newsfirstkannada.com

ಅತಿವೇಗವಾಗಿ ಬಂದ 2 ಲಾರಿಗಳು ಮುಖಾಮುಖಿ ಡಿಕ್ಕಿ.. ಧಗ ಧಗ ಬೆಂಕಿಯಲ್ಲಿ ಸಜೀವ ದಹನವಾದ ಡ್ರೈವರ್ಸ್​

Share :

19-11-2023

    ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ ವೇಳೆ ಭೀಕರ ಆ್ಯಕ್ಸಿಡೆಂಟ್

    ನೋಡ ನೋಡ್ತಿದ್ದಂತೆ ಬೆಂಕಿಯಿಂದ ಹೊತ್ತಿ ಉರಿದ ಲಾರಿಗಳು

    ಸ್ಥಳಕ್ಕೆ ಪೊಲೀಸರು ಬರುವಷ್ಟರಲ್ಲಿ ಸಜೀವ ದಹನವಾಗಿದ್ದ ಚಾಲಕರು

ಚಂಡೀಗಢ: ರಸ್ತೆಯಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದ 2 ಲಾರಿಗಳು ಭೀಕರವಾಗಿ ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವವಾಗಿ ದಹನವಾಗಿದ್ದಾರೆ. ಈ ಘಟನೆಯು ಹರಿಯಾಣದ ಯುಮುನಾ ನಗರದ ಪಿಪ್ಲಿ ಗ್ರಾಮದ ಬಳಿ ಇರುವ ಹೆದ್ದಾರಿಯಲ್ಲಿ ನಡೆದಿದೆ.

ನಗರದ ಪಿಪ್ಲಿ ಗ್ರಾಮದ ಬಳಿ ಇರುವ ಹೈವೇಯಲ್ಲಿ ಎರಡು ಲಾರಿಗಳು ಅತಿ ವೇಗವಾಗಿ ಚಲಿಸುತ್ತಿದ್ದವು. ಈ ವೇಳೆ ಒಂದಕ್ಕೊಂದು ಮುಖಾಮುಖಿ ಡಿಕ್ಕಿಯಾಗಿವೆ. ಇದರಿಂದ ಕ್ಷಣಾರ್ಧದಲ್ಲೇ ಎರಡು ಲಾರಿಗೆ ಬೆಂಕಿ ಆವರಿಸಿಕೊಂಡಿದೆ. ಹೀಗಾಗಿ ಅದರೊಳಗಿದ್ದ ಚಾಲಕರಿಬ್ಬರು ಸಜೀವವಾಗಿ ದಹನಗೊಂಡಿದ್ದಾರೆ.

ಘಟನೆಯು ನಿನ್ನೆ ರಾತ್ರಿ ನಡೆದಿದ್ದು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಲಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಬಳಿಕ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತಿವೇಗವಾಗಿ ಬಂದ 2 ಲಾರಿಗಳು ಮುಖಾಮುಖಿ ಡಿಕ್ಕಿ.. ಧಗ ಧಗ ಬೆಂಕಿಯಲ್ಲಿ ಸಜೀವ ದಹನವಾದ ಡ್ರೈವರ್ಸ್​

https://newsfirstlive.com/wp-content/uploads/2023/11/Truck_Collision.jpg

Load More