ಕೀಪಿಂಗ್ ಸಮರ್ಥವಾಗಿ ನಿರ್ವಹಿಸಿವ KL ರಾಹುಲ್ಗೆ ಸ್ಥಾನ..?
ಇದೀಗ ವಿಕೆಟ್ ಕೀಪರ್ ಸ್ಲಾಟ್ನ ಫೈಟ್ ಕುತೂಹಲ ಕೆರಳಿಸಿದೆ
ಧೃವ್ ಜುರೇಲ್ಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಸಿಗುತ್ತಾ?
ಇರೋದೆ ಎರಡು ಸ್ಥಾನ.. ಪೈಪೋಟಿ ಏರ್ಪಟ್ಟಿರೋದು ಐವರು ಸ್ಟಾರ್ಗಳ ನಡುವೆ. ಟೀಮ್ ಇಂಡಿಯಾದ ಟೆಸ್ಟ್ ತಂಡದ ಒಂದೊಂದು ಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದೆ. ಅದ್ರಲ್ಲೂ ವಿಕೆಟ್ ಕೀಪರ್ ಸ್ಥಾನದ ಫೈಟ್ ತೀವ್ರ ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾ ಪರ ಎಲ್ರೂ ಪರ್ಫಾಮ್ ಮಾಡಿ ಮಿಂಚಿದವರೆ. ಹೀಗಾಗಿ ಬೆಸ್ಟ್ಗಳ ನಡುವೆ ದಿ ಬೆಸ್ಟ್ ಆಯ್ಕೆ, ಸೆಲೆಕ್ಟರ್ಸ್ ಟೆನ್ಶನ್ ಹೆಚ್ಚಿಸಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ 9 ಪ್ಲೇಯರ್ಸ್ ಫಿಕ್ಸ್.. ಉಳಿದ 6 ಸ್ಥಾನಕ್ಕೆ ಆಟಗಾರರ ಮಧ್ಯೆ ಬಿಗ್ ಫೈಟ್!
ಟೀಮ್ ಇಂಡಿಯಾದ ಟೆಸ್ಟ್ ಸೀಸನ್ ಆರಂಭಕ್ಕೂ ಮುನ್ನ ನಡೀತಾ ಇರೋ ದುಲೀಪ್ ಟ್ರೋಫಿ ಟೂರ್ನಿ ಸದ್ಯ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ಬಾಂಗ್ಲಾದೇಶ ಸರಣಿಯನ್ನೂ ಸೇರಿ ಮುಂದಿನ 4 ತಿಂಗಳಲ್ಲಿ ಟೀಮ್ ಇಂಡಿಯಾ ಒಟ್ಟು 10 ಟೆಸ್ಟ್ ಪಂದ್ಯಗಳನ್ನ ಆಡಲಿದ್ದು, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅದ್ರಲ್ಲೂ, ವಿಕೆಟ್ ಕೀಪರ್ ಸ್ಲಾಟ್ನ ಫೈಟ್ ಎಲ್ಲರ ಕುತೂಹಲವನ್ನ ಕೆರಳಿಸಿದೆ. ಯಾಕಂದ್ರೆ, ಇರೋ 2 ಸ್ಥಾನಕ್ಕಾಗಿ ಐವರು ಸ್ಟಾರ್ ಆಟಗಾರರು ರೇಸ್ಗಿಳಿದಿದ್ದಾರೆ.
ಇದನ್ನೂ ಓದಿ: 8 ತಿಂಗಳಿಂದ ಫಾರಿನ್ನಲ್ಲಿರೋ ಕೊಹ್ಲಿ.. ‘ವಿರುಷ್ಕಾ’ ಜೋಡಿ ಲಂಡನ್ನಲ್ಲಿ ಇರಲು ಇವೆ 5 ಕಾರಣ?
ಕಮ್ಬ್ಯಾಕ್ ಸ್ಟಾರ್ ರಿಷಬ್ ಪಂತ್ ಮೇಲೆ ಎಲ್ಲರ ಕಣ್ಣು.!
3 ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾ ಖಾಯಂ ವಿಕೆಟ್ ಕೀಪರ್ ಆಗಿದ್ದ ರಿಷಬ್ ಪಂತ್ ಕೊನೆ ಟೆಸ್ಟ್ ಪಂದ್ಯವನ್ನಾಡಿದ್ದು, ಡಿಸೆಂಬರ್ 22, 2022ರಂದು.! ಭೀಕರ ಅಪಘಾತದಿಂದ ಚೇತರಿಸಿಕೊಂಡು ಸದ್ಯ ವೈಟ್ ಬಾಲ್ ಕ್ರಿಕೆಟ್ ಮರಳಿರೋ ಪಂತ್, ಇದೀಗ ರೆಡ್ ಬಾಲ್ ಫಾರ್ಮೆಟ್ಗೆ ಕಮ್ಬ್ಯಾಕ್ ಮಾಡೋ ತವಕದಲ್ಲಿದ್ದಾರೆ. ಸುಮಾರು 1 ವರ್ಷ 8 ತಿಂಗಳ ಬಳಿಕ ಟೆಸ್ಟ್ ತಂಡಕ್ಕೆ ಕಮ್ಬ್ಯಾಕ್ ಮಾಡೋ ಕನಸು ಕಾಣ್ತಿದ್ದಾರೆ. ಆದ್ರೆ, ಪಂತ್ ಕಮ್ಬ್ಯಾಕ್ ಹಾದಿ ಅಷ್ಟು ಸುಲಭದ್ದಿಲ್ಲ. ತೀವ್ರ ಪೈಪೋಟಿಯಿದೆ. ಹೀಗಾಗಿ ದುಲೀಪ್ ಟ್ರೋಫಿಯಲ್ಲಿ ಸಾಮರ್ಥ್ಯ ಸಾಬೀತು ಪಡಿಸಬೇಕಿದೆ.
ದುಲೀಪ್ ಟ್ರೋಫಿಯಲ್ಲಿ ದೃವ್ ಜುರೇಲ್ಗೆ ಬಿಗ್ ಟಾಸ್ಕ್.!
ಈ ವರ್ಷದ ಆರಂಭದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಧೃವ್ ಜುರೇಲ್ ಮೋಡಿ ಮಾಡಿದ್ರು. ಚುರುಕಿನ ವಿಕೆಟ್ ಕೀಪಿಂಗ್ ಸ್ಕಿಲ್ನಿಂದ ಮ್ಯಾನೇಜ್ಮೆಂಟ್ ಮನ ಗೆದ್ದಿದ್ರು. ಜೊತೆಗೆ ಬ್ಯಾಟಿಂಗ್ನಲ್ಲೂ ಜುರೇಲ್ ಮಿಂಚಿದ್ರು. ಡೆಬ್ಯೂ ಸರಣಿಯಲ್ಲಿ ಮಿಂಚಿ ಭರವಸೆ ಹುಟ್ಟು ಹಾಕಿದ್ರು ನಿಜ. ಆದ್ರೀಗ ಮತ್ತೆ ಧೃವ್ ಜುರೇಲ್ ಮತ್ತೆ ಟೀಮ್ ಇಂಡಿಯಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಬೇಕಂದ್ರೆ, ದುಲೀಪ್ ಟ್ರೋಫಿ ಪರ್ಫಾಮೆನ್ಸ್ ನಿರ್ಣಾಯಕವಾಗಲಿದೆ.
ಕೀಪರ್ ಕೋಟಾದಲ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಕಿಶನ್.!
ಬಿಸಿಸಿಐ ಸೂಚನೆಯನ್ನೇ ಗಾಳಿಗೆ ತೂರಿದ್ದ ಕಿಶನ್ ಕೊನೆಗೂ ಕೆಟ್ಟ ಮೇಲೆ ಬುದ್ದಿ ಕಲಿತು ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ದುಲೀಪ್ ಟ್ರೋಫಿಯಲ್ಲಿ ಪರ್ಫಾಮ್ ಮಾಡಿ, ಟೀಮ್ ಇಂಡಿಯಾಗೆ ರೀ ಎಂಟ್ರಿ ಕೊಡೋ ಲೆಕ್ಕಾಚಾರದಲ್ಲಿದ್ದಾರೆ. ಪಂತ್ ಅಲಭ್ಯತೆಯಲ್ಲಿ ಕೀಪರ್ ಆಗಿ ಟೆಸ್ಟ್ ತಂಡದಲ್ಲಿ ಕಿಶನ್ ಖಾಯಂ ಸ್ಥಾನ ಪಡೆದಿದ್ರು. ವಿಂಡೀಸ್ ಪ್ರವಾಸದಲ್ಲಿ ಉತ್ತಮ ನೀಡಿ ಮಿಂಚಿದ್ರು. ಆದ್ರೆ, ಬಿಸಿಸಿಐ ಜೊತೆ ಕಿಶನ್ ಕಿರಿಕ್ ಮಾಡಿಕೊಂಡ ಬಳಿಕ ಎಂಟ್ರಿ ಕೊಟ್ಟ ಧೃವ್ ಜುರೇಲ್, ಮಿಂಚಿನ ಪ್ರದರ್ಶನ ನೀಡಿದ್ದಾರೆ. ಈ ಪೈಪೋಟಿಯ ನಡುವೆ ಆಯ್ಕೆಯಾಗಬೇಕಂದ್ರೆ, ಕಿಶನ್ ದುಲಿಫ್ ಟ್ರೋಫಿಯಲ್ಲಿ ದಿ ಬೆಸ್ಟ್ ಪರ್ಫಾಮೆನ್ಸ್ ನೀಡಬೇಕಿದೆ.
ಕೀಪರ್ ಕೋಟಾದ ರೇಸ್ನಲ್ಲಿ ಕನ್ನಡಿಗ ರಾಹುಲ್.!
ಪಂತ್ ಅಲಭ್ಯತೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಟೆಸ್ಟ್ನಲ್ಲೂ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಕೂಡ ರಾಹುಲ್, ವಿಕೆಟ್ ಕೀಪಿಂಗ್ ಸ್ಕಿಲ್ಗೆ ಇಂಪ್ರೆಸ್ ಆಗಿತ್ತು. ಬ್ಯಾಟಿಂಗ್ನಲ್ಲಿ ಫೇಲ್ ಆದ್ರೂ, ಕೀಪರ್ ಕೋಟಾದಲ್ಲಿ ರಾಹುಲ್ಗೆ ಸ್ಥಾನ ಫಿಕ್ಸ್ ಆಗಿತ್ತು. ಆದ್ರೆ, ಇದೀಗ ಕೀಪರ್ ಸ್ಥಾನಕ್ಕೆ ಬರೋಬ್ಬರಿ ಐವರ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ದುಲೀಪ್ ಟ್ರೋಫಿಯಲ್ಲಿ ಮಿಂಚಿದ್ರೆ ಮಾತ್ರ ರಾಹುಲ್ಗೆ ಆಯ್ಕೆ ಸಮಿತಿ ಮಣೆ ಹಾಕಲಿದೆ.
ಸಿಕ್ಕೆಲ್ಲ ಅವಕಾಶಗಳನ್ನ ಕೈ ಚೆಲ್ಲಿರುವ ಕೆ.ಎಸ್ ಭರತ್ ಕೂಡ ಕೊನೆಯ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆದ್ರೆ, ಫ್ಲಾಪ್ ಶೋ ನೀಡಿದ ಭರತ್ಗೆ ಮತ್ತೆ ಟೀಮ್ ಇಂಡಿಯಾ ಡೋರ್ ತೆಗೆಯೋದು ಅನುಮಾನವೇ. ಹಾಗಂತ, ಸಾಲಿಡ್ ಪರ್ಫಾಮೆನ್ಸ್ ನೀಡಿದ್ರೆ, ಚಾನ್ಸ್ ಸಿಗೋ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?
ವಿಕೆಟ್ ಕೀಪರ್ ಕೋಟಾದಲ್ಲಿ ಟೀಮ್ ಇಂಡಿಯಾ ಎಂಟ್ರಿ ಕೊಡಲು, ಐವರು ಬಲಿಷ್ಠರ ನಡುವೆ ಪೈಪೋಟಿ ಏರ್ಪಟ್ಟಿದೆ. ಐವರ ಪೈಕಿ ಚಾನ್ಸ್ ಸಿಗೋದು ಇಬ್ಬರಿಗೆ ಮಾತ್ರ. ಆ ಇಬ್ಬರು ಅದೃಷ್ಟವಂತರು ಯಾರು ಅನ್ನೋದು ದುಲೀಪ್ ಟ್ರೋಫಿ ಪರ್ಫಾಮೆನ್ಸ್ ಮೇಲೆ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ