಗೆ ಒಡವೆ ಅಂಗಡಿ ಮಾಲೀಕರು ಎಚ್ಚರವಹಿಸಿ ಅನ್ನೋದು ನಮ್ಮ ಕಳಕಳಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

​​ಚಿನ್ನದ ಅಂಗಡಿ ಮಾಲೀಕರೇ ಎಚ್ಚರ! ಈ ಖತರ್ನಾಕ್​​​ ಲೇಡಿಗಳ ಕಥೆ ಓದಿದ್ರೆ ಬೆಚ್ಚಿಬೀಳ್ತೀರಾ!

https://newsfirstlive.com/wp-content/uploads/2023/09/Crime_1.jpg

Load More