ಹಳಿ ತಪ್ಪಿದ ಸುಹೈಲ್ ದೇವ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್
ರಾತ್ರಿ 9 ಗಂಟೆಗೆ ನಿಲ್ದಾಣದಿಂದ ಹೊರಡ್ತಿದ್ದಂತೆಯೇ ಅನಾಹುತ
ರೈಲು ಅಪಘಾತದ ಬಗ್ಗೆ ಅಧಿಕಾರಿಗಳು ಹೇಳಿದ್ದೇನು?
ನಿನ್ನೆ ತಡರಾತ್ರಿ ಉತ್ತರ ಪ್ರದೇಶದಲ್ಲಿ ಚಲಿಸುತ್ತಿರುವ ರೈಲೊಂದು ಹಳಿ ತಪ್ಪಿದೆ. ಸುಹೈಲ್ ದೇವ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (Suhaildev Express train) ಗಾಜಿಪುರದಿಂದ ಹೊರಟು ಆನಂದ ವಿಹಾರ್ಗೆ ಚಲಿಸುತ್ತಿರವಾಗ ಘಟನೆ ನಡೆದಿದೆ.
ಇನ್ನು ಪ್ರಯಾಗ್ ರಾಜ್ ನಿಲ್ದಾಣದಿಂದ (Prayagraj railway station) ಹೊರಟ ರೈಲು ಸ್ವಲ್ಪ ದೂರ ಕ್ರಮಿಸುತ್ತಲೇ ರೈಲಿನ ಇಂಜಿನ್ ಮತ್ತು ಅದರ ಹಿಂದಿನ ಕೋಚ್ ಹಳಿ ತಪ್ಪಿವೆ. ರೈಲ್ವೇ ಸಿಬ್ಬಂದಿಗೆ ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯುಂಟಾಗಿರುವುದಿಲ್ಲ. ಇನ್ನೂ ಪ್ರಯಾಗ್ ರಾಜ್ ವಲಯದ ರೈಲ್ವೇ ಅಧೀಕಾರಿಗಳು ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ. ಎರಡು ಕೋಚ್ಗಳು ಹಳಿ ತಪ್ಪಿವೆ. ಯಾವುದೇ ಅನಾಹುತ ಸಂಭವಿಸಿಲ್ಲ, ಆತಂಕಕ್ಕೆ ಒಳಗಾಗುವುದು ಬೇಡ. ಕೂಡಲೇ ಎರಡೂ ಬೋಗಿಗಳನ್ನು ಟ್ರ್ಯಾಕ್ ತರಲಾಗಿದೆ. ಎಂದಿನಂತೆ ಆ ಟ್ರ್ಯಾಕ್ನಲ್ಲಿ ರೈಲು ಸಂಚಾರ ಶುರುವಾಗಿದೆ ಎಂದು ಚೀಫ್ ಪಬ್ಲಿಕ್ ರಿಲೇಷನ್ಸ್ ಆಫೀಸರ್ ಹಿಮಾಂಶು ಶೇಖರ್ ಉಪಧ್ಯಾಯ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ